Mysterious murder: ಕತ್ತು ಕೊಯ್ದು ವೃದ್ದ ದಂಪತಿಯ ಬರ್ಬರ ಹತ್ಯೆ

ಚಿತ್ರದುರ್ಗ: (Mysterious murder) ಮನೆಯಲ್ಲಿದ್ದ ಇಬ್ಬರು ವೃದ್ದ ದಂಪತಿಯ ಕತ್ತು ಕೊಯ್ದು ಹತ್ಯೆಗೈದಿರುವ ಕೃತ್ಯ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ಗುರುವಾರ ಸಂಜೆ ನಡೆದಿದೆ. ಪ್ರಭಾಕರ್‌ ಶೆಟ್ಟಿ(75 ವರ್ಷ) ವಿಜಯ ಲಕ್ಷ್ಮಿ (65 ವರ್ಷ) ಮೃತಪಟ್ಟ ವೃದ್ದರು.

ನಗರದ ಬಡಾವಣೆಯಲ್ಲಿ ವಾಸವಾಗಿದ್ದ ವೃದ್ದ ದಂಪತಿ ಇಬ್ಬರೇ ಮನೆಯಲ್ಲಿರುವುದನ್ನು ಖಚಿತಪಡಿಸಿಕೊಂಡ ದುಷ್ಕರ್ಮಿಗಳು ಅವರ ಕತ್ತು ಹಿಸುಕಿ ಕೊಯ್ದು ಕೊಲೆ (Mysterious murder) ಮಾಡಲಾಗಿದೆ. ಕೊಲೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ವೃದ್ದ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ. ಮನೆಯಲ್ಲಿ ವೃದ್ದ ದಂಪತಿ ಮಾತ್ರವೇ ವಾಸವಾಗಿದ್ದರು ಎನ್ನಲಾಗಿದೆ. ಇನ್ನೂ ಪ್ರಭಾಕರ್‌ ಶೆಟ್ಟರು ಹೊಸದುರ್ಗದಲ್ಲಿ ಅಡುಗೆ ಎಣ್ಣೆ ವ್ಯಾಪಾರ ಮಾಡುತ್ತಿದ್ದರು. ಇದೇ ಕಾರಣಕ್ಕೆ ವೈಯಕ್ತಿಕ ದ್ವೇಷವನ್ನಿಟ್ಟುಕೊಂಡು ದುಷ್ಕರ್ಮಿಗಳು ಹತ್ಯೆ ನಡೆಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಈ ಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಅಲ್ಲದೇ ಹೊಸದುರ್ಗ ಪಟ್ಟಣದಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಜಾಸ್ತಿ ಆಗಿವೆ.ರಾತ್ರಿ ಸಮಯದಲ್ಲಿ ಮನೆಗಳಿಗೆ ನುಗ್ಗಿ ಕಳ್ಳತನ ನಡೆಸುತ್ತಿದ್ದಾರೆ. ಅವರ ಕೃತ್ಯಕ್ಕೆ ಯಾರಾದರು ಅಡ್ಡಿಪಡಿಸಿದರೆ ಅಂತವರ ಹತ್ಯೆ ನಡೆಸುತ್ತಾರೆ. ಒಂದು ವೇಳೆ ವೃದ್ದ ದಂಪತಿಗಳ ಹತ್ಯೆಯೂ ಹೀಗೆ ಆಗಿರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ : K Muralidharan: ಖ್ಯಾತ ನಿರ್ಮಾಪಕ ಕೆ ಮುರಳೀಧರನ್ ಇನ್ನಿಲ್ಲ

ಇದನ್ನೂ ಓದಿ : leopard attack: ಚಿರತೆ ದಾಳಿಗೆ ಯುವತಿ ಬಲಿ: 7.5 ಲಕ್ಷ ರೂ. ಪರಿಹಾರ ಘೋಷಣೆ

ಇದನ್ನೂ ಓದಿ : Life threat to Pramod Muthalik: ಪ್ರಮೋದ್‌ ಮುತಾಲಿಕ್‌ ಗೆ ಜೀವ ಬೆದರಿಕೆ : ದೂರು ದಾಖಲು

ಇದನ್ನೂ ಓದಿ : Honey trap: ಮುಖ ನೋಡಿಲ್ಲ.. ಪರಸ್ಪರ ಭೇಟಿ ಮಾಡಿಲ್ಲ; ಕೇವಲ ಫೇಸ್ ಬುಕ್ ಡಿಪಿಗೆ ಮರುಳಾಗಿ ಆತ ಕಳೆದುಕೊಂಡಿದ್ದು ಬರೋಬ್ಬರಿ 40 ಲಕ್ಷ..!

(Mysterious murder) The act of strangulation of two elderly couple at home took place in Hosadurga town of Chitradurga district on Thursday evening. Prabhakar Shetty (75 years) and Vijaya Lakshmi (65 years) are the elderly who died.

Comments are closed.