ಗುಜರಾತಿನ ಪೆಟ್ರೋ ಕೆಮಿಕಲ್ ಕಂಪನಿಯಲ್ಲಿ ಭಾರೀ ಸ್ಫೋಟ: 2 ಮಂದಿ ಸಾವು, 2 ಮಂದಿಗೆ ಗಾಯ

ಗುಜರಾತ್‌: (Explosion at chemical company) ವಲ್ಸಾದ್ ಜಿಲ್ಲೆಯ ಪೆಟ್ರೋ ಕೆಮಿಕಲ್ ಕಂಪನಿಯಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಬೆಂಕಿ ಅವಘಡದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ. ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಗುಜರಾತ್‌ನ ಸರಿಗಮ್ ಜಿಐಡಿಸಿಯಲ್ಲಿರುವ ಕಂಪನಿಯಲ್ಲಿ ಸ್ಫೋಟ ಸಂಭವಿಸಿದೆ.

ಸೋಮವಾರ ರಾತ್ರಿ ಗುಜರಾತ್‌ ನ ವಲ್ಸಾದ್ ಜಿಲ್ಲೆಯ ಸರಿಗಮ್ ಜಿಐಡಿಸಿಯಲ್ಲಿರುವ ಪೆಟ್ರೋ ಕೆಮಿಕಲ್ ಕಂಪನಿಯಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ನಂತರ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಆದರೆ ಸ್ಫೋಟಕ್ಕೆ ನಿಖರ ಕಾರಣಗಳೇನು ಎಂದು ಇನ್ನೂ ತಿಳಿದುಬಂದಿಲ್ಲ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಇದೀಗ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಮೃತಪಟ್ಟವರ ಗುರುತು ಕೂಡ ಇನ್ನೂ ಪತ್ತೆಯಾಗಿಲ್ಲ. ರಾತ್ರಿ ಸ್ಫೋಟ ಸಂಭವಿಸಿದ್ದರಿಂದ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು, ಇಂದು ಪುನಃ ಕಾರ್ಯಾಚರಣೆ ಆರಂಭವಾಗಲಿದೆ.

ವಲ್ಸಾದ್ ಎಸ್ಪಿ ವಿಜಯ್ ಸಿಂಗ್ ಗುರ್ಜರ್ ಪ್ರಕಾರ, “ಸರಿಗಮ್ ಜಿಐಡಿಸಿಯಲ್ಲಿ ವ್ಯಾನ್ ಪೆಟ್ರೋ ಕೆಮಿಕಲ್ ಕಂಪನಿಯಲ್ಲಿ ಸ್ಫೋಟ ಸಂಭವಿಸಿದೆ, ನಂತರ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಸ್ಫೋಟದ ಕಾರಣ ತಿಳಿದಿಲ್ಲ. ಎರಡು ಮೃತ ದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಇಬ್ಬರು ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಇನ್ನೂ ಗುರುತಿಸಲಾಗಿಲ್ಲ. ರಾತ್ರಿ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು, ಇಂದು ಕಾರ್ಯಾಚರಣೆ ನಡೆಸಲಾಗುವುದು” ಎಂದು ವರದಿ ಮಾದ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ : Pulwama Encounter: ಪುಲ್ವಾಮಾ ಎನ್‌ಕೌಂಟರ್‌ನಲ್ಲಿ ಓರ್ವ ಭಯೋತ್ಪಾದಕನ ಹತ್ಯೆಗೈದ ಭದ್ರತಾ ಪಡೆಗಳು

ಫಾಕ್ಸ್‌ಲಿಂಕ್‌ನ ಉತ್ಪಾದನಾ ಘಟಕದಲ್ಲಿ ಭಾರಿ ಬೆಂಕಿ ಅವಘಡ

ತಿರುಪತಿಯಲ್ಲಿನ ಜಾಗತಿಕ ಟೆಕ್ ದೈತ್ಯ ಆಪಲ್‌ಗೆ ಕೇಬಲ್‌ಗಳನ್ನು ತಯಾರಿಸುವ ಫಾಕ್ಸ್‌ಲಿಂಕ್ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟಕದಲ್ಲಿ ಫೈಬರ್, ಶೀಟ್‌ಗಳು ಮತ್ತು ಸ್ಪಂಜುಗಳನ್ನು ಸಂಗ್ರಹಿಸಿದ್ದರಿಂದ ಬೆಂಕಿ ವೇಗವಾಗಿ ಹರಡಿದ್ದು, ಒಮ್ಮೆಲೆ ಇಡೀ ಘಟಕವನ್ನು ಬೆಂಕಿ ಆವರಿಸಿದೆ. ಆದರೆ ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಜಿಂಕಲಮಿಟ್ಟಾ ಗ್ರಾಮದ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 750 ಜನರು ಬೆಂಕಿ ಹೊತ್ತಿಕೊಂಡ ಕೂಡಲೇ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿದ್ದು, ಬೆಂಕಿ ಹರಡದಂತೆ ತಡೆದಿದ್ದಾರೆ. ಮೂರರಲ್ಲಿ ದೊಡ್ಡದಾದ ಶೆಡ್ ಸುಟ್ಟುಹೋಗಿದ್ದರೆ, ಇನ್ನೆರಡು ಸುರಕ್ಷಿತವಾಗಿವೆ. ಅತಿದೊಡ್ಡ ಶೆಡ್‌ನಲ್ಲಿ ಎಲ್ಲಾ ಉತ್ಪಾದನೆ ನಡೆಯುತ್ತದೆ. ಶೆಡ್, ಊಟದ ಪ್ರದೇಶ ಮತ್ತು ಅಡುಗೆಮನೆಗಳನ್ನು ಹೊಂದಿರುವ ಇತರ ಎರಡು ಶೆಡ್‌ ಗಳಿಗೆ ಹರಡಲಿಲ್ಲ ಎಂದು ರಾಮಚಂದ್ರ ಹೇಳಿದರು.

ಇದನ್ನೂ ಓದಿ : ಫಾಕ್ಸ್‌ಲಿಂಕ್‌ನ ಉತ್ಪಾದನಾ ಘಟಕದಲ್ಲಿ ಭಾರಿ ಬೆಂಕಿ ಅವಘಡ

Explosion at chemical company: Massive explosion at a petrochemical company in Gujarat: 2 dead, 2 injured

Comments are closed.