Calendar 2023: ಈ ವರ್ಷ ಭಾರತದಲ್ಲಿ ಆಚರಿಸುವ ಪ್ರಮುಖ ಹಬ್ಬಗಳ ದಿನಗಳ ಪಟ್ಟಿ ಇಲ್ಲಿದೆ

(Happy New Year 2023) ವರ್ಷ ಪೂರ್ತಿ ವೈವಿಧ್ಯಮಯ ಹಬ್ಬಗಳನ್ನು ಆಚರಿಸುವ ದೇಶವೆಂದರೆ ಅದು ಭಾರತ (India). ಪ್ರತಿವರ್ಷ ಬಹಳಷ್ಟು ಹಬ್ಬಗಳನ್ನು ಇಲ್ಲಿ ಆಚರಿಸಲಾಗುತ್ತದೆ. ಕೆಲವು ಧಾರ್ಮಿಕ ಹಬ್ಬಗಳಾದರೆ ಇನ್ನು ಕೆಲವು ರಾಷ್ಟ್ರೀಯ ಹಬ್ಬಗಳಾಗಿವೆ. ಪ್ರತಿ ತಿಂಗಳು ಒಂದಲ್ಲಾ ಒಂದು ಹಬ್ಬಗಳು ಬರುತ್ತವೆ. ಹಾಗೆ ಸರ್ಕಾರಿ ರಜಾ ದಿನಗಳು ಬರುತ್ತವೆ. ಕೆಲವು ಹಬ್ಬಗಳನ್ನು ಇಡೀ ದೇಶದಲ್ಲಿ ಆಚರಣೆ ಮಾಡಿದರೆ ಇನ್ನು ಕೆಲವು ಆಯಾ ರಾಜ್ಯಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಕೆಲವು ಪ್ರಮುಖ ದಿನಗಳ ಆಚರಣೆಯನ್ನು ಪ್ರತಿವರ್ಷ ನಿರ್ದಿಷ್ಟ ದಿನಗಳಂದೇ ಆಚರಿಸಲಾಗುತ್ತದೆ. 2023 ರಲ್ಲಿ ಭಾರತದಲ್ಲಿ ಆಚರಿಸಲಾಗುವ ಮಹತ್ವದ ದಿನಗಳ ಪಟ್ಟಿಯನ್ನು (Calendar 2023) ಇಲ್ಲಿ ಕೊಡಲಾಗಿದೆ.

ಜನವರಿ :

ಜನವರಿ 1, 2023: ಹೊಸ ವರ್ಷದ ಮೊದಲ ದಿನ

ಜನವರಿ 2, 2023: ತೈಲಂಗ್ ಸ್ವಾಮಿ ಜಯಂತಿ

ಜನವರಿ 12, 2023: ಸ್ವಾಮಿ ವಿವೇಕಾನಂದ ಜಯಂತಿ ಮತ್ತು ರಾಷ್ಟ್ರೀಯ ಯುವ ದಿನ

ಜನವರಿ 14, 2023: ಲೋಹ್ರಿ

ಜನವರಿ 15, 2023: ಮಕರ ಸಂಕ್ರಾಂತಿ ಮತ್ತು ಪೊಂಗಲ್

ಜನವರಿ 23, 2023: ಸುಭಾಸ್ ಚಂದ್ರ ಬೋಸ್ ಜಯಂತಿ

ಜನವರಿ 26, 2023: ವಸಂತ ಪಂಚಮಿ ಮತ್ತು ಗಣರಾಜ್ಯೋತ್ಸವ

ಜನವರಿ 30, 2023: ಹುತಾತ್ಮರ ದಿನ

ಫೆಬ್ರವರಿ:

ಫೆಬ್ರವರಿ 4, 2023: ಹಜರತ್ ಅಲಿ ಜನ್ಮದಿನ ಮತ್ತು ವಿಶ್ವ ಕ್ಯಾನ್ಸರ್ ದಿನ

ಫೆಬ್ರವರಿ 5, 2023: ಗುರು ರವಿದಾಸ್ ಜಯಂತಿ

ಫೆಬ್ರವರಿ 15, 2023: ಮಹರ್ಷಿ ದಯಾನಂದ ಸರಸ್ವತಿ ಜಯಂತಿ

ಫೆಬ್ರವರಿ 18, 2023: ಮಹಾ ಶಿವರಾತ್ರಿ

ಫೆಬ್ರವರಿ 21, 2023: ರಾಮಕೃಷ್ಣ ಜಯಂತಿ

ಮಾರ್ಚ್‌:

