Haveri : ಯುವತಿಗೆ ಲೈಂಗಿಕ ದೌರ್ಜನ್ಯ ಆರೋಪ : ಗ್ರಾಮಸ್ಥರಿಂದ ಕಾಮುಕನ ಬೆತ್ತಲೆ ಮೆರವಣಿಗೆ

ಹಾವೇರಿ : ಯುವತಿಯೋರ್ವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಆರೋಪಿಯನ್ನು ಬೆತ್ತಲೆ ಮಾಡಿ ಕೈಗೆ ಹಗ್ಗವನ್ನು ಕಟ್ಟಿ ಊರ ತುಂಬೆಲ್ಲಾ ಮೆರವಣಿಗೆ ಮಾಡಿದ ಘಟನೆ ಹಾವೇರಿ (Haveri) ಜಿಲ್ಲೆಯ ಹಿರೇಕೆರೂರು ತಾಲೂಕಿಕ ಹಂಸಭಾವಿ ಗ್ರಾಮದಲ್ಲಿ ನಡೆದಿದೆ. ಇದರ ಬೆನ್ನಲ್ಲೇ ಆರೋಪಿಯ ತಂದೆ ಪ್ರತಿ ದೂರು ನೀಡಿದ್ದು, ಹನ್ನೊಂದು ಮಂದಿಯ ವಿರುದ್ದ ಇದೀಗ ಪ್ರಕರಣ ದಾಖಲಾಗಿದೆ.

ಗ್ರಾಮದಲ್ಲಿ 16 ವರ್ಷದ ಯುವತಿಯೋರ್ವಳ ಮೇಲೆ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಆರೋಪಿಯನ್ನು ಹಿಡಿದು ಹಲ್ಲೆ ನಡೆಸಿದ್ದಾರೆ. ನಂತರದಲ್ಲಿ ಆತನನ್ನು ಬೆತ್ತಲೆಗೊಳಿಸಿ ಎರಡೂ ಕೈಗಳನ್ನು ಹಗ್ಗದಿಂದ ಕಟ್ಟಿದ್ದಾರೆ. ಬೆತ್ತಲೆಯಾಗಿಯೇ ಯುವಕನನ್ನು ಊರ ತುಂಬೆಲ್ಲಾ ಮೆರವಣಿಗೆ ನಡೆಸಿ, ಅಂತಿಮವಾಗಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸಂತ್ರಸ್ತ ಯುವತಿ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಹಂಸಭಾವಿ ಠಾಣೆಯ ಪೊಲೀಸರು ಆರೋಪಿಯ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಅಲ್ಲದೇ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಇತ್ತ ಆರೋಪಿಯ ತಂದೆ ತನ್ನ ಮಗನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ, ಮೆರವಣಿಗೆ ಮಾಡಲಾಗಿದೆ. ದೈಹಿಕ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರಿಗೆ ಪ್ರತಿದೂರು ನೀಡಲಾಗಿದ್ದು, ಹನ್ನೊಂದು ಮಂದಿಯ ವಿರುದ್ದ ಇದೀಗ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣದ ಕಿಂಗ್​ ಪಿನ್​ ರುದ್ರೇಗೌಡ ವಶಕ್ಕೆ

ಇದನ್ನೂ ಓದಿ : ತನಿಖೆ ಪೂರ್ಣಗೊಳ್ಳುವವರೆಗೂ ಪಿಎಸ್​ಐ ಪರೀಕ್ಷೆ ನಡೆಯುವುದಿಲ್ಲ : ಪ್ರವೀಣ್​ ಸೂದ್​

Harassment The Accused were Naked Paraded in Village in Haveri

Comments are closed.