ಸೋಮವಾರ, ಏಪ್ರಿಲ್ 28, 2025
HomeCrimeCrime News : ಬಿರಿಯಾನಿಯಲ್ಲಿ ಪಾಲು ಕೇಳಿದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ಪತಿ !

Crime News : ಬಿರಿಯಾನಿಯಲ್ಲಿ ಪಾಲು ಕೇಳಿದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ಪತಿ !

- Advertisement -

ಚೆನ್ನೈ : (Crime News)ನಿವೃತ್ತ ರೈಲ್ವೇ ಉದ್ಯೋಗಿಯೋರ್ವರು ತಾನು ತಂದಿದ್ದ ಬಿರಿಯಾನಿಯನ್ನು ಪತ್ನಿಗೆ ಕೊಡಲಿಲ್ಲ ಎಂಬ ಕಾರಣಕ್ಕೆ ಇಬ್ಬರ ನಡುವೇ ಜಗಳ ನಡೆದು ಪತಿಯೇ ಪತ್ನಿಗೆ ಬೆಂಕಿ ಹಚ್ಚಿದ ಆಘಾತಕಾರಿ ಘಟನೆ ತಮಿಳುನಾಡಿನ ಚೆನ್ನೈನ ಐನಾವರಂ ನಲ್ಲಿ ನಡೆದಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಪತ್ನಿ ಗಂಡನ್ನನು ಗಟ್ಟಿಯಾಗಿ ತಪ್ಪಿಕೊಂಡಿದ್ದಾಳೆ. ಇದರಿಂದಾಗಿ ಪತಿಯೂ ಬೆಂಕಿ ತಗುಲಿ ಇಬ್ಬರೂ ಸಾವನ್ನಪ್ಪಿದ್ದಾರೆ.

ಚೆನ್ನೈನ ಐನಾವರಂ ನಿವಾಸಿಯಾಗಿರುವ ಕರುಣಾಕರನ್ (74 ವರ್ಷ) ಅವರು ತಮ್ಮ ಪತ್ನಿ ಪದ್ಮಾವತಿ (70 ವರ್ಷ ) ಅವರೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ದಂಪತಿಯ 4 ಮಕ್ಕಳು ನಗರದ ವಿವಿಧ ಭಾಗಗಳಲ್ಲಿ ನೆಲೆಸಿದ್ದರು. ಇದರಿಂದ ದಂಪತಿಗಳು ಒಂಟಿತನ ಮತ್ತು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಆಗೊಮ್ಮೆ ಈಗೊಮ್ಮೆ ಅವರ ಮಕ್ಕಳು ತಂದೆ-ತಾಯಂದಿರನ್ನು ಭೇಟಿ ಮಾಡಲು ಬರುತ್ತಿದ್ದರು. ಕರುಣಾಕರನ್ ಮತ್ತು ಅವರ ಪತ್ನಿ ನಡುವೆ ಯಾವಾಗಲೂ ಜಗಳ (Crime News)ನಡೆಯುತ್ತಲೇ ಇರುತ್ತದೆ ಎಂದು ನೆರೆಹೊರೆಯವರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಕರುಣಾಕರನ್ ತಂದಿದ್ದ ಬಿರಿಯಾನಿಯನ್ನು ಪತ್ನಿಗೆ ನೀಡಿರಲಿಲ್ಲ. ಪತಿ ಬಿರಿಯಾನಿ ಕೊಡದೆ ಒಂಟಿಯಾಗಿ ತಿನ್ನುತ್ತಿರುವುದು ಪದ್ಮಾವತಿಗೆ ಸಿಟ್ಟು ಬಂದು ಬಿರಿಯಾನಿಯನ್ನೂ ಕೇಳಿದರು. ಇದೇ ವಿಚಾರವಾಗಿ ಇಬ್ಬರ ನಡುವೆ ತೀವ್ರ ಜಗಳ ನಡೆದು ಕರುಣಾಕರನ್ ಪತ್ನಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ.

