Fire accident in train : ತಮಿಳುನಾಡು ರೈಲು ದುರಂತ : ಮೃತರ ಸಂಖ್ಯೆ 10ಕ್ಕೆ ಏರಿಕೆ : ಮುಂದುವರಿದ ರಕ್ಷಣಾ ಕಾರ್ಯಾಚರಣೆ

ತಮಿಳುನಾಡು : ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ರೈಲಿನಲ್ಲಿ (Fire accident in train) ಸಂಬಂಧಿಸಿದ್ದ ಅಗ್ನಿ ದುರಂತದಲ್ಲಿ ಸಾವನ್ನಪ್ಪಿರುವ ಪ್ರಯಾಣಿಕರ ಸಂಖ್ಯೆ ಇದೀಗ 10ಕ್ಕೆ ಏರಿಕೆಯಾಗಿದೆ. ಅಲ್ಲದೇ ಗಾಯಗೊಂಡಿರುವ 20 ಕ್ಕೂ ಅಧಿಕ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.

ಶನಿವಾರ ಮುಂಜಾನೆ ತಮಿಳುನಾಡಿನ ಮಧುರೈ ರೈಲು ನಿಲ್ದಾಣದ ಬಳಿಯ ಬೋಡಿ ಲೇನ್‌ನಲ್ಲಿ ನಿಂತಿದ್ದ ಪ್ರವಾಸಿ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂಬತ್ತು ಜನರು ಸಾವನ್ನಪ್ಪಿದ್ದು, 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತದೇಹಗಳನ್ನು ಮಧುರೈನ ಸರಕಾರಿ ರಾಜಾಜಿ ಆಸ್ಪತ್ರೆಗೆ ರವಾನಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇಂದು ಮುಂಜಾನೆ 5:15ರ ಸುಮಾರಿಗೆ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಅರ್ಧ ಗಂಟೆಯ ನಂತರ 7:15 ರ ವೇಳೆಗೆ ಬೆಂಕಿಯನ್ನು ನಂದಿಸಿದ್ದಾರೆ ಎಂದು ದಕ್ಷಿಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಇದು ಖಾಸಗಿ ಪಾರ್ಟಿ ಕೋಚ್ ಆಗಿದ್ದು, ನಿನ್ನೆ (ಆ. 25) ನಾಗರ್‌ಕೋಯಿಲ್ ಜಂಕ್ಷನ್‌ನಲ್ಲಿ ರೈಲು ಸಂಖ್ಯೆ 16730 (ಪುನಲೂರ್-ಮಧುರೈ ಎಕ್ಸ್‌ಪ್ರೆಸ್) ಅನ್ನು ಲಗತ್ತಿಸಲಾಗಿದೆ. ಪಾರ್ಟಿ ಕೋಚ್ ಅನ್ನು ಬೇರ್ಪಡಿಸಿ ಮಧುರೈ ಸ್ಟೇಬ್ಲಿಂಗ್ ಲೈನ್‌ನಲ್ಲಿ ಇರಿಸಲಾಗಿತ್ತು. ಆದರೆ ಖಾಸಗಿ ಪಾರ್ಟಿ ಕೋಚ್‌ನಲ್ಲಿನ ಪ್ರಯಾಣಿಕರು ಅಕ್ರಮವಾಗಿ ಪ್ರಯಾಣಿಸಿದ್ದಾರೆ. ಗ್ಯಾಸ್ ಸಿಲಿಂಡರ್ ಅನ್ನು ಕಳ್ಳಸಾಗಣೆ ಮಾಡಲಾಗಿದ್ದು, ಪ್ರಯಾಣಿಕರು ಕಾಫಿ ಮಾಡಲು ಗ್ಯಾಸ್‌ ಸ್ಟೌವ್‌ ಹೊತ್ತಿಸಿದಾಗ ಗ್ಯಾಸ್‌ ಸಿಲಿಂಡರ್‌ ಸ್ಪೋಟಗೊಂಡು ಈ ದುರಂತ ಸಂಭವಿಸಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಹಲವು ಪ್ರಯಾಣಿಕರು ಕೋಚ್‌ನಿಂದ ಹೊರಗೆ ಓಡಿ ಬಂದಿದ್ದರೆ. ಅಲ್ಲದೇ ಕೆಲವು ಫ್ಲಾಟ್‌ ಫಾರ್ಮ್‌ನಲ್ಲಿ ಇಳಿದಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಪೊಲೀಸರು, ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ, ರೈಲ್ವೆ ಸಿಬ್ಬಂದಿ, ಬೆಂಕಿಯನ್ನು ನಂದಿಸುವಲ್ಲಿ ತೊಡಗಿದ್ದು, ಸುಟ್ಟ ದೇಹಗಳನ್ನು ಕಂಪಾರ್ಟ್‌ಮೆಂಟ್‌ ಹೊರ ತೆಗೆಯಲಾಗಿದೆ. ಸದ್ಯ ಹತ್ತು ಮೃತದೇಹಗಳು ಪತ್ತೆಯಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಅಲ್ಲದೇ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಮಧುರೈ ಜಿಲ್ಲಾಧಿಕಾರಿ ಎಂಎಸ್ ಸಂಗೀತಾ ಹೇಳಿದ್ದಾರೆ. ಇದನ್ನೂ ಓದಿ : Delhi Mid-Day Meal : ಸರಕಾರಿ ಶಾಲೆಯಲ್ಲಿ ಬಿಸಿಯೂಟ ಸೇವೆನೆ : 70ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ

ಅಪಘಾತದ ಸ್ಥಳದಲ್ಲಿ ಚದುರಿದ ವಸ್ತುಗಳ ಪೈಕಿ ಸಿಲಿಂಡರ್ ಮತ್ತು ಆಲೂಗಡ್ಡೆಯ ಚೀಲ ಪತ್ತೆಯಾಗಿದೆ. ಆಹಾರವನ್ನು ಅಕ್ರಮವಾಗಿ ಸಿದ್ದ ಪಡಿಸಲು ರೆಡಿ ಮಾಡಲಾಗುತ್ತಿತ್ತು. IRCTC ಪೋರ್ಟಲ್ ಬಳಸಿ ಯಾವುದೇ ವ್ಯಕ್ತಿ ಪಾರ್ಟಿ ಕೋಚ್ ಅನ್ನು ಬುಕ್ ಮಾಡಬಹುದು. ಗ್ಯಾಸ್ ಸಿಲಿಂಡರ್‌ನಂತಹ ಯಾವುದೇ ದಹನಕಾರಿ ವಸ್ತುಗಳನ್ನು ಸಾಗಿಸಲು ಅವರಿಗೆ ಅನುಮತಿಸಲಾಗುವುದಿಲ್ಲ. ಕೋಚ್ ಅನ್ನು ಸಾರಿಗೆ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಸದ್ಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

Fire accident in train: Tamil Nadu train accident: Death toll rises to 10: Rescue operation continues

Comments are closed.