ಬುಧವಾರ, ಏಪ್ರಿಲ್ 30, 2025
HomeCrimeElectrick Shock : ಪಾರಿವಾಳ ಹಿಡಿಯಲು ಹೋದವರಿಗೆ ಕರೆಂಟ್‌ ಶಾಕ್‌ : 2 ಮಕ್ಕಳ ಸ್ಥಿತಿ...

Electrick Shock : ಪಾರಿವಾಳ ಹಿಡಿಯಲು ಹೋದವರಿಗೆ ಕರೆಂಟ್‌ ಶಾಕ್‌ : 2 ಮಕ್ಕಳ ಸ್ಥಿತಿ ಚಿಂತಾಜನಕ

- Advertisement -

ಬೆಂಗಳೂರು : ವಿದ್ಯುತ್‌ ತಂತಿ ಮೇಲೆ ಕುಳಿತಿದ್ದ ಪಾರಿವಾಳವನ್ನು ಹಿಡಿಯಲು ಹೋದಾಗ ಕರೆಂಟ್‌ ಶಾಕ್‌ (Electrick Shock) ಹೊಡೆದು ಇಬ್ಬರು ಮಕ್ಕಳ ಪರಿಸ್ಥಿತಿ ಚಿಂತಾಜನಕವಾಗಿದೆ. ಈ ದುರ್ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿ ನಡೆದಿದೆ.

ವಿಜಯಾನಂದ ನಗರದ ನಿವಾಸಿಗಳಾದ ಸುಪ್ರೀತ್‌ ಮತ್ತು ಚಂದ್ರು ಕರೆಂಟ್‌ ಶಾಕ್‌ ಹೊಡೆದ ಇಬ್ಬರು ಗಾಯಳು ಬಾಲಕರಾಗಿದ್ದಾರೆ. ಮನೆಯ ಮಹಡಿಗೆ ಬಂದ ಪಾರಿವಾಳವನ್ನು ಹಿಡಿಯವ ಆಸೆಯಿಂದ ಮಹಡಿಗೆ ಹೋಗಿದ್ದಾರೆ . ಆಗ ಅಲ್ಲಿ ಹೈಟೆನ್ಶನ್‌ ವಿದ್ಯುತ್‌ ತಂತಿ ಮೇಲೆ ಪಾರಿವಾಳ ಕುಳಿತಿತ್ತು. ಅದನ್ನು ಹಿಡಿಯಲು ಇಬ್ಬರು ಬಾಲಕರು ಪ್ರಯತ್ನಿಸಿದ್ದಾರೆ. ಪಾರಿವಾಳವನ್ನು ಹಿಡಿಯಲು ಕಬ್ಬಿಣದ ರಾಡ್‌ನಿಂದ ಹೈಟೆನ್ಶನ್‌ ವಿದ್ಯುತ್‌ ತಂತಿಯನ್ನು ಸ್ಪರ್ಶಿಸಿದ್ದಾರೆ. ಕಬ್ಬಿಣ ರಾಡ್‌ ವಿದ್ಯುತ್‌ ತಂತಿಗೆ ಸ್ಪರ್ಶವಾದ ಕ್ಷಣಾರ್ಧದಲ್ಲಿ ಕರೆಂಟ್‌ ಶಾಕ್‌ ಹೊಡೆದಿದೆ. ಮಕ್ಕಳಿಬ್ಬರೂ ಸುಟ್ಟ ಗಾಯದಿಂದ ಗಂಭೀರ ಸ್ಥಿತಿಗೆ ಗುರಿಯಾಗಿದ್ದಾರೆ.

ಇದನ್ನೂ ಓದಿ : leopard attack: ಚಿರತೆ ದಾಳಿಗೆ ಯುವತಿ ಬಲಿ: 7.5 ಲಕ್ಷ ರೂ. ಪರಿಹಾರ ಘೋಷಣೆ

ಇದನ್ನೂ ಓದಿ : Mysterious murder: ಕತ್ತು ಕೊಯ್ದು ವೃದ್ದ ದಂಪತಿಯ ಬರ್ಬರ ಹತ್ಯೆ

ಇದನ್ನೂ ಓದಿ : Leopard in Bangalore: ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಚಿರತೆ ಓಡಾಡುವ ದೃಶ್ಯ ಸಿಸಿಟಿಯಲ್ಲಿ ಸೆರೆ

ಇದನ್ನೂ ಓದಿ : Life threat to Pramod Muthalik: ಪ್ರಮೋದ್‌ ಮುತಾಲಿಕ್‌ ಗೆ ಜೀವ ಬೆದರಿಕೆ : ದೂರು ದಾಖಲು

ಕರೆಂಟ್‌ ತೀವ್ರತೆಯಿಂದಾಗಿ ಮನೆಯ ಒಳಗೆ ಇದ್ದ ವಿದ್ಯುತ್‌ ಉಪಕರಣಗಳು ಕೂಡ ಸ್ಪೋಟಗೊಂಡಿದೆ. ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮಕ್ಕಳ ತಂದೆ ತಾಯಿ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಮಕ್ಕಳು ಈ ಕೆಲಸವನ್ನು ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮಕ್ಕಳಿಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಂದ್ರು ಎಂಬ ಬಾಲಕನಿಗೆ ಶೇಕಡಾ 90ರಷ್ಟು ಸುಟ್ಟ ಗಾಯಗಳಾಗಿದ್ದರೆ, ಸುಪ್ರೀತ್‌ಗೆ ಶೇಕಡಾ 70ರಷ್ಟು ಸುಟ್ಟಗಾಯಗಳಿಂದ ಮಕ್ಕಳ ನರಳಾಟ ಪೋಷಕರಿಗೆ ನೋಡಲು ಅಸಾಧ್ಯವಾಗಿದೆ. ಇಬ್ಬರು ಬಾಲಕರು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ಮಕ್ಕಳ ಪರಿಸ್ಥಿತಿ ಚಿಂತಾಜನಕವಾಗಿದೆ. ಸಂಜೆವರೆಗೂ ಎನನ್ನೂ ಹೇಳಲು ಸಾಧ್ಯವಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

Electrick shock for those who went to catch pigeons: The condition of 2 children is critical

RELATED ARTICLES

Most Popular