Six girls escaped :ಹಾಸ್ಟೆಲ್ ಟಾಯ್ಲೆಟ್ ನ ಗ್ರಿಲ್ ಮುರಿದು ಕಿಟಕಿ ಮೂಲಕ ಆರು ಬಾಲಕಿಯರು ಎಸ್ಕೇಪ್

ಮಹಾರಾಷ್ಟ್ರ : Six girls escaped : ವಿದ್ಯಾರ್ಥಿ ಜೀವನದಲ್ಲಿ ಹಾಸ್ಟೆಲ್ ಲೈಫ್ ಒಂದು ರೀತಿಯ ವಿಶಿಷ್ಟ ಅನುಭವ‌. ಹಾಸ್ಟೆಲ್ ನಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ನಡೆಸಿದವರಲ್ಲಿ ಸಾಕಷ್ಟು ಮೆಮೊರೇಬಲ್ ಸಂಗತಿಗಳು ಇರುತ್ತದೆ. ಹಾಸ್ಟೆಲ್ ವಾರ್ಡನ್ ಕಣ್ಣು ತಪ್ಪಿಸಿ ಹೊರಗಡೆ ಹೋಗಿ ತಿಂಡಿ ತಿಂದು‌ ಬಂದಿದ್ದರಿಂದ ಆರಂಭವಾಗಿ ಸಾಕಷ್ಟು ಕಿಲಾಡಿ ಕೃತ್ಯಗಳನ್ನು ಮಾಡಿರುತ್ತಾರೆ.‌ ಆದ್ರೆ ಇಲ್ಲೊಂದು ಹಾಸ್ಟೆಲ್ ನ ಅಪ್ರಾಪ್ತ ಬಾಲಕಿಯರು ಶಾಕಿಂಗ್ ಆಗುವ ಕೃತ್ಯವೊಂದನ್ನು ನಡೆಸಿದ್ದಾರೆ. ಸರ್ಕಾರಿ ಹಾಸ್ಟೆಲ್ ನ ಟಾಯ್ಲೆಟ್ ನ ಗ್ರಿಲ್ ಮುರಿದು ಕಿಟಕಿ ಮೂಲಕ ಆರು ಬಾಲಕಿಯರು ಪರಾರಿಯಾಗಿದ್ದಾರೆ.

ಮುಂಬಯಿಯ ಗೋವಂದಿಯಲ್ಲಿರುವ ಸರ್ಕಾರಿ ಬಾಲಕಿಯರ ಹಾಸ್ಟೆಲ್ ನಲ್ಲಿ ಈ ಘಟನೆ ನಡೆದಿದೆ. ಈ ಬಾಲಕಿಯರು ಎಸ್ಕೇಪ್ ಆಗುವ ಮೊದಲು ಹಾಸ್ಟೆಲ್ ವಾರ್ಡನ್ ನ ರೂಂ ನ್ನು ಹೊರ ಭಾಗದಿಂದ ಲಾಕ್ ಮಾಡಿ ಎಸ್ಕೇಪ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಳಗ್ಗಿನ ಜಾವ ಮೂರರಿಂದ ನಾಲ್ಕು ಗಂಟೆಯ ಒಳಗಡೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಬಾಲಕಿಯರು ಹಾಸ್ಟೆಲ್ ನಿಂದ ಈ ರೀತಿ ಎಸ್ಕೇಪ್ ಆಗುವುದಕ್ಕೆ ಕಾರಣವೇನು ಎಂಬುದು ಇನ್ನು‌ ತಿಳಿದಿಲ್ಲ. ಹಾಸ್ಟೆಲ್ ಪರಿಸರದಲ್ಲಿ ಸಿ.ಸಿ ಕ್ಯಾಮರಾ ಅಳವಡಿಸಲಾಗಿದ್ದು ಎಸ್ಕೇಪ್ ಆಗಿರುವ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ‌. ಆರು ಬಾಲಕಿಯರು ಅಪ್ರಾಪ್ತರಾಗಿದ್ದು ಸಿ.ಸಿ ಕ್ಯಾಮಾರದ ದೃಶ್ಯ ಆಧರಿಸಿ ಸ್ಥಳೀಯ ಪೊಲೀಸರು ಬಾಲಕಿಯರ ಪತ್ತೆ ಕಾರ್ಯಕ್ಕೆ ಮುಂದಾಗಿದ್ದಾರೆ.

ಕೇವಲ ಆರು ಜನ ಬಾಲಕಿಯರಿಂದಲೇ ಈ ಎಸ್ಕೇಪ್ ಪ್ಲ್ಯಾನ್, ಕೃತ್ಯ ನಡೆದಿರುವ ಸಾಧ್ಯತೆ ಕಡಿಮೆಯಿದೆ. ಬಾಲಕಿಯರಿಗೆ ಪರಾರಿ ಆಗುವುದಕ್ಕೆ ಯಾರೋ ಸಹಾಯ ಮಾಡಿರುವ ಶಂಕೆಯು ವ್ಯಕ್ತವಾಗಿದೆ. ಹೀಗಾಗಿ ಅಪರಿಚಿತ ವ್ಯಕ್ತಿಗಳ ವಿರುದ್ಧವೂ ಪ್ರಕರಣ ದಾಖಲಾಗಿದೆ. ಇದೆಲ್ಲದರ ನಡುವೆ ಬಾಲಕಿಯರು ಎಲ್ಲಿಗೆ ಹೋಗಿದ್ದಾರೆ ಎಂಬ ಯಾವುದೇ ಸುಳಿವು ಇನ್ನು ಸಿಕ್ಕಿಲ್ಲವಾದರೂ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

ಇದನ್ನು ಓದಿ : young man stabbed a young woman :ಪ್ರೀತಿ ನಿರಾಕರಿಸಿದ ಕಾರಣಕ್ಕೆ ಯುವತಿಗೆ ಚೂರಿ ಇರಿದ ಯುವಕ

ಇದನ್ನೂ ಓದಿ : Rohit Sharma century Phobia : ವಿರಾಟ್ ಬಳಿಕ ರೋಹಿತ್‌ಗೆ ಸೆಂಚುರಿ ಫೋಬಿಯಾ.. ಶತಕವಿಲ್ಲದೆ 1 ವರ್ಷ, ಏಕದಿನ ಶತಕವಿಲ್ಲದೆ 2.8 ವರ್ಷ

Six girls escaped through the window by breaking the grill of the hostel toilet

Comments are closed.