ದ.ಕ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ (ACB) ಪ್ರಕರಣದಲ್ಲಿ ಮೊದಲ ಶಿಕ್ಷೆ ಪ್ರಕಟ

ಮಂಗಳೂರು : Anti Corruption Bureau : ವರ್ಗಾವಣೆ ಅಗಿದ್ದರು ಲಂಚ ಪಡೆದು ಇಂಡಸ್ಟ್ರೀಸಿಗಳ ಪರವಾನಿಗೆ ಪತ್ರ ಮಾಡಿಕೊಟ್ಟು ಬಗ್ಗೆ ಸಾಮಾಜಿಕ ಕಾರ್ಯಕರ್ತ ನೀಡಿದ್ದ ದೂರಿನ ಹಿನ್ನಲೆಯಲ್ಲಿ ಕಛೇರಿ ಹಾಗೂ ಮನೆ ಮೇಲೆ ದಾಳಿ ಮಾಡಿದ್ದು ಹಣ ಹಾಗೂ ದಾಖಲೆಗಳನ್ನು ವಶಕ್ಕೆ ಪಡೆದು ಮಂಗಳೂರು ಕೋರ್ಟ್ ಗೆ ಜಾರ್ಜ್ ಶೀಟ್ ಸಲ್ಲಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರು. ಇಂದು ಪ್ರಕರಣದ ಆರೋಪಿಗೆ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ‌‌. ದಕ್ಷಿಣ ಕನ್ನಡ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಪ್ರಕರಣ ದಾಖಲಾಗಿ ಶಿಕ್ಷೆ ಅಗುತ್ತಿರುವ ಮೊದಲ ಪ್ರಕರಣವಾಗಿದೆ.

ಮಂಗಳೂರಿನ ಉರ್ವ ಸ್ಟೋರಿ ಬಳಿ ಇರುವ ಪ್ಯಾಕ್ಟ್ರಿ & ಬಾಯ್ಲರ್ ಇದರ ಅಸಿಸ್ಟೆಂಟ್ ಡೈರೆಕ್ಟರ್ ಸುರೇಶ್ ಇವರಿಗೆ ಬೆಂಗಳೂರಿಗೆ ವರ್ಗಾವಣೆ ಅಗಿದ್ದರು ಇಂಡಸ್ಟ್ರೀಗಳಿಗೆ ಲಂಚ ಪಡೆದು ಪರವಾನಿಗೆ ನೀಡುತ್ತಿದ್ದರು ಎಂಬ ಬಗ್ಗೆ 2016 ರಲ್ಲಿ ಮಂಗಳೂರು ಸಮಾಜಿಕ ಕಾರ್ಯಕರ್ತ ಹನುಮಂತ ಕಾಮತ್ ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು ಅದರಂತೆ ಎಸಿಬಿ ಪೊಲೀಸ್ ಠಾಣೆಯಲ್ಲಿ ಅಂದಿನ ಡಿವೈಎಸ್ಪಿ ಸುಧೀರ್ ಎಮ್ ಹೆಗ್ಡೆ ಅವರು ಪ್ರಕರಣ ದಾಖಲಿಸಿಕೊಂಡು ಕಚೇರಿ ಮತ್ತು ಮನೆ ಮೇಲೆ ದಾಳಿ ನಡೆಸಿದ್ದರು ಈ ವೇಳೆ ಮನೆಯಲ್ಲಿ ಪರವಾನಿಗೆ ನೀಡಿದ ದಾಖಲೆಗಳು ಹಾಗೂ ಲಂಚವಾಗಿ ಪಡೆದ 3 ಲಕ್ಷದ 40 ಸಾವಿರ ಹಣ ಪತ್ತೆಯಾಗಿತ್ತು ಇದನ್ನು ವಶಕ್ಕೆ ಪಡೆದು ಅಂದಿನ ಎಸಿಬಿ ಇನ್ಸ್ಪೆಕ್ಟರ್ ಯೋಗೀಶ್ ಕುಮಾರ್ ಬಿಸಿ ತನಿಖೆ ನಡೆಸಿ ಮಂಗಳೂರು ಕೋರ್ಟ್ ಗೆ ದೋಷರೋಪ ಪಟ್ಟಿ ಸಲ್ಲಿಸಿದ್ದರು ಇಂದು ಮಂಗಳೂರಿನ ಮೂರನೇ ಹೆಚ್ಚುವರಿ ವಿಶೇಷ ಸೆಕ್ಷನ್ ಕೋರ್ಟ್ ನ ಜಡ್ಜ್ ಜಕಾತಿಯವರು ಆರೋಪಿ ಸುರೇಶ್ ಗೆ 4 ವರ್ಷ ಜೈಲು ಶಿಕ್ಷೆ ಮತ್ತು 4 ಲಕ್ಷ ದಂಡ ವಿಧಿಸಿದ್ದು ದಂಡ ತಪ್ಪಿದ್ದಲ್ಲಿ 6 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಿ ಆದೇಶ ಮಾಡಿದೆ.

ಮಂಗಳೂರು ಎಸಿಬಿ ಪರವಾಗಿ ರವೀಂದ್ರ ಮುನಿಪಾಡಿ ವಾದ ಮಂಡಿಸಿದ್ದರು. ಡಿವೈಎಸ್ಪಿ ಸುಧೀರ್ ಎಮ್ ಹೆಗ್ಡೆ ಪ್ರಕರಣ ದಾಖಲಿಸಿಕೊಂಡು, ಪ್ರಕರಣದ ತನಿಖೆಯನ್ನು ಅಂದಿನ ಇನ್ಸ್ಪೆಕ್ಟರ್ ಯೋಗೀಶ್ ಕುಮಾರ್ ಬಿಸಿ ಮತ್ತು ಸಿಬ್ಬಂದಿಗಳಾದ ಹೆಡ್ ಕಾನ್ಟೇಬಲ್ ಹರಿ ಪ್ರಸಾದ್, ರಾಧಾಕೃಷ್ಣ , ರಾಧಾಕೃಷ್ಣ.ಡಿ.ಎ , ಪ್ರಶಾಂತ್, ಉಮೇಶ್ , ವೈಶಾಲಿ ಸಹಾಯಕರಾಗಿ ಕೆಲಸ ಮಾಡಿದ್ದರು. ಭ್ರಷ್ಟಾಚಾರ ನಿಗ್ರಹ ದಳ ವಿಲಿನವಾಗಿ ಲೋಕಯುಕ್ತಕ್ಕೆ ಎಲ್ಲಾ ಪ್ರಕರಣ ಹಸ್ತಾಂತರವಾಗಿದ್ದು ಆರೋಪಿ ಸುರೇಶ್ ನನ್ನು ಲೋಕಯುಕ್ತ ಪೊಲೀಸರು ಕೋರ್ಟ್‌ ಗೆ ಹಾಜರುಪಡಿಸಿದ್ದು ಇದೀಗ ಜೈಲಿಗೆ ಕಳುಹಿಸಿದ್ದಾರೆ‌.

ಇದನ್ನೂ ಓದಿ : Janani Suraksha Yojana : ಗರ್ಭಿಣಿ ಮಹಿಳೆಯರಿಗೂ ಸಿಗತ್ತೆ ಸರ್ಕಾರದಿಂದ 6,000 ರೂಪಾಯಿಗಳು

ಇದನ್ನೂ ಓದಿ : Karnataka weather report: ನಾಳೆಯಿಂದ ರಾಜ್ಯದಲ್ಲಿ ಮತ್ತೆ ಮಳೆಯ ಆರ್ಭಟ : ಕರಾವಳಿಯಲ್ಲಿ ಇಂದು‌ ಮಳೆ ಸಾಧ್ಯತೆ

First conviction announced in DC District Anti Corruption Bureau (ACB) case

Comments are closed.