girl dies in bengaluru : ಮನೆ ಮಾಲೀಕನ ಯಡವಟ್ಟಿಗೆ ಪ್ರಾಣ ಬಿಟ್ಟ ಆರು ವರ್ಷದ ಪುಟ್ಟ ಬಾಲಕಿ

ಬೆಂಗಳೂರು : girl dies in bengaluru : ಮನೆ ಮಾಲೀಕನ ಯಡವಟ್ಟಿಗೆ ಆರು ವರ್ಷದ ಪುಟ್ಟ ಬಾಲಕಿ ಪ್ರಾಣ ಪಕ್ಷಿಯೇ ಹಾರಿ ಹೋದ ಘಟನೆಯು ಬೆಂಗಳೂರಿನ ವಸಂತನಗರದಲ್ಲಿ ನಡೆದಿದೆ.ಮನೆಯಲ್ಲಿ ಕಾಟ ನೀಡುತ್ತಿದ್ದ ತಿಗಣೆಯನ್ನು ನಿಯಂತ್ರಣಕ್ಕೆ ತರಲು ಮನೆ ಮಾಲೀಕ ಕ್ರಿಮಿನಾಶಕವನ್ನು ಸಿಂಪಡಣೆ ಮಾಡಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಮೃತಪಟ್ಟ ಬಾಲಕಿಯನ್ನು ಅಹಾನಾ(6) ಎಂದು ಗುರುತಿಸಲಾಗಿದೆ.


ಅಹನಾಳ ತಂದೆ ವಿನೋದ್​ ಹಾಗೂ ತಾಯಿ ನಿಶಾ ಮೂಲತಃ ಕೇರಳದವರು. ಎಂಬಿಎ ಪದವಿಧರರಾದ ವಿನೋದ್​ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ವಸಂತನಗರದ ಮಾರಮ್ಮ ದೇವಸ್ಥಾನದ ಸಮೀಪವೇ ಇದ್ದ ಎಸ್​. ಶಿವಪ್ರಸಾದ್​ ಎಂಬವರಿಗೆ ಸೇರಿದ ಮೂರು ಬಾಡಿಗೆ ಮನೆಗಳ ಪೈಕಿ ಒಂದರಲ್ಲಿ ಅಹಾನಾಳ ಕುಟುಂಬ ವಾಸವಿತ್ತು. ಈ ಬಾಡಿಗೆ ಮನೆಗಳಲ್ಲಿ ತಿಗಣೆಯ ಕಾಟ ಮಿತಿಮೀರಿತ್ತು.


ಕಟ್ಟಡದಲ್ಲಿ ಹೆಚ್ಚಾಗಿದ್ದ ತಿಗಣೆ ಕಾಟವನ್ನು ನಿಯಂತ್ರಣಕ್ಕೆ ತರಬೇಕೆಂದು ಶಿವಪ್ರಸಾದ್​ ತಮ್ಮ ನಿವಾಸವೂ ಸೇರಿದಂತೆ ಒಟ್ಟು ನಾಲ್ಕು ಮನೆಗಳಲ್ಲಿ ಕ್ರಿಮಿ ನಾಶಕವನ್ನು ಸಿಂಪಡಣೆ ಮಾಡಿಸಿದ್ದಾರೆ. ಜುಲೈ 27ರಂದು ಕ್ರಿಮಿನಾಶಕ ಸಿಂಪಡಣೆ ಮಾಡಿಸಿದ್ದ ಶಿವಪ್ರಸಾದ್​ ಮುನ್ನೆಚ್ಚರಿಕಾ ಕ್ರಮವಾಗಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಕುಟುಂಬಕ್ಕೆ ಬೇರೆಡೆ ಶಿಫ್ಟ್​ ಆಗಿ ಎಂದು ಹೇಳಿದ್ದಾರೆ.


ವಿನೋದ್​ ನಿವಾಸವನ್ನು ಹೊರತುಪಡಿಸಿ ಬಾಡಿಗೆದಾರರು ಜುಲೈ 31ರಂದು ತಮ್ಮ ಮನೆಗೆ ಮರಳಿದ್ದರು. ವಿನೋದ್​ ಹಾಗೂ ಪತ್ನಿ ನಿಶಾ ಮತ್ತು ಪುತ್ರಿ ಅಹಾನಾ ಆಗಸ್ಟ್​ 1ರ ಮುಂಜಾನೆ ತಮ್ಮ ನಿವಾಸಕ್ಕೆ ಮರಳಿದ್ದಾರೆ. ಮನೆಗೆ ಆಗಮಿಸಿದ ಈ ಕುಟುಂಬ ಕಾಫಿ ಸೇವನೆ ಮಾಡಿದೆ.ಇಆದ ಬಳಿಕ ಮೂವರಿಗೂ ವಾಂತಿ ಆರಂಭಗೊಂಡಿದೆ. ಮೂವರಿಗೂ ಉಸಿರಾಡಲು ಸಮಸ್ಯೆ ಉಂಟಾಗುತ್ತಿದ್ದಂತೆಯೇ ಆಂಬುಲೆನ್ಸ್​ ಮೂಲಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.


ಐಸಿಯುವಿನಲ್ಲಿ ಮೂವರಿಗೂ ಚಿಕಿತ್ಸೆ ನೀಡಲಾಯ್ತಾದರೂ ಅಹಾನಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ನಿಶಾ ಹಾಗೂ ವಿನೋದ್​ ಸ್ಥಿತಿ ಕೂಡ ಗಂಭೀರವಾಗಿ ಇರುವುದರಿಂದ ಅವರಿಗೆ ಇನ್ನೂ ಅಹಾನಾ ಸಾವಿನ ವಾರ್ತೆಯನ್ನು ಕುಟುಂಬಸ್ಥರು ನೀಡಿಲ್ಲ. ಆದರೆ ನಿಶಾ ಸಹೋದರಿ ಲತಾ ಎಂಬವರು ಹೈಗ್ರೌಂಡ್ಸ್​ ಪೊಲೀಸ್​ ಠಾಣೆಗೆ ದೂರನ್ನು ನೀಡಿದ್ದು ಶಿವಪ್ರಸಾದ್​ರ ನಿರ್ಲಕ್ಷ್ಯದಿಂದಲೇ ಈ ಅವಘಡ ಸಂಭವಿಸಿದೆ ಎಂದು ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಮನೆ ಮಾಲೀಕ ಶಿವಪ್ರಸಾದ್​ರನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನು ಓದಿ : Amit Shah will arrive in Bangalore : ಅತ್ತ ಸಿದ್ದರಾಮೋತ್ಸವ.. ಇತ್ತ ಅಮಿತ್​ ಶಾ ಬೆಂಗಳೂರಿಗೆ ಆಗಮನ : ಏನಿದು ರಾಜಕೀಯ ತಂತ್ರ

ಇದನ್ನೂ ಓದಿ : Monkeypox Vs Chickenpox : ಮಂಕಿಪಾಕ್ಸ್‌ ಮತ್ತು ಚಿಕನ್‌ಪಾಕ್ಸ್‌ ನ ವ್ಯತ್ಯಾಸ ನಿಮಗೆ ಗೊತ್ತೇ? ಇವೆರಡರ ರೋಗಲಕ್ಷಣಗಳೇನು?

girl dies in bengaluru after inhaling pesticide

Comments are closed.