ಮಂಗಳವಾರ, ಏಪ್ರಿಲ್ 29, 2025
HomeCrimeಕಾಲೇಜು ಚುನಾವಣೆ ವೇಳೆ ಘರ್ಷಣೆ : ಇಂಜಿನಿಯರಿಂಗ್ ವಿದ್ಯಾರ್ಥಿಗಳ ನಡುವೆ ಮಾರಾಮಾರಿ

ಕಾಲೇಜು ಚುನಾವಣೆ ವೇಳೆ ಘರ್ಷಣೆ : ಇಂಜಿನಿಯರಿಂಗ್ ವಿದ್ಯಾರ್ಥಿಗಳ ನಡುವೆ ಮಾರಾಮಾರಿ

- Advertisement -

ಹಾಸನ: (Fights between engineering students) ನಗರದ ಪ್ರತಿಷ್ಠಿತ ತಾಂತ್ರಿಕ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದ್ದು, ವಿದ್ಯಾರ್ಥಿಗಳ ಗಲಾಟೆಗೆ ಸಾರ್ವಜನಿಕರು ಆತಂಕಕ್ಕೊಳಗಾಗಿರುವ ಘಟನೆ ಹಾಸನ ಜಿಲ್ಲೆಯ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ .

ತಾಂತ್ರಿಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಕಾಲೇಜಿನಲ್ಲಿ ವಿದ್ಯಾರ್ಥಿ ಪ್ರತಿನಿಧಿಯ ಚುನಾವಣೆ ನಡೆದಿತ್ತು. ನಿನ್ನೆ ಸಂಜೆ ಚುನಾವಣಾ ಫಲಿತಾಂಶ ಬಂದಿದ್ದು, ಗೆದ್ದವರು ಹಾಗೂ ಸೋತವರ ಬೆಂಗಲಿಗ ಗುಂಪುಗಳ ನಡುವೆ ಗಲಾಟೆ ನಡೆದಿದೆ. ವರದಿಗಳ ಪ್ರಕಾರ ಚುನಾವಣೆಯಲ್ಲಿ ಗೆದ್ದಿದ್ದ ಗುಂಪಿನ ವಿದ್ಯಾರ್ಥಿಗಳು ಪೊಲೀಸರ ಅನುಮತಿ ಪಡೆದು ನಗರದಲ್ಲಿ ಮೆರವಣಿಗೆ ಮಾಡಿದ್ದರು.

ವಿದ್ಯಾರ್ಥಿಗಳ ವಿರುದ್ದ ಕಿಡಿಕಾರಿದ ಸಾರ್ವಜನಿಕರು:

ಈ ವೇಳೆ ಸೋತವರ ಮೇಲೆ ಯುವಕರು ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ವಿದ್ಯಾರ್ಥಿಗಳ ಗಲಾಟೆಯಿಂದ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಲಾಠಿ ಬೀಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಚುನಾವಣೆ ಹೆಸರಿನಲ್ಲಿ ವಿದ್ಯಾರ್ಥಿಗಳು ಪುಂಡಾಟ ನಡೆಸುತ್ತಿದ್ದಾರೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

ಇದನ್ನೂ ಓದಿ : Bengaluru Murder Case: ಚಾಕುವಿನಿಂದ ಇರಿದು ನಡುರಸ್ತೆಯಲ್ಲಿ ಯುವಕನ ಬರ್ಬರ ಹತ್ಯೆ

ಇದನ್ನೂ ಓದಿ : Lovers get suicide: ಒಂದೇ ನೇಣಿನ ಕುಣಿಕೆಗೆ ಕೊರಳೊಡ್ಡಿದ ಪ್ರೇಮಿಗಳು

ಇದನ್ನೂ ಓದಿ : ಕಾರಿನೊಳಗೆ ಟೆಕ್ಕಿ ವಿಚಿತ್ರ ಆತ್ಮಹತ್ಯೆ : ಜೀವಕ್ಕೆ ಮುಳುವಾಯ್ತು ಗೂಗಲ್ ಸರ್ಜ್

ಇದನ್ನೂ ಓದಿ : Telangana Kidnap case: ತಂದೆಯ ಎದುರೇ ಯುವತಿಯ ಅಪಹರಣ: ವಿಡಿಯೋ ವೈರಲ್‌

ಇದನ್ನೂ ಓದಿ : SriLanka Drug Mafia: ಶಸ್ತ್ರಾಸ್ತ್ರ, ಡ್ರಗ್ಸ್‌ ಕಳ್ಳ ಸಾಗಾಣಿಕೆ : ಪಾಕ್‌ ನಂಟು ಹೊಂದಿದ 9 ಮಂದಿಯ ಬಂಧನ

A fight took place between the students of a prestigious technical engineering college in the city, and the public was worried about the students’ commotion.

RELATED ARTICLES

Most Popular