head constable who committed suicide: ಕರ್ತವ್ಯಕ್ಕೆ ಮರಳಿದ ದಿನವೇ ಹೆಡ್​ಕಾನ್​​ಸ್ಟೇಬಲ್​ ಆತ್ಮಹತ್ಯೆ

ಉಡುಪಿ :head constable who committed suicide : ಸೇವೆಯಿಂದ ಅಮಾನತುಗೊಂಡು ಬಳಿಕ ಕರ್