ಮಾರ್ಚ್ 7, 2023: ಹೋಲಿಕಾ ದಹನ್ ಮತ್ತು ಚೈತನ್ಯ ಮಹಾಪ್ರಭು ಜಯಂತಿ

ಮಾರ್ಚ್ 8, 2023: ಹೋಳಿ ಮತ್ತು ಅಂತರಾಷ್ಟ್ರೀಯ ಮಹಿಳಾ ದಿನ

ಮಾರ್ಚ್ 10, 2023: ಶಿವಾಜಿ ಜಯಂತಿ

ಮಾರ್ಚ್ 21, 2023: ವರ್ನಲ್ ವಿಷುವತ್ ಸಂಕ್ರಾಂತಿ ದಿನ ಮತ್ತು ಪಾರ್ಸಿ ಹೊಸ ವರ್ಷ

ಮಾರ್ಚ್ 22, 2023: ಗುಡಿ ಪಾಡ್ವಾ

ಮಾರ್ಚ್ 23, 2023: ಶಹೀದ್ ದಿವಸ್

ಮಾರ್ಚ್ 24, 2023: ಗಂಗೌರ್

ಮಾರ್ಚ್ 30, 2023: ರಾಮ ನವಮಿ

ಏಪ್ರಿಲ್‌:

ಏಪ್ರಿಲ್ 4, 2023: ಮಹಾವೀರ ಸ್ವಾಮಿ ಜಯಂತಿ

ಏಪ್ರಿಲ್ 7, 2023: ಗುಡ್‌ ಫ್ರೈಡೇ

ಏಪ್ರಿಲ್ 9, 2023: ಈಸ್ಟರ್

ಏಪ್ರಿಲ್ 14, 2023: ಅಂಬೇಡ್ಕರ್ ಜಯಂತಿ ಮತ್ತು ಬೈಸಾಖಿ

ಏಪ್ರಿಲ್ 16, 2023: ವಲ್ಲಭಾಚಾರ್ಯ ಜಯಂತಿ

ಏಪ್ರಿಲ್ 22, 2023: ಭೂಮಿಯ ದಿನ, ಈದ್-ಅಲ್-ಫಿತರ್ ಮತ್ತು ರಂಜಾನ್

ಮೇ:

ಮೇ 1, 2023: ಅಂತರಾಷ್ಟ್ರೀಯ ಕಾರ್ಮಿಕ ದಿನ, ಕಾರ್ಮಿಕರ ದಿನ, ಮಹಾರಾಷ್ಟ್ರ ದಿನ ಮತ್ತು ತ್ರಿಶೂರ್ ಪೂರಂ

ಮೇ 5, 2023: ಬುದ್ಧ ಪೂರ್ಣಿಮಾ

ಮೇ 7, 2023: ರವೀಂದ್ರನಾಥ ಟ್ಯಾಗೋರ್ ಜಯಂತಿ

ಮೇ 14, 2023 (ಮೇ ಎರಡನೇ ಭಾನುವಾರ): ಇಂಟರ್‌ನ್ಯಾಷನಲ್‌ ಮದರ್ಸ್‌ ಡೇ

ಮೇ 22, 2023: ಮಹಾರಾಣಾ ಪ್ರತಾಪ್ ಜಯಂತಿ

ಮೇ 31, 2023: ತಂಬಾಕು ವಿರೋಧಿ ದಿನ

ಜೂನ್‌:

ಜೂನ್ 4, 2023: ಕಬೀರದಾಸ್ ಜಯಂತಿ

ಜೂನ್ 5, 2023: ವಿಶ್ವ ಪರಿಸರ ದಿನ

ಜೂನ್ 18, 2023 (ಜೂನ್ ಮೂರನೇ ಭಾನುವಾರ): ಇಂಟರ್‌ನ್ಯಾಷನಲ್‌ ಫಾದರ್ಸ್‌ ಡೇ

ಜೂನ್ 20, 2023: ಜಗನ್ನಾಥ ರಥ ಯಾತ್ರೆ

ಜೂನ್ 21, 2023: ಅಂತರಾಷ್ಟ್ರೀಯ ಯೋಗ ದಿನ

ಜೂನ್ 29, 2023: ಈದ್-ಅಲ್-ಅಧಾ

ಜುಲೈ:

ಜುಲೈ 3, 2023: ಗುರು ಪೂರ್ಣಿಮೆ

ಜುಲೈ 19, 2023: ಅಲ್-ಹಿಜ್ರಾ

ಜುಲೈ 28, 2023: ಮೊಹರಂ

ಆಗಸ್ಟ್‌:

