Current shock: ಪಾರಿವಾಳ ಹಿಡಿಯಲು ಹೋದವರಿಗೆ ಕರೆಂಟ್‌ ಶಾಕ್‌: ಬಾಲಕ ಸಾವು

ಬೆಂಗಳೂರು: (Current shock) ವಿದ್ಯುತ್‌ ತಂತಿ ಮೇಲೆ ಕುಳಿತಿದ್ದ ಪಾರಿವಾಳವನ್ನು ಹಿಡಿಯಲು ಹೋದಾಗ ಕರೆಂಟ್‌ ಶಾಕ್‌ ಹೊಡೆದು ಇಬ್ಬರು ಮಕ್ಕಳ ಪರಿಸ್ಥಿತಿ ಚಿಂತಾಜನಕವಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಮಕ್ಕಳಿಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಬಾಲಕ ಸುಪ್ರಿತ್‌ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಮನೆಯ ಮಹಡಿಗೆ ಬಂದ ಪಾರಿವಾಳವನ್ನು ಹಿಡಿಯವ ಆಸೆಯಿಂದ ಮಹಡಿಗೆ ಮಕ್ಕಳು ಹೋಗಿದ್ದಾರೆ. ಆಗ ಅಲ್ಲಿ ಹೈಟೆನ್ಶನ್‌ ವಿದ್ಯುತ್‌ ತಂತಿ (Current shock) ಮೇಲೆ ಪಾರಿವಾಳ ಕುಳಿತಿತ್ತು. ಅದನ್ನು ಹಿಡಿಯಲು ಇಬ್ಬರು ಬಾಲಕರು ಪ್ರಯತ್ನಿಸಿದ್ದಾರೆ. ಪಾರಿವಾಳವನ್ನು ಹಿಡಿಯಲು ಕಬ್ಬಿಣದ ರಾಡ್‌ನಿಂದ ಹೈಟೆನ್ಶನ್‌ ವಿದ್ಯುತ್‌ ತಂತಿಯನ್ನು ಸ್ಪರ್ಶಿಸಿದ್ದಾರೆ. ಕಬ್ಬಿಣ ರಾಡ್‌ ವಿದ್ಯುತ್‌ ತಂತಿಗೆ ಸ್ಪರ್ಶವಾದ ಕ್ಷಣಾರ್ಧದಲ್ಲಿ ಕರೆಂಟ್‌ ಶಾಕ್‌ ಹೊಡೆದಿದೆ. ಮಕ್ಕಳಿಬ್ಬರೂ ಸುಟ್ಟ ಗಾಯದಿಂದ ಗಂಭೀರ ಸ್ಥಿತಿಗೆ ಗುರಿಯಾಗಿದ್ದಾರು.

ಕರೆಂಟ್‌ ತೀವ್ರತೆಯಿಂದಾಗಿ ಮನೆಯ ಒಳಗೆ ಇದ್ದ ವಿದ್ಯುತ್‌ ಉಪಕರಣಗಳು ಕೂಡ ಸ್ಪೋಟಗೊಂಡಿದೆ. ಗಂಭೀರವಾಘಿ ಗಾಯಗೊಂಡಿರುವ ಮಕ್ಕಳಿಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಂದ್ರು ಎಂಬ ಬಾಲಕನಿಗೆ ಶೇಕಡಾ 90ರಷ್ಟು ಸುಟ್ಟ ಗಾಯಗಳಾಗಿದ್ದರೆ, ಸುಪ್ರೀತ್‌ಗೆ ಶೇಕಡಾ 70ರಷ್ಟು ಸುಟ್ಟಗಾಯಗಳಾಗಿತ್ತು. ಇಬ್ಬರು ಬಾಲಕರು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ಮಕ್ಕಳ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದರು. ಇದೀಗ ಸುಪ್ರಿತ್‌ ಎನ್ನುವ ಬಾಲಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾನೆ. ಬಾಲಕನ ಸಾವಿನ ವಿಷಯ ತಿಳಿಯುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ : Murder mystery: ಸೊಸೆಯ ಮೇಲೆ ಕಣ್ಣು ಹಾಕಿದ್ದ ಮಾವ ಹೆಣವಾದ; ಸುಪಾರಿ ಕೊಟ್ಟು ಬೀಗರಿಂದಲೇ ಮರ್ಡರ್..!

ಇದನ್ನೂ ಓದಿ : Gang war: ದರೋಡೆಕೋರ ರಾಜು ಥೇತ್ ಗೆ ಗುಂಡಿಕ್ಕಿ ಹತ್ಯೆ

(Current shock) When they went to catch the pigeon sitting on the electric wire, the situation of the two children was alarming due to the current shock. The two children, who were seriously injured, were being treated at Victoria Hospital. Today the boy Suprith died in the hospital after the treatment failed.

Comments are closed.