Hassan Crime News : ಹಾಸನ : ಕುತ್ತಿಗೆಗೆ ಜೋಕಾಲಿ ಬಿಗಿದು ಬಾಲಕಿ ಸಾವು

ಹಾಸನ : ಆಟವಾಡುತ್ತಿದ್ದ ಮಗುವಿನ ಪ್ರಾಣ ಗೊತ್ತಿಲ್ಲದಂತೆಯೇ (Hassan Crime News) ಹಾರಿ ಹೋಗಿದೆ. ಸೀರೆಯೊಂದನ್ನು ಕಟ್ಟಿಕೊಂಡು ಜೋಕಾಲಿ ಆಡುತ್ತಿದ್ದ ಬಾಲಕಿಯೋರ್ವಳ ಕುತ್ತಿಗೆ ಸೀರೆ ಸುತ್ತಿಕೊಂಡು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿ ವನಗೂರು ಸಮೀಪದ ಕುಣಿಕೇರಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಸಾನಿತಾ (9 ವರ್ಷ ) ಎಂಬಾಕೆಯೇ ಸಾವನ್ನಪ್ಪಿರುವ ಬಾಲಕಿ ಎಂದು ಗುರುತಿಸಲಾಗಿದೆ. ತಂದೆ- ತಾಯಿಗೆ ಸಾನಿತಾ ಓರ್ವಳೇ ಮಳಗಳಾಗಿದ್ದು, ಶಾಲೆಗೆ ರಜೆಯಿದ್ದ ಹಿನ್ನೆಲೆಯಲ್ಲಿ ಮಳೆಯಲ್ಲಿ ಸೀರೆ ಕಟ್ಟಿಕೊಂಡು ಬಾಲಕಿ ಜೋಕಾಲಿ ಆಡುತ್ತಿದ್ದಳು. ಈ ವೇಳೆಯಲ್ಲಿ ಆಯತಪ್ಪಿ ಸೀರೆ ಸಾನಿತಾ ಕುತ್ತಿಗೆಗೆ ಸಿಲುಕಿಕೊಂಡಿದೆ. ಈ ವೇಳೆಯಲ್ಲಿ ಕುತ್ತಿಗೆ ಬಿಗಿದು ಸಾನಿತಾ ಸಾವನ್ನಪ್ಪಿದ್ದಾಳೆ.

ಇದನ್ನೂ ಓದಿ : Army soldier missing case‌ : ಸೇನಾ ಯೋಧ ನಾಪತ್ತೆ ಪ್ರಕರಣ : ಕಾರಿನಲ್ಲಿ ಪತ್ತೆಯಾಯ್ತು ರಕ್ತದ ಕಲೆ

ಇದನ್ನೂ ಓದಿ : Ahmedabad Hospital Fire : ಆಸ್ಪತ್ರೆಯಲ್ಲಿ ಬೆಂಕಿ ಅವಘಡ : ನೂರಾರು ರೋಗಿಗಳ ಸ್ಥಳಾಂತರ

ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸುತ್ತಮುತ್ತಲಿನ ಜನರು ತಾಯಿ ತಂದೆ ಅಳುವನ್ನು ಕಂಡು ಮುರುಗಿದ್ದಾರೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಹತ್ತಿರದ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇನ್ನು ಮಕ್ಕಳು ಆಟವಾಡುವಾಗಲೂ ಹೆತ್ತವರು ಎಚ್ಚರಿಕೆ ವಹಿಸಬೇಕಾಗಿದೆ.

Hassan Crime News : Hassan : Girl dies after yoke is tied around her neck

Comments are closed.