ಸೋಮವಾರ, ಏಪ್ರಿಲ್ 28, 2025
HomeCrimeDehli fire accident: ಖಾಸಗಿ ನರ್ಸಿಂಗ್‌ ಹೋಮ್‌ ನಲ್ಲಿ ಅಗ್ನಿ ಅವಘಡದಲ್ಲಿ ಇಬ್ಬರು ಸಾವು

Dehli fire accident: ಖಾಸಗಿ ನರ್ಸಿಂಗ್‌ ಹೋಮ್‌ ನಲ್ಲಿ ಅಗ್ನಿ ಅವಘಡದಲ್ಲಿ ಇಬ್ಬರು ಸಾವು

- Advertisement -

ದೆಹಲಿ: (Dehli fire accident) ದೆಹಲಿಯ ಗ್ರೇಟರ್‌ ಕೈಲಾಶ್‌ ಪ್ರದೇಶದಲ್ಲಿನ ನರ್ಸಿಂಗ್‌ ಹೋಮ್‌ ನಲ್ಲಿ ಭಾನುವಾರ ಬೆಳಿಗ್ಗೆ ಬೆಂಕಿ ಅವಘಡ ಸಂಭವಿಸಿದ್ದು, ಅವಘಡದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ. ಮಾಹಿತಿಗಳ ಪ್ರಕಾರ ಆರು ಮಂದಿಯನ್ನು ಬೆಂಕಿ ಅವಘಡದಿಂದ ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ಮುಂಜಾನೆ ಸುಮಾರು 5:15 ಕ್ಕೆ ನರ್ಸಿಂಗ್‌ ಹೋಮ್‌ ನಲ್ಲಿ ಬೆಂಕಿ (Dehli fire accident) ಕಾಣಿಸಿಕೊಂಡಿದ್ದು, ಬೆಂಕಿ ಅವಘಡಕ್ಕೆ ಕಾರಣಗಳು ಇನ್ನೂ ತಿಳಿದು ಬಂದಿಲ್ಲ. ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ದಳದ ವಾಹನಗಳು ಧಾವಿಸಿದ್ದು, ಬೆಂಕಿ ನಂದಿಸುವ ಪ್ರಯತ್ನವನ್ನು ಮುಂದುವರೆಸಿದ್ದಾರೆ.

ಇಂದು ನಡೆದ ಅವಘಡದಲ್ಲಿ ಇಬ್ಬರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಾವನ್ನಪ್ಪಿದ್ದು, ಆರು ಮಂದಿಯ ರಕ್ಷಣೆ ಮಾಡಲಾಗಿದೆ. ಇನ್ನೂ ಕೂಡ ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿಶಾಮಕ ದಳದವರು ಕಾರ್ಯನಿರತರಾಗಿದ್ದಾರೆ ಎಂದು ತಿಳಿದು ಬಂದಿದೆ.

ರಾಜಸ್ಥಾನದಲ್ಲಿ ಕಾರು-ಟ್ರಕ್‌ ಢಿಕ್ಕಿ: 5 ಮಂದಿ ಸಾವು

ಹನುಮಂತನಗರ: ಹನುಮಂತನಗರದ ಮೆಗಾ ಹೆದ್ದಾರಿಯಲ್ಲಿ ಕಾರು ಮತ್ತು ಟ್ರಕ್‌ ನಡುವೆ ಢಿಕ್ಕಿಯಾಗಿದ್ದು, ಸಂಭವಿಸಿದ ಭೀಕರ ಅಪಘಾತದಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಜಸ್ಥಾನದ ಹನುಮಾನ್‌ ಗಢ್‌ ಜಿಲ್ಲೆಯ ಬಿಸ್ರಾಸರ್‌ ಗ್ರಾಮದ ಬಳಿಯಲ್ಲಿನ ಹೆದ್ದಾರಿಯಲ್ಲಿ ಘಟನೆ ಸಂಭವಿಸಿದೆ.

ಇದನ್ನೂ ಓದಿ : Karwar bus accident: ಶಾಪಿಂಗ್‌ ಗೆ ತೆರಳುತ್ತಿದ್ದ ವೇಳೆ ಬಸ್‌ ಢಿಕ್ಕಿ: ತಂದೆಯ ಕಣ್ಣೆದುರೇ ಕೊನೆಯುಸಿರೆಳೆದ ಮಗಳು

ಇದನ್ನೂ ಓದಿ : Dehli crime news: 2 ನೇ ತರಗತಿ ವಿದ್ಯಾರ್ಥಿಯ ಖಾಸಗಿ ಭಾಗಕ್ಕೆ ನೈಲಾನ್‌ ದಾರ ಕಟ್ಟಿ ವಿಕೃತಿ ಮೆರೆದ ಸಹ ವಿದ್ಯಾರ್ಥಿಗಳು

ರಾಜಸ್ಥಾನದ ಹನುಮಂತನಗರದ ಮೆಗಾ ಹೆದ್ದಾರಿಯಲ್ಲಿ ಕಾರು ಟ್ರಕ್‌ ನಡುವೆ ಅಪಫಾತ ಸಂಭವಿಸಿದ್ದು, ಘಟನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ. ಅಪಘಾತ ನಡೆದ ನಂತರ ಟ್ರಕ್‌ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಇನ್ನೂ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಪರಾರಿಯಾದ ಟ್ರಕ್‌ ಚಾಲಕನ ಶೋಧ ಕಾರ್ಯ ನಡೆಯುತ್ತಿದೆ.

A fire broke out at a nursing home in Delhi’s Greater Kailash area on Sunday morning, killing at least two people.

RELATED ARTICLES

Most Popular