ಸೋಮವಾರ, ಏಪ್ರಿಲ್ 28, 2025
HomeCrimeCrime News : ರೈಲಿನಲ್ಲಿ ವಿಷ ಬೆರೆಸಿದ ಸಿಹಿತಿಂಡಿ ಸೇವಿಸಿ ಇಬ್ಬರ ಸಾವು, ಆರು ಮಂದಿ...

Crime News : ರೈಲಿನಲ್ಲಿ ವಿಷ ಬೆರೆಸಿದ ಸಿಹಿತಿಂಡಿ ಸೇವಿಸಿ ಇಬ್ಬರ ಸಾವು, ಆರು ಮಂದಿ ಅಸ್ವಸ್ಥ

- Advertisement -

ಆಗ್ರಾ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ವಿಷ ಬೆರೆಸಿದ ಆಹಾರ ಸೇವಿಸಿ (Crime News) ಇಬ್ಬರು ಸಾವನ್ನಪ್ಪಿದ್ದು, ಆರು ಮಂದಿ ಅಸ್ವಸ್ಥಗೊಂಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ಪಾಟ್ನಾ ಕೋಟಾ ಎಕ್ಸ್‌ಪ್ರೆಸ್‌ನಲ್ಲಿ ನಡೆದಿದೆ. ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪಾಟ್ನಾ ಕೋಟಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಈ ಘಟನೆ ಸಂಭವಿಸಿದೆ. ಸಾವನ್ನಪ್ಪಿದವರು ಹಾಗೂ ಅಸ್ವಸ್ಥಗೊಂಡ ರೈಲ್ವೆ ಪ್ರಯಾಣಿಕರು ಛತ್ತೀಸ್‌ಗಢದ ರಾಯ್‌ಪುರದಿಂದ ತೆರಳುತ್ತಿದ್ದರು. ಒಟ್ಟು 90 ಪ್ರಯಾಣಿಕರಿದ್ದ ಬೋಗಿಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಉಳಿದಂತೆ ಐವರು ಅಸ್ವಸ್ಥರನ್ನು ಆಗ್ರಾದ ರೈಲ್ವೆ ಇಲಾಖೆಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆರನೇ ವ್ಯಕ್ತಿಯನ್ನು ಎಸ್‌ಎನ್‌ ವೈದ್ಯಕೀಯ ಕಾಲೇಜಿಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.

ರೈಲಿನಲ್ಲಿ ಪ್ರಯಾಣಿಕರು ಅಸ್ವಸ್ಥಗೊಂಡಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆಯೆ ವೈದ್ಯರ ತಂಡ ಸ್ಥಳಕ್ಕೆ ದಾವಿಸಿ ಚಿಕಿತ್ಸೆಯನ್ನು ನೀಡಿದೆ. ಆದರೂ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಮೃತಪಟ್ಟಿದ್ದಾರೆ ಎಂದು ರೈಲ್ವೆ ಆಗ್ರಾದ ಸಹಾಯಕ ವಾಣಿಜ್ಯ ವ್ಯವಸ್ಥಾಪಕ ವೀರೇಂದ್ರ ಸಿಂಗ್‌ ತಿಳಿಸಿದ್ದಾರೆ. ಪ್ರಯಾಣಿಕರು ಅಸ್ವಸ್ಥರಾಗಿರುವ ಬಗ್ಗೆ ರೈಲ್ವೆ ಸಹಾಯವಾಣಿ ಸಂಖ್ಯೆಗೆ ಕರೆ ಬಂದಿತ್ತು. ಎಲ್ಲರೂ ಕೂಡ ಎಸಿ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದರು. ಸುಮಾರು 62 ವರ್ಷ ವಯಸ್ಸಿನ ಮಹಿಳೆ ಮತ್ತು ಸುಮಾರು 65 ವರ್ಷ ವಯಸ್ಸಿನ ಪುರುಷ ಮೃತಪಟ್ಟಿದ್ದಾರೆ ಎಂದು ಆಗ್ರಾ ಕ್ಯಾಂಟ್ ರೈಲ್ವೇ ವೈದ್ಯರು ಘೋಷಿಸಿದ್ದಾರೆ. ಒಂದೇ ಗುಂಪಿನ ಐವರು ಪ್ರಯಾಣಿಕರಿಗೆ (ಆಸ್ಪತ್ರೆಗಳಲ್ಲಿ) ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಆಗ್ರಾ ವಿಭಾಗದ ಉತ್ತರ ಮಧ್ಯ ರೈಲ್ವೆ ಪ್ರೊ.ಪ್ರಶಸ್ತಿ ಶ್ರೀವಾಸ್ತವ ತಿಳಿಸಿದ್ದಾರೆ. ಇದನ್ನೂ ಓದಿ : DRDO’s Aircraft crashes : ಚಾಲಕ ರಹಿತ ವಿಮಾನ ರೈತರ ಹೊಲದಲ್ಲಿ ಪತನ : ತಪ್ಪಿದ ಬಾರೀ ದುರಂತ

ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಆಹಾರ ವಿಷ ಅಥವಾ ನಿರ್ಜಲೀಕರಣ ಕಾರಣವೇ ಎಂಬುವುದು ತಿಳಿದು ಬಂದಿಲ್ಲ. ಆದರೆ ಮರಣೋತ್ತರ ಪರೀಕ್ಷೆಯ ನಂತರವೇ ಘಟನೆಯ ಸತ್ಯಾಸತ್ಯತೆ ಹೊರಬೀಳಲಿದೆ. ಇನ್ನು “ಝೆಹರ್ ಖುರಾನಿ” ಎಂದು ಕರೆಯಲ್ಪಡುವ ಕ್ರಿಮಿನಲ್ ಗ್ಯಾಂಗ್ ವಿಷ ಬೆರೆಸಿದ ಸಿಹಿತಿಂಡಿಗಳನ್ನು ನೀಡಿದೆಯೇ ಎಂಬ ಕುರಿತು ತನಿಖೆ ನಡೆಯುತ್ತಿದೆ. ಆದರೆ ಇಂತಹ ಯಾವುದೇ ದೂರುಗಳು ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.

Crime News: Two people died, six others fell ill after consuming poisoned sweets in the train

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular