Crime News: ಗುದನಾಳಕ್ಕೆ ಏರ್‌ ಕಂಪ್ರೆಸ್ಸರ್‌ ಪೈಪ್‌ ತುರುಕಿದ ಸಹ ಉದ್ಯೋಗಿ; ಕಾರ್ಮಿಕ ಸಾವು

ಉತ್ತರ ಪ್ರದೇಶ: (Crime News) ಸಹ ಉದ್ಯೋಗಿಯೊಬ್ಬ ಪ್ರ್ಯಾಂಕ್‌ ಮಾಡಲು ಹೋಗಿ ಗುದನಾಳಕ್ಕೆ ಏರ್‌ ಕಂಪ್ರೆಸ್ಸರ್‌ ಪೈಪ್‌ ತುರುಕಿ ಕಾರ್ಮಿಕನೋರ್ವ ಆಂತರಿಕ ಗಾಯಗಳಿಂದ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದ ರಾನಿಯಾ ಎಂಬಲ್ಲಿ ನಡೆದಿದೆ. ಕಾನ್ಪುರ ಮೂಲದ ದಯಾಶಂಕರ್‌ ದುಬೆ ಎನ್ನುವಾತ ಮೃತ ವ್ಯಕ್ತಿ.

“ಬೆಕ್ಕಿಗೆ ಆಟ ಇಲಿಗೆ ಪ್ರಾಣಸಂಕಟ” ಎಂಬ ಮಾತು ಸುಳ್ಳಲ್ಲ. ತಮಾಷೆ ಮಾಡಲು ಹೋಗಿ ಜೀವ(Crime News) ಕಳೆದುಕೊಂಡ ಉದಾಹರಣೆಗಳು ತುಂಬಾನೆ ಇವೆ. 16 ವರ್ಷದ ಯುವಕನ ಗುದನಾಳಕ್ಕೆ ಆತನ ಸ್ನೇಹಿತ ಏರ್ ಕಂಪ್ರೆಸರ್ ಪೈಪ್ ತುರುಕಿ ಯುವಕ ಸಾವನ್ನಪ್ಪಿದ್ದ ಘಟನೆ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿ ಕಳೆದ ಜುಲೈನಲ್ಲಿ ನಡೆದಿತ್ತು. ಇದೀಗ ಕಾನ್ಪುರದಲ್ಲಿ ಅಂತಹದೇ ಘಟನೆ ನಡೆದಿದ್ದು, ತಮಾಷೆಗಾಗಿ ಸಹ ಉದ್ಯೋಗಿಯೊಬ್ಬ ಕಾರ್ಮಿಕನ ಗುದನಾಳಕ್ಕೆ ಏರ್‌ ಕಂಪ್ರೆಸ್ಸರ್‌ ಪೈಪ್‌ ತುರುಕಿದ್ದು, ಆಂತರಿಕ ಗಾಯಗಳಿಂದ ಆತ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಏರ್‌ ಕಂಪ್ರೆಸ್ಸರ್‌ ಪೈಪ್‌ ತುರುಕಿದ ನಂತರ ವ್ಯಕ್ತಿ ಪ್ರಜ್ಞಾಹೀನರಾಗಿದ್ದಾರೆ. ನಂತರ ಅವರ ಸ್ಥಿತಿ ಹದಗೆಟ್ಟಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ದುಬೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ವರದಿಗಳಿಂದ ತಿಳಿದು ಬಂದಿದೆ.

ಗುದನಾಳದೊಳಗೆ ಗಾಳಿಯ ಹಠಾತ್ ಸ್ಫೋಟದಿಂದಾಗಿ ಉಂಟಾದ ಆಂತರಿಕ ಗಾಯಗಳಿಂದಾಗಿ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಪೋಲೀಸರು ತಿಳಿಸಿದ್ದಾರೆ. ದುಬೆ ಆಂತರಿಕ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ವರದಿ ಕೂಡ ದೃಡಪಡಿಸಿದೆ.

ಇದನ್ನೂ ಓದಿ : Murder Case : ಪ್ರೀತಿಸಿದ ಹುಡುಗಿಯನ್ನು ಕೊಂದು ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ ಪ್ರಿಯತಮ

ಇದನ್ನೂ ಓದಿ : Rape College Student : ಎನರ್ಜಿ ಮಾತ್ರೆ ನೀಡಿ ಅತ್ಯಾಚಾರ : ಕಾಲೇಜು ವಿದ್ಯಾರ್ಥಿನಿ ಸಾವು, ಆರೋಪಿ ಅರೆಸ್ಟ್

ಇದನ್ನೂ ಓದಿ : Human Sacrifice: ಸತ್ತ ಅಪ್ಪನನ್ನು ಬದುಕಿಸಲು 2 ತಿಂಗಳ ಹಸುಗೂಸನ್ನೇ ಬಲಿ ಕೊಡಲು ಮುಂದಾದ ಮಹಿಳೆ.. ಆಮೇಲೆ ನಡೆದಿದ್ದೇ ಬೇರೆ..

ದುಬೆ ಅವರ ದೇಹಕ್ಕೆ ಪೈಪ್ ತುರುಕಿದ್ದ ವ್ಯಕ್ತಿಯ ವಿರುದ್ಧ ರಾನಿಯಾ ಪೊಲೀಸರಿಗೆ ಅವರ ಕುಟುಂಬ ಕೊಲೆ ದೂರು ನೀಡಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರೋಪವು ಸಾಬೀತಾದರೆ, ಐಪಿಸಿ 304 ರ ಅನ್ವಯ ಪ್ರಕರಣ ದಾಖಲಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : Superstar Krishna passed away: ನಟ ಮಹೇಶ್​ ಬಾಬು ತಂದೆ ಸೂಪರ್​ ಸ್ಟಾರ್​ ಕೃಷ್ಣ ಹೃದಯಾಘಾತದಿಂದ ವಿಧಿವಶ

(Crime News) An incident took place in Rania, Kanpur, Uttar Pradesh, where a fellow employee pushed an air compressor pipe into his rectum as a prank. The deceased was identified as Dayashankar Dubey, a native of Kanpur.

Comments are closed.