Dehli bus accident: ಬಸ್‌ ಮುಖಾಮುಖಿ ಢಿಕ್ಕಿ: ಮೂವರು ಸಾವು, ಇಬ್ಬರು ಗಂಭೀರ

ದೆಹಲಿ: (Dehli bus accident) ಎರಡು ಬಸ್‌ ಗಳು ಮುಖಾಮುಖಿ ಢಿಕ್ಕಿಯಾಗಿ, ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಂಭಿರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್‌ ನೋಯ್ಡಾ ಎಕ್ಸ್‌ ಪ್ರೆಸ್ಸ್‌ ವೇ ನಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.

ಗ್ರೇಟರ್‌ ನೋಯ್ಡಾದ ಎಕ್ಸ್‌ ಪ್ರೆಸ್ಸ್‌ ವೇ ನಲ್ಲಿ ಎರಡು ಬಸ್‌ ಗಳು ಢಿಕ್ಕಿ (Dehli bus accident) ಯಾಗಿದ್ದು, ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ ತನಿಖೆ ನಡೆಸುತ್ತಿದ್ದಾರೆ.

ಬಸ್‌ ಮತ್ತು ಟ್ರಕ್‌ ನಡುವೆ ಢಿಕ್ಕಿ: 13 ಮಂದಿಗೆ ಗಾಯ

ಉತ್ತರ ಪ್ರದೇಶ: ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್‌ ಮತ್ತು ಟ್ರಕ್‌ ನಡುವೆ ಢಿಕ್ಕಿಯಾಗಿ 13 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಬಸ್‌ ಬಿಹಾರದಿಂದ ವಾರಣಾಸಿ ಕಡೆ ಬರುತ್ತಿದ್ದು, ಪ್ರಯಾಣದ ವೇಳೆ ಬಸ್‌ ಚಾಲಕ ನಿದ್ದೆಗೆ ಜಾರಿದ್ದಾನೆ. ಈ ವೇಳೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ 13 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಬಿಎಷ್‌ಯು ಟ್ರಾಮಾ ಸೆಂಟರ್‌ ಗೆ ದಾಖಲಿಸಲಾಗಿದೆ.

ಇದನ್ನೂ ಓದಿ : Assault on girl: ಅಪ್ರಾಪ್ತ ಬಾಲಕಿ ಜೊತೆ ಅಸಭ್ಯ ವರ್ತನೆ: ಆರೋಪಿ ಯುವಕನ ಮೇಲೆ ಹಲ್ಲೆ ನಡೆಸಿದ ಪೋಷಕರು

ಇದನ್ನೂ ಓದಿ : ಗುಂಡು ತಗುಲಿ 7 ವರ್ಷದ ಬಾಲಕ ಸಾವು: ಇಬ್ಬರು ಪೊಲೀಸರ ವಶಕ್ಕೆ

ಇದನ್ನೂ ಓದಿ : Mumbai Fire disaster: ಪಿಜ್ಜಾ ರೆಸ್ಟೋರೆಂಟ್ ನಲ್ಲಿ ಅಗ್ನಿ ಅವಘಡ : 1 ಸಾವು, ಇಬ್ಬರಿಗೆ ಗಾಯ

ಇದನ್ನೂ ಓದಿ : ಸ್ಕೂಟಿಗೆ ಅಪರಿಚಿತ ವಾಹನ ಡಿಕ್ಕಿ: 9 ತಿಂಗಳ ಮಗು ಸೇರಿ ಇಬ್ಬರು ಸಾವು

(Dehli bus accident) Two buses collided head-on, three were killed and two were seriously injured in the accident on Sunday morning on the Greater Noida Expressway in Uttar Pradesh.

Comments are closed.