Oreo Fudge Recipe:ಓರಿಯೋ ಐಸ್ ಕ್ರೀಮ್ ಇಷ್ಟ ಆದವರು, ಮನೆಯಲ್ಲೇ ಮಾಡಿ ರುಚಿ ನೋಡಿ ಓರಿಯೋ ಫಡ್ಜ್

(Oreo Fudge Recipe)ಐಸ್‌ ಕ್ರೀಮ್‌ ಪಾರ್ಲರ್‌ ಗೆ ಹೋದರೆ ಹಲವು ಬಗೆಯ ಐಸ್‌ ಕ್ರೀಮ್‌ ಸಿಗುತ್ತದೆ, ಕೆಲವೊಮ್ಮೆ ಐಸ್‌ ಕ್ರೀಮ್‌ ಪಾರ್ಲರ್‌ ನಲ್ಲಿ ವಿಭಿನ್ನವಾದಂತಹ ಐಸ್‌ ಕ್ರೀಮ್‌ ಮಾಡುತ್ತಾರೆ ಅದರಲ್ಲಿ ಓರಿಯೋ ಬಿಸ್ಕೆಟ್‌ ಐಸ್‌ ಕ್ರೀಮ್‌ ಕೂಡ ಒಂದು. ಈ ಓರಿಯೋ ಬಿಸ್ಕೆಟ್‌ ಐಸ್‌ ಕ್ರೀಮ್‌ ಸ್ವಲ್ಪ ಸಮಯ ಹೆಸರುವಾಸಿ ಆಗಿತ್ತು. ಗ್ರಾಹಕರು ಐಸ್ ಕ್ರೀಮ್‌ ಪಾರ್ಲರ್‌ ಗೆ ಹೋದಾಗ ಮೊದಲು ಓರಿಯೋ ಐಸ್‌ ಕ್ರೀಮ್‌ ಕೇಳುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಓರಿಯೋ ಫಡ್ಜ್‌ ಎನ್ನುವ ಸಿಹಿ ತಿಂಡಿಗೆ ಅತಿ ಹೆಚ್ಚು ಬೇಡಿಕೆ ಬರುತ್ತಿದೆ. ಮಾಲ್‌ ಅಥವ ಬೇಕರಿಗಳಲ್ಲಿ ಜನರು ಅತಿ ಹೆಚ್ಚು ಓರಿಯೋ ಫಡ್ಜ್‌ ಕೇಳುತ್ತಿದ್ದಾರೆ. ನೀವು ಇನ್ನು ಓರಿಯೋ ಫಡ್ಜ್‌ ತಿಂದಿಲ್ಲವೆಂದರೆ ಮನೆಯಲ್ಲಿಯೇ ಇದನ್ನು ಮಾಡಿಕೊಳ್ಳಬಹುದು. ಓರಿಯೋ ಫಡ್ಜ್‌ ಹೇಗೆ ಮಾಡುವುದು ಎಂಬ ಮಾಹಿತಿಯ ಕುರಿತು ತಿಳಿಯಿರಿ.

(Oreo Fudge Recipe)ಬೇಕಾಗುವ ಸಾಮಾಗ್ರಿಗಳು:

  • ಓರಿಯೋ ಬಿಸ್ಕೆಟ್‌
  • ವೈಟ್‌ ಚಾಕೊಲೆಟ್‌
  • ಕಂಡೆನ್ಸಡ್‌ ಮಿಲ್ಕ್‌
  • ಬೆಣ್ಣೆ

ಮಾಡುವ ವಿಧಾನ:
ಓರಿಯೋ ಬಿಸ್ಕೆಟ್‌ ಪ್ಯಾಕ್‌ ಒಡೆದು ಈ ಬಿಸ್ಕೆಟ್‌ ಅನ್ನು ಪುಡಿ ಮಾಡಿಕೊಂಡು ಬೌಲ್‌ ನಲ್ಲಿ ಹಾಕಿ ಇಟ್ಟುಕೊಳ್ಳಿ . ನಂತರ ಗ್ಯಾಸ್‌ ಮೇಲೆ ನೀರು ಕಾಯಲು ಇಟ್ಟು ಅದರ ಮೇಲೆ ಇನ್ನೊಂದು ಪಾತ್ರೆಯನ್ನು ಇಟ್ಟುಕೊಂಡು ವೈಟ್‌ ಚಾಕೊಲೆಟ್‌ ಹಾಕಿ ಕರಗುವ ವರೆಗೂ ಸೌಟನ್ನು ಆಡಿಸಬೇಕು. ನಂತರ ಅದಕ್ಕೆ ಕಂಡೆನ್ಸಡ್‌ ಮಿಲ್ಕ್‌, ಕರಗಿದ ಬೆಣ್ಣೆ ಪುಡಿಮಾಡಿಕೊಂಡ ಓರಿಯೋ ಬಿಸ್ಕೆಟ್‌ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಈ ಮಿಶ್ರಣವನ್ನು ಚೌಕ ಇರುವ ಡಬ್ಬಕ್ಕೆ ಹಾಕಿ ಅದರ ಮೇಲೆ ಸಣ್ಣ ತುಂಡು ಮಾಡಿದ ಓರಿಯೋ ಬಿಸ್ಕೆಟ್‌ ಇಟ್ಟು ಇದನ್ನು ಚೌಕ ಆಕಾರದಲ್ಲಿ ಕಟ್‌ ಮಾಡಿಕೊಂಡರೆ ಓರಿಯೋ ಫಡ್ಜ್‌ ರೆಡಿ.

ಇದನ್ನೂ ಓದಿ:Christmas Fruit Cake Recipe:ಮೊಟ್ಟೆ ,ವೈನ್‌ ಬಳಸದೆ ಸುಲಭದಲ್ಲಿ ತಯಾರಿಸಿ ಪ್ರೂಟ್ ಕೇಕ್‌

ಇದನ್ನೂ ಓದಿ:Ragi Laddu Recipe:ರಾಗಿ ಮುದ್ದೆ, ದೋಸೆ ಇಷ್ಟಪಡದವರು ತಿನ್ನಿ ರಾಗಿ ಲಡ್ಡು

ಇದನ್ನೂ ಓದಿ:Crab Sukka Recipe:ಆಹಾ ರುಚಿಯಾದ ಏಡಿ ಸುಕ್ಕಾ (Crab Sukka ) ಒಮ್ಮೆ ಟ್ರೈ ಮಾಡಿ

ಓರಿಯೋ ಮಿಲ್ಕ್‌ ಶೇಖ್‌

ಬೇಕಾಗುವ ಸಾಮಾಗ್ರಿಳು:

  • ಓರಿಯೋ ಬಿಸ್ಕೆಟ್‌
  • ಹಾಲು
  • ವೆನಿಲ್ಲಾ ಐಸ್‌ ಕ್ರೀಮ್‌
  • ಡೈರಿಮಿಲ್ಕ್‌ ಚಾಕೊಲೆಟ್‌
  • ಸಕ್ಕರೆ

ಮಿಕ್ಸಿ ಜಾರಿಯಲ್ಲಿ ನಾಲ್ಕು ಓರಿಯೋ ಬಿಸ್ಕೆಟ್‌, ಒಂದು ಕಪ್‌ ಹಾಲು, ಒಂದು ಕಪ್‌ ವೆನಿಲ್ಲಾ ಐಸ್‌ ಕ್ರೀಮ್‌, ಒಂದು ಕಪ್‌ ಡೈರಿಮಿಲ್ಕ್ ಚಾಕೊಲೆಟ್‌ ಅಥವಾ ನಿಮ್ಮ ಇಷ್ಟದ ಚಾಕೊಲೆಟ್‌ ಹಾಕಿಕೊಳ್ಳಿ, ಒಂದು ಚಮಚ ಸಕ್ಕರೆ ಹಾಕಿ ರುಬ್ಬಿಕೊಂಡರೆ ಓರಿಯೋ ಮಿಲ್ಕ್‌ ಶೇಖ್‌ ಕುಡಿಯಲು ರೆಡಿ

Oreo Fudge Recipe For those who like Oreo ice cream, make it at home Oreo Fudge

Comments are closed.