ಆಗಸ್ಟ್ 6, 2023 (ಆಗಸ್ಟ್ ಮೊದಲ ಭಾನುವಾರ): ಇಂಟರ್‌ನ್ಯಾಷನಲ್‌ ಫ್ರೆಂಡ್‌ಶಿಪ್‌ ಡೇ

ಆಗಸ್ಟ್ 15, 2023: ಸ್ವಾತಂತ್ರ್ಯ ದಿನ

ಆಗಸ್ಟ್ 23, 2023: ತುಳಸಿದಾಸ ಜಯಂತಿ

ಆಗಸ್ಟ್ 29, 2023: ಓಣಂ

ಆಗಸ್ಟ್ 30, 2023: ರಕ್ಷಾ ಬಂಧನ

ಸೆಪ್ಟೆಂಬರ್‌:

ಸೆಪ್ಟೆಂಬರ್ 5, 2023: ರಾಷ್ಟ್ರೀಯ ಶಿಕ್ಷಕರ ದಿನ

ಸೆಪ್ಟೆಂಬರ್ 6, 2023: ಜನ್ಮಾಷ್ಟಮಿ (ಸ್ಮಾರ್ತ ಸಂಪ್ರದಾಯದ ಪ್ರಕಾರ)

ಸೆಪ್ಟೆಂಬರ್ 7, 2023: ಜನ್ಮಾಷ್ಟಮಿ (ಇಸ್ಕಾನ್ ಪ್ರಕಾರ)

ಸೆಪ್ಟೆಂಬರ್ 14, 2023: ಹಿಂದಿ ದಿವಸ್

ಸೆಪ್ಟೆಂಬರ್ 19, 2023: ಗಣೇಶ ಚತುರ್ಥಿ

ಸೆಪ್ಟೆಂಬರ್ 23, 2023: ಶರತ್ಕಾಲದ ವಿಷುವತ್ ಸಂಕ್ರಾಂತಿ

ಸೆಪ್ಟೆಂಬರ್ 27, 2023: ಈದ್-ಇ-ಮಿಲಾದ್

ಅಕ್ಟೋಬರ್‌:

ಅಕ್ಟೋಬರ್ 2, 2023: ಗಾಂಧಿ ಜಯಂತಿ

ಅಕ್ಟೋಬರ್ 15, 2023: ಮಹಾರಾಜ ಅಗ್ರಸೇನ್ ಜಯಂತಿ

ಅಕ್ಟೋಬರ್ 22, 2023: ದುರ್ಗಾ ಅಷ್ಟಮಿ

ಅಕ್ಟೋಬರ್ 23, 2023: ಮಹಾ ನವಮಿ

ಅಕ್ಟೋಬರ್ 24, 2023: ದಸರಾ

ಅಕ್ಟೋಬರ್ 28: 2023: ವಾಲ್ಮೀಕಿ ಜಯಂತಿ

ನವೆಂಬರ್‌:

ನವೆಂಬರ್ 1, 2023: ಕರ್ವಾ ಚೌತ್

ನವೆಂಬರ್ 12, 2023: ಲಕ್ಷ್ಮಿ ಪೂಜೆ ಮತ್ತು ದೀಪಾವಳಿ

ನವೆಂಬರ್ 14, 2023: ಗೋವರ್ಧನ ಪೂಜೆ ಮತ್ತು ಭಾಯಿ ದೂಜ್

ನವೆಂಬರ್ 19, 2023: ಛತ್ ಪೂಜೆ

ನವೆಂಬರ್ 27, 2023: ಗುರುನಾನಕ್ ಜಯಂತಿ

ಡಿಸೆಂಬರ್‌:

ಡಿಸೆಂಬರ್ 1, 2023: ವಿಶ್ವ ಏಡ್ಸ್ ದಿನ

ಡಿಸೆಂಬರ್ 25, 2023: ಕ್ರಿಸ್ಮಸ್

ಇದನ್ನೂ ಓದಿ : Horoscope Today : ಹೇಗಿದೆ ವರ್ಷದ ಮೊದಲ ದಿನದ ಭವಿಷ್ಯ

ಇದನ್ನೂ ಓದಿ : Pippali Benefits : ಮಸಾಲಾ ಪದಾರ್ಥಗಳಲ್ಲಿ ಒಂದಾದ ಪಿಪ್ಪಲಿಯ ಪ್ರಯೋಜನಗಳು ನಿಮಗೆ ಗೊತ್ತಾ…

(Calendar 2023, check list of famous festivals of India 2023 with dates)

Comments are closed.