ಲಕ್ನೋ : 9 ವರ್ಷದ ಶಾಲಾ ವಿದ್ಯಾರ್ಥಿನಿಯೋರ್ವಳಿಗೆ ಅಶ್ಲೀಲ ವಿಡಿಯೋ ಕ್ಲಿಪ್ ತೋರಿಸಿ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದಲ್ಲಿ ಶಾಲೆಯೊಂದರಲ್ಲಿ ನಡೆದಿದೆ. ಇದೀಗ ಸಂತ್ರಸ್ತ ಬಾಲಕಿಯ ತಂದೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯನನ್ನು ಪೊಲೀಸರು ಬಂಧಿಸಿದ್ದಾರೆ.
4 ನೇ ತರಗತಿಯ ವಿದ್ಯಾರ್ಥಿನಿ ಸೀತಾಪುರದ ಗೊಂಡ್ಲಾಮೌ ಬ್ಲಾಕ್‌ನಲ್ಲಿರುವ ತನ್ನ ಶಾಲೆಗೆ ತರಳಿದ್ದ ವೇಳಿಯಲ್ಲಿ ಈ ಘಟನೆ ನಡೆದಿದೆ. ಮುಖ್ಯಶಿಕ್ಷಕ ಅಪ್ರಾಪ್ತ ವಯಸ್ಸಿನ ಬಾಲಕಿ ಯನ್ನು ಶಾಲೆಯ ಆವರಣದಲ್ಲಿರುವ ಕೋಣೆಯಲ್ಲಿ ಕರೆಸಿಕೊಂಡು, ಆಕೆಗೆ ಅಸಭ್ಯ ವೀಡಿಯೊವನ್ನು ತೋರಿಸಿದ ದೌರ್ಜನ್ಯವೆಸಗಿದ್ದಾನೆ.
ಹುಡುಗಿ ಅಳುತ್ತಾ ಪ್ರತಿರೋಧ ವ್ಯಕ್ತಪಡಿಸಿದಾಗ ಆತ ಕೊಠಡಿಯನ್ನು ಒಳಗಿನಿಂದ ಲಾಕ್ ಮಾಡಿದ. ಇದಾದ ನಂತರ, ಆತ ತನ್ನ ಮೇಲೆ ಅಪ್ರಾಪ್ತ ವಯಸ್ಕನ ಮೇಲೆ ಬಲವಂತ ಮಾಡಿದನೆಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಅಪ್ರಾಪ್ತ ಬಾಲಕಿ ತನ್ನ ತಂದೆಯ ಮುಂದೆ ತನಗಾದ ಯಾತನೆಯ ಹೇಳಿದ್ದು, ನಂತರ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಲಾಗಿದೆ.
ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು, ಮುಖ್ಯೋಪಾಧ್ಯಾಯರ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯಡಿ ಸಂಬಂಧಿಸಿದ ಆರೋಪಗಳನ್ನು ಕೂಡ ಆತನ ವಿರುದ್ಧ ಹೂಡಲಾಗಿದೆ.
ಇದನ್ನೂ ಓದಿ : ಟೆಂಪೋದೊಳಗೆ ಅತ್ಯಾಚಾರ : ಮಹಿಳೆ ಸಾವು, ಓರ್ವನ ಬಂಧನ
ಇದನ್ನೂ ಓದಿ : ಮನೆ ಬಿಟ್ಟು ಓಡಿ ಹೋಗಿದ್ದ 14 ವರ್ಷದ ಬಾಲಕಿಯ ಮೇಲೆ 13 ಮಂದಿಯಿಂದ ಅತ್ಯಾಚಾರ
( School headmaster shows obscene video to 9-year-old girl and sexually assaults )