Fire accident-couple died: ಹೊತ್ತಿ ಉರಿದ ಮನೆ ಮತ್ತು ಬಟ್ಟೆ ಅಂಗಡಿ : ದಂಪತಿ ಸಜೀವ ದಹನ

ಯಾದಗಿರಿ : (Fire accident-couple died) ಜಿಲ್ಲೆಯಲ್ಲಿ ಮನಕಲುಕುವ ಘಟನೆಯೊಂದು ನಡೆದಿದ್ದು, ಶಾರ್ಟ್‌ ಸರ್ಕ್ಯೂಟ್‌ ನಿಂದಾಗಿ ಮನೆ ಹಾಗೂ ಬಟ್ಟೆ ಅಂಗಡಿ ಹೊತ್ತಿ ಉರಿದಿದ್ದು ದಂಪತಿಗಳು ಸಜೀವ ದಹನವಾಗಿದ್ದಾರೆ. ರಾಗಯ್ಯ (36 ವರ್ಷ) ಹಾಗೂ ಪತ್ನಿ ಶಿಲ್ಪ (35 ವರ್ಷ) ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೃತಪಟ್ಟ ದಂಪತಿಗಳು.

ಅಶೋಕಯ್ಯ ಕಾಳಬೆಳಗುಂದಿ ಎನ್ನುವವರಿಗೆ ಸೇರಿದ ಮನೆ ಹಾಗೂ ಅದೇ ಮನೆಯಲ್ಲಿದ್ದ ಬಟ್ಟೆ ಅಂಗಡಿಗೆ ಏಕಾಏಕಿ ಬೆಂಕಿ ಆವರಿಸಿಕೊಂಡಿದ್ದು, ಇಡೀ ಮನೆಗೆ ಬೆಂಕಿಯ ಹೊಗೆ ಆವರಿಸಿಕೊಂಡಿದೆ. ಇದರಿಂದಾಗಿ ದಂಪತಿಗಳಿಗೆ ಮನೆಯಿಂದ ಹೊರಬರಲು ಸಾಧ್ಯವಾಗದೇ ಪರದಾಡಿದ್ದು, ಬೆಂಕಿಯಲ್ಲಿ ದಂಪತಿಗಳು ಸುಟ್ಟು ಕರಕಲಾಗಿದ್ದಾರೆ. ನಿನ್ನೆ ರಾತ್ರಿ ಈ ಬೆಂಕಿ ಅವಘಡ ಸಂಭವಿಸಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಸದ್ಯ ಘಟನೆಯ ಕುರಿತು ಸೈದಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಬೈನ ಸಾಕಿ ನಾಕಾ ಮೆಟ್ರೋ ಸ್ಟೇಷನ್ನಲ್ಲಿ ಬೆಂಕಿ ಅವಘಡ: ಓರ್ವ ಸಾವು

ನವದೆಹಲಿ: ಮುಂಬೈನ ಸಾಕಿ ನಾಕಾ ಮೆಟ್ರೋ ನಿಲ್ದಾಣದ ಬಳಿ ಸೋಮವಾರ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಒಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಐದು ಅಗ್ನಿಶಾಮಕ ಟೆಂಡರ್‌ಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ಹತೋಟಿಗೆ ತರಲಾಗಿದೆ. ರಾಕೇಶ್ ಗುಪ್ತಾ (22 ವರ್ಷ) ಮೃತ ವ್ಯಕ್ತಿ.

BMC ಅಧಿಕಾರಿಗಳ ಪ್ರಕಾರ, ಬೆಂಕಿಯು ಎಲೆಕ್ಟ್ರಿಕ್ ವೈರಿಂಗ್‌ಗಳು, ಎಲೆಕ್ಟ್ರಿಕ್ ಅಳವಡಿಕೆಗಳು ಮತ್ತು ಅಂಗಡಿಯೊಳಗೆ ಇದ್ದ ದೊಡ್ಡ ಪ್ರಮಾಣದ ಹಾರ್ಡ್‌ವೇರ್ ಅನ್ನು ಆವರಿಸಿದೆ. ಅಂಗಡಿಯೊಳಗೆ ಎರಡರಿಂದ ಮೂರು ವ್ಯಕ್ತಿಗಳು ಸಿಕ್ಕಿಬಿದ್ದಿದ್ದಾರೆ ಮತ್ತು ಬಿದ್ದ ಮೇಲಂತಸ್ತು ಮತ್ತು ದೊಡ್ಡ ಪ್ರಮಾಣದ ಹಾರ್ಡ್‌ವೇರ್ ರಚನೆಯನ್ನು ಪ್ರವೇಶಿಸಲು ತೊಂದರೆ ಉಂಟುಮಾಡಿದೆ ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ “ಜೆಸಿಬಿ ಸಹಾಯದಿಂದ ರಚನೆಯ ಮುಂಭಾಗದ ಭಾಗವನ್ನು ಕೆಡವುವ ಕಾರ್ಯ ಪ್ರಗತಿಯಲ್ಲಿದೆ” ಎಂದು ಬಿಎಂಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.

ಇದನ್ನೂ ಓದಿ : 15 month old child died: ಪತಿ – ಪತ್ನಿಯ ಜಗಳಕ್ಕೆ 15 ತಿಂಗಳ ಕಂದಮ್ಮ ಬಲಿ

Fire accident-couple died: House and clothes shop burnt by fire: Couple burnt alive

Comments are closed.