ಗುಜರಾತ್ : Five men gang-rape : ದೆಹಲಿಯ ನಿರ್ಭಯಾ ಸಾಮೂಹಿಕ ಅತ್ಯಾಚಾರದ ಪ್ರಕರಣವನ್ನು ಹೋಲುವಂತಹ ಕರಾಳ ಘಟನೆಯೊಂದು ಗುಜರಾತ್ನ ಸೂರತ್ನಲ್ಲಿ ಭಾನುವಾರ ನಡೆದಿದೆ. 27 ವರ್ಷದ ಯುವತಿಯ ಪ್ರಿಯಕರನ ಎದುರಲ್ಲೇ ಆಕೆಯನ್ನು ಐವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಆರೋಪಿಗಳು ಈ ಸಾಮೂಹಿಕ ಅತ್ಯಾಚಾರವನ್ನು ಎಸಗಿ ಮೊಬೈಲ್ಗಳ ಸಮೇತ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಭಾನುವಾರ ರಾತ್ರಿ ಎಂಟು ಗಂಟೆ ಸುಮಾರಿಗೆ ಮಹಿಳೆಯು ತನ್ನ ಬಾಯ್ಫ್ರೆಂಡ್ ಜೊತೆಯಲ್ಲಿ ರಸ್ತೆ ಬದಿಯಲ್ಲಿ ಕುಳಿತು ಮಾತನಾಡುತ್ತಿದ್ದಳು. ಈ ವೇಳೆ ಅಲ್ಲಿಗೆ ಬಂದ ಕಾಮುಕರು ಇವರಿಬ್ಬರಿಗೆ ತಮ್ಮೊಂದಿಗೆ ಬರುವಂತೆ ಹೇಳಿದ್ದಾರೆ. ಆದರೆ ಅದಕ್ಕೆ ಯುವಕ ಹಾಗೂ ಯುವತಿ ಒಪ್ಪಿಗೆ ನೀಡಿಲ್ಲ. ಇದಾದ ಬಳಿಕ ಕಾಮುಕರು ಯುವಕನಿಗೆ ಮನಬಂದಂತೆ ಥಳಿಸಿದ್ದಾರೆ. ಮಾತ್ರವಲ್ಲದೇ ಆತನನ್ನು ಮೈದಾನದಲ್ಲಿ ಕಟ್ಟಿ ಹಾಕಿದ್ದಾರೆ. ಬಾಯ್ಫ್ರೆಂಡ್ನ ಎದುರಲ್ಲೇ ಯುವತಿಯನ್ನು ವಿವಸ್ತ್ರಗೊಳಿಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಾಮೂಹಿಕ ಅತ್ಯಾಚಾರದ ಬಳಿಕ ಸಂತ್ರಸ್ತೆಯು ತನ್ನ ಸಹೋದರಿಗೆ ಈ ಘಟನೆ ಬಗ್ಗೆ ಮಾಹಿತಿ ನೀಡಿದ್ದಾಳೆ . ಬಳಿಕ ಪೊಲೀಸ್ ಠಾಣೆಗೆ ತೆರಳಿ ಕೃತ್ಯದ ಬಗ್ಗೆ ದೂರನ್ನು ನೀಡಲಾಗಿದೆ. ಐವರು ಅಪರಿಚಿತರ ವಿರುದ್ಧ ಪೊಲೀಸರು ಸೋಮವಾರ ಸಂಜೆ ಸುಮಾರಿಗೆ ಪ್ರಕರಣ ದಾಖಲಿಸಿದ್ದಾರೆ .
ಈ ಘಟನೆ ಸಂಬಂಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು ತನಿಖೆ ನಡೆಸುತ್ತಿದ್ದೇವೆ. ಆದಷ್ಟು ಬೇಗ ಐವರು ಕಾಮುಕರನ್ನು ಪತ್ತೆ ಹಚ್ಚಿ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಮಾಹಿತಿ ನೀಡಿದ್ದಾರೆ. ಮಹಿಳೆಯ ಗೆಳೆಯನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದೇವೆ. ಆರೋಪಿಗಳು ಬಿಹಾರಿ ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ಸಂತ್ರಸ್ತೆ ಮಾಹಿತಿ ನೀಡಿದ್ದಾಳೆ ಎಂದು ಪೊಲೀಸ್ ತಿಳಿಸಿದ್ದಾರೆ . ಐವರು ಸಾಮೂಹಿಕ ಅತ್ಯಾಚಾರಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಡಿ) (ಗ್ಯಾಂಗ್ ರೇಪ್), 284 (ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಪರಾಧಗಳು) ಮತ್ತು 506 (2) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಇದನ್ನು ಓದಿ : Rohit Sharma century Phobia : ವಿರಾಟ್ ಬಳಿಕ ರೋಹಿತ್ಗೆ ಸೆಂಚುರಿ ಫೋಬಿಯಾ.. ಶತಕವಿಲ್ಲದೆ 1 ವರ್ಷ, ಏಕದಿನ ಶತಕವಿಲ್ಲದೆ 2.8 ವರ್ಷ
ಇದನ್ನೂ ಓದಿ : Six girls escaped :ಹಾಸ್ಟೆಲ್ ಟಾಯ್ಲೆಟ್ ನ ಗ್ರಿಲ್ ಮುರಿದು ಕಿಟಕಿ ಮೂಲಕ ಆರು ಬಾಲಕಿಯರು ಎಸ್ಕೇಪ್
Gujarat: Five men gang-rape woman in front of her boyfriend in Surat; probe on