ಇದನ್ನೂ ಓದಿ : Muruga Mutt : ಮಠದಲ್ಲಿ ಪೋಟೋಕಳ್ಳತನ ಪ್ರಕರಣ: ಮಾಜಿ ಆಡಳಿತಾಧಿಕಾರಿ ಬಸವರಾಜನ್ ಬಂಧನ, ಪತ್ನಿಗಾಗಿ ಶೋಧ

ಇದನ್ನೂ ಓದಿ : Murugha Sharanaru Statement : ನನ್ನ ಕೊಠಡಿಗೆ ವಿದ್ಯಾರ್ಥಿನಿಯರಿಗೆ ಪ್ರವೇಶವೇ ಇಲ್ಲ, ದೌರ್ಜನ್ಯ ಎಸಗಿಲ್ಲ : ಮುರುಘಾ ಶ್ರೀ ಹೇಳಿಕೆ

ಬೆಂಕಿ ಹರಡುತ್ತಿದ್ದಂತೆ ಪದ್ಮಾವತಿ ಪತಿಯನ್ನು ಅಪ್ಪಿಕೊಂಡಿದ್ದಾಳೆ. ಆಗ ಕರುಣಾಕರನ್ ಅವರಿಗೂ ಬೆಂಕಿ ತಗುಲಿದೆ. ಜೋರಾಗಿ ಕಿರುಚಾಟ ಕೇಳಿದ ಕೂಡಲೆ ನೆರೆಹೊರೆಯವರು ಬಂದಿದ್ದು , ಪ್ರಜ್ಞೆ ತಪ್ಪಿ ಬಿದ್ದಿದ್ದ ದಂಪತಿಯನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ . ಪದ್ಮಾವತಿ ಅವರಿಗೆ 65% ಮತ್ತು ಕರುಣಾಕರನ್ ಅವರಿಗೆ 50% ಸುಟ್ಟ ಗಾಯಗಳಾಗಿವೆ ಎಂದು ಸರ್ಕಾರಿ ಕಿಲ್ಪಾಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (KMCH) ವೈದ್ಯರು ತಿಳಿಸಿದ್ದಾರೆ. ದೇಹ ಸುಟ್ಟು ಕರಕಲಾಗಿರುವುದನ್ನು ಕಂಡು ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇದನ್ನೂ ಓದಿ : Bus Accident : ಬಸ್‍ಗಳ ನಡುವೆ ಭೀಕರ ಅಪಘಾತ ; ಮೂವರು ಸಾವು, 17 ಮಂದಿಗೆ ಗಾಯ

ಆದರೆ, ಆಸ್ಪತ್ರೆ ವೈದ್ಯರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿರುವುದನ್ನು ನೋಡಿ ತಡೆದಿದ್ದರಿಂದ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳವಾರ ಪದ್ಮಾವತಿಗೆ ಪ್ರಜ್ಞೆ ಬಂದ ನಂತರ ಮನೆಯಲ್ಲಿ ಏನಾಯಿತು ಎಂಬ ಸತ್ಯ ಬಯಲಾಗಿದೆ. ಘಟನೆಯ ಬಗ್ಗೆ ಪೊಲೀಸರಿಗೆ ತಿಳಿಸಿದ ಕೆಲವೇ ಗಂಟೆಗಳಲ್ಲಿ ಆಕೆ ಸಾವನ್ನಪ್ಪಿದ್ದಾಳೆ. ಆದರೆ ಪತಿ ಕರುಣಾಕರ್ ಚಿಕಿತ್ಸೆ ಫಲಕಾರಿಯಾಗದೇ ನಂತರದಲ್ಲಿ ಮೃತಪಟ್ಟಿದ್ದಾರೆ.

(Crime News) A shocking incident took place in Ainavaram, Chennai, Tamil Nadu, where a retired railway employee did not give the biryani he had brought to his wife and a fight broke out between them and the husband set his wife on fire. As the fire ignites, the wife desperately misses her husband. As a result, the husband also caught fire and both died.

RELATED ARTICLES

Most Popular