ಸ್ಯಾಂಡಲ್‌ವುಡ್‌ “ಕಬ್ಜ” ಸಿನಿಮಾದ ಟ್ರೈಲರ್‌ ಲಾಂಚ್‌ ಡೇಟ್‌ ಫಿಕ್ಸ್‌

ಸ್ಯಾಂಡಲ್‌ವುಡ್‌ ರಿಯಲ್‌ಸ್ಟಾರ್‌ ಉಪೇಂದ್ರ ಅಭಿನಯದ “ಕಬ್ಜ” ಸಿನಿಮಾ (Kabzaa Movie Trailer) ದಿನದಿಂದ ದಿನಕ್ಕೆ ಸಿನಿಪ್ರೇಕ್ಷಕರಲ್ಲಿ ನಿರೀಕ್ಷೆ ಹುಟ್ಟಿಸುತ್ತಿದೆ. ಆರ್‌. ಚಂದ್ರು ನಿರ್ದೇಶನದ ಈ ಸಿನಿಮಾ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್‌ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆಯಾದ ಟೀಸರ್‌ ಹಾಗೂ ಹಾಡುಗಳು ಸಿನಿಪ್ರೇಕ್ಷಕರ ಮನ ಗೆದಿದ್ದು, ಇನ್ನು ಟ್ರೈಲರ್‌ ಹಾಗೂ ಸಿನಿಮಾ ರಿಲೀಸ್‌ಗಾಗಿ ಜಾತಕಪಕ್ಷಿ ತರ ಕಾದು ಕುಳಿತಿದ್ದಾರೆ. ಸದ್ಯ ಸಿನಿತಂಡ ಟ್ರೈಲರ್‌ ರಿಲೀಸ್‌ಗೆ ದೊಡ್ಡ ಮಟ್ಟದಲ್ಲಿ ಈವೆಂಟ್‌ನ್ನು ಪ್ಲ್ಯಾನ್‌ ಮಾಡಿಕೊಂಡಿದ್ದು, ಟ್ರೈಲರ್‌ ಲಾಂಚ್‌ ಡೇಟ್‌, ಸ್ಥಳ ಕೂಡ ಫಿಕ್ಸ್‌ ಮಾಡಿದ್ದಾರೆ.

ಬಹುಕೋಟಿ ವೆಚ್ಚದಲ್ಲಿ ಕಬ್ಜ ನಿರ್ಮಾಣವಾಗಿದ್ದು, ಅದಕ್ಕಾಗಿ ಸಿನಿಮಾ ಪ್ರಮೋಷನ್‌, ರಿಲೀಸ್‌ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಇದೇ ಬರುವ ಮಾರ್ಚ್ 17ಕ್ಕೆ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದ ದಿನದಂದು ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಈಗ ಸಿನಿಮಾ ಟ್ರೈಲರ್‌ನ್ನು ಸಿನಿಮಂದಿರದಲ್ಲಿ ಬಿಡುಗಡೆ ಮಾಡುವುದು ಹೊಸ ಟ್ರೆಂಡ್‌ ಆಗಿದ್ದು, ‘ಕಬ್ಜ’ ಟ್ರೈಲರ್‌ನ್ನು ಕೂಡ ಮಾರ್ಚ್ 2ಕ್ಕೆ ಮುಂಬೈ ಅಂದೇರಿಯ ಸಿನಿಪೊಲೀಸ್ ಸಿನಿಮಂದಿರದಲ್ಲಿ ಲಾಂಚ್ ಈವೆಂಟ್ ನಡೆಯಲಿದೆ. ಅದಕ್ಕೆ ಬೇಕಾದ ಸಕಲ ತಯಾರಿಯಲ್ಲಿ ಸಿನಿತಂಡ ಬ್ಯುಸಿಯಾಗಿದೆ. ಆರ್‌. ಚಂದ್ರು ಬಹಳ ದೊಡ್ಡಮಟ್ಟದಲ್ಲಿ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದಾರೆ. ಸುಮಾರು 50 ದೇಶಗಳಲ್ಲಿ ಏಕಕಾಲಕ್ಕೆ 4000 ಸ್ಕ್ರೀನ್‌ಗಳಲ್ಲಿ ಆರ್‌. ಚಂದ್ರು ‘ಕಬ್ಜ’ ಸಿನಿಮಾವನ್ನು ರಿಲೀಸ್ ಮಾಡುವ ಲೆಕ್ಕಾಚಾರದಲ್ಲಿದ್ದಾರೆ.

ಕಬ್ಜ ಸಿನಿಮಾದಲ್ಲಿ ಉಪೇಂದ್ರ ಜೊತೆಗೆ ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟ ಸುದೀಪ್‌ ಕಬ್ಜದಲ್ಲಿ ಭಾರ್ಗವ್ ಭಕ್ಷಿ ಎನ್ನುವ ಖಡಕ್‌ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಉಪೇಂದ್ರ ಜೊತೆ ನಾಯಕಿಯಾಗಿ ಶ್ರಿಯಾ ಶರಣ್ ನಟಿಸಲಿದ್ದಾರೆ. ಇನ್ನುಳಿದಂತೆ ಮುರಳಿ ಶರ್ಮಾ, ನವಾಬ್ ಶಾ, ಕೋಟ ಶ್ರೀನಿವಾಸ್ ರಾವ್, ಕಬೀರ್ ದುಹಾನ್ ಸಿಂಗ್, ಜಾನ್ ಕೊಕೇನ್, ಬಿ. ಸುರೇಶ್ ತಾರಾಗಣದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ತಾನ್ಯಾ ಹೋಪ್ ಸಿನಿಮಾದ ಸ್ಪೆಷಲ್ ಸಾಂಗ್‌ನಲ್ಲಿ ಹೆಜ್ಜೆ ಹಾಕಿದ್ದಾರೆ.

ಈ ಸಿನಿಮಾಕ್ಕೆ ರವಿ ಬಸ್ರೂರು ಅವರ ಸಂಗೀತ ನಿರ್ದೇಶನ ಸಿನಿಮಾದ ಮತ್ತೊಂದು ಹೈಲೆಟ್‌ ಆಗಲಿದೆ. ಈ ಸಿನಿಮಾಕ್ಕೆ ಎ.ಜೆ ಶೆಟ್ಟಿ ಸಿನಿಮಾಟೋಗ್ರಫಿ ಮಾಡಿದ್ದಾರೆ. ಕಬ್ಜ ಸಿನಿಮಾದಲ್ಲಿ ಅಂಡರ್‌ವರ್ಲ್ಡ್‌ ಗ್ಯಾಂಗ್‌ಸ್ಟಾರ್‌ಗಳ ನಡುವ ಕಾದಾಟದ ಕಥಾಹಂದರವನ್ನು ಒಳಗೊಂಡಿದೆ. ಸ್ವಾತಂತ್ಯ್ರ ಕಾಲದಲ್ಲಿ ಬ್ರಿಟೀಷ್‌ ಆಳ್ವಿಕೆಯಲ್ಲಿ ಅನಿವಾರ್ಯ ಕಾರಣಗಳಿಂದ ಅರಕೇಶ್ವರ ಭೂಗತಲೋಕಕ್ಕೆ ಕಾಲಿಡುತ್ತಾನೆ.

ಇದನ್ನೂ ಓದಿ : Shilpa Shetty : ಸ್ಯಾಂಡಲ್‌ವುಡ್‌ಗೆ ಮತ್ತೆ ಬರಲಿದ್ದಾರೆ ಶಿಲ್ಪಾ ಶೆಟ್ಟಿ : ಯಾವ ಸಿನಿಮಾಕ್ಕಾಗಿ ಗೊತ್ತಾ ?

ಇದನ್ನೂ ಓದಿ : ಉರ್ಫಿ ಜಾವೇದ್‌ ರೀತಿ ಕಾಣಿಸಿಕೊಂಡ ಕಿರಿಕ್‌ ಬೆಡಗಿ : ಫೋಟೋ ಆಯ್ತು ಸಖತ್‌ ವೈರಲ್‌

ಇದನ್ನೂ ಓದಿ : ಜೋಶ್‌ ಅಪ್ಲಿಕೇಶನ್‌ ಚಾಲೆಂಜ್‌ ಸ್ವೀಕರಿಸಿ : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮೀಟ್ ಮಾಡಿ

ಮುಂದೆ ಆತ ಅಂಡರ್‌ವರ್ಲ್ಡ್‌ಗೆ ರಾಜನಾಗಿ ಮೆರೆಯುತ್ತಾನೆ. ಈ ಕಥೆಯನ್ನು ಒಳಗೊಂಡ ಸಿನಿಮಾ ಮುಂದೆ ಏನೆಲ್ಲಾ ತಿರುವು ಪಡೆದುಕೊಳ್ಳುತ್ತದೆ ಎನ್ನುವುದನ್ನು ನಿರ್ದೇಶಕ ಆರ್‌.ಚಂದ್ರು ತಿಳಿಸಿದ್ದಾರೆ. ನಿರ್ದೇಶಕ ಆರ್‌ ಚಂದ್ರು ಅವರು ಸ್ವತಃ ಕಥೆ, ಚಿತ್ರಕಥೇ ಬರೆದು ಕಬ್ಜ ಸಿನಿಮಾ ನಿರ್ಮಾಣ ಸಾಹಸ ಕೂಡ ಮಾಡಿದ್ದಾರೆ. ನಾಯಕಿ ಶ್ರಿಯಾ ಶರಣ್‌ ರಾಣಿ ಮಧುಮತಿ ಪಾತ್ರದಲ್ಲಿ ಮಿಂಚಿದ್ದಾರೆ. ಇದೀಗ ‘ಕಬ್ಜ’ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗುತ್ತಿದ್ದಾರೆ.

Kabzaa Movie Trailer : Sandalwood “Kabza” movie trailer launch date fixed

Comments are closed.