ದಕ್ಷಿಣಕನ್ನಡ : ಕುಮಾರಧಾರ ನದಿಗೆ ಹಾರಿ ಉದ್ಯಮಿ ಆತ್ಮಹತ್ಯೆ

ದಕ್ಷಿಣಕನ್ನಡ : ಉದ್ಯಮಿಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉದ್ಯಮಿ ಆತ್ಮಹತ್ಯೆ (Businessman committed suicide) ಸಂದರ್ಭದಲ್ಲಿ ಬಲೂನ್‌ನ್ನು ಕಟ್ಟಿಕೊಂಡು ನದಿಗೆ ಹಾರಿರುತ್ತಾರೆ.

ಸದ್ಯ ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುದ್ಮಾರು ಗ್ರಾಮದಲ್ಲಿ ನಡೆದಿದೆ. ಕುಮಾರಧಾರಾ ನದಿಗೆ ಬಲೂನ್‌ ಕಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ ಚಂದ್ರಶೇಖರ್‌ ಎಂದು ಗುರುತಿಸಲಾಗಿದೆ. ಉದ್ಯಮಿಯ ಮೃತ ದೇಹವನ್ನು ನದಿಯಿಂದ ಮೇಲೆ ತೆಗೆದು ಮರಣೋತ್ತರ ಪರೀಕ್ಷೆಯ ನಂತರ ಕುಟುಂಬದವರಿಗೆ ನೀಡಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ : Hyderabad Murder Case : ಮಹಿಳೆಯ ಶಿರಚ್ಛೇದ ಮಾಡಿ ದೇಹವನ್ನು ಫ್ರಿಜ್ ಸೂಟ್‌ ಕೇಸ್‌ನಲ್ಲಿ ಬಚ್ಚಿಟ್ಟ ಭೂಪ

ಇದನ್ನೂ ಓದಿ : ಆಟೋಗೆ ಡಂಪರ್ ಢಿಕ್ಕಿ 4 ಸಾವು, ಇಬ್ಬರು ಗಂಭೀರ

ಉದ್ಯಮಿ ಚಂದ್ರಶೇಖರ್‌ ಅಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ನಿರ್ದೇಶಕ ಆಗಿ ಸೇವೆ ಸಲ್ಲಿಸುತ್ತಿದ್ದರು. ಸಸ್ಯ ಉದ್ಯಮಿ ಚಂದ್ರಶೇಖರ್‌ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಶಾಂತಿಮೊಗರು ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕಡಬ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Mumbai murder : ಹೊಡೆದು ವ್ಯಕ್ತಿಯೋರ್ವನ ಹತ್ಯೆ, ಐವರ ಬಂಧನ

ಮುಂಬೈ : ವ್ಯಕ್ತಿಯೊಬ್ಬನನ್ನು ಹೊಡೆದು ಕೊಂದಿದ್ದಕ್ಕೆ ಐವರನ್ನು (Mumbai murder)‌ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ. ಮೃತಪಟ್ಟ ಯುವಕ ಕಳ್ಳತನ ಮಾಡಿದ್ದಾನೆಂದು ಅನುಮಾನಿಸಿ ಹೊಡೆದು ಕೊಲೆ ಮಾಡಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಈ ದುರ್ಘಟನೆ ಮುಂಬೈನ ಬೊರಿವಲಿಯಲ್ಲಿ ನಡೆದಿದ್ದು, ಈ ಘಟನೆಯಲ್ಲಿ 29 ವರ್ಷದ ಯುವಕನನ್ನು ಹೊಡೆದು ಕೊಂದ ಆರೋಪದ ಮೇಲೆ ಶುಕ್ರವಾರ ಕನಿಷ್ಠ 5 ಜನರನ್ನು ಬಂಧಿಸಲಾಗಿದೆ ಆರೋಪಿಗಳು ಕಳ್ಳತನದ ಶಂಕೆಯಲ್ಲಿ ಜನರ ಗುಂಪೊಂದು ವ್ಯಕ್ತಿಗೆ ಥಳಿಸಿದ ಘಟನೆ ಗುರುವಾರ (ಮೇ 25) ನಡೆದಿದೆ. ಈ ಹಿಂದೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

“ಕಸ್ತೂರ್ಬಾ ಮಾರ್ಗ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನದ ಶಂಕೆಯ ಮೇಲೆ 29 ವರ್ಷದ ಯುವಕನನ್ನು ಹೊಡೆದು ಕೊಂದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ” ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಪ್ರವೀಣ್ ಲಹಾನೆ ಎಂದು ಗುರುತಿಸಲಾಗಿದ್ದು, ಈತ ಪೊಲೀಸ್ ಅಧಿಕಾರಿಯ ಸಹೋದರ ಆಗಿರುತ್ತಾನೆ. ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 304, 143, 144, 147, 148 ಮತ್ತು 149 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Dakshina Kannada: Businessman committed suicide by tying a balloon and jumping into Maradhara river

Comments are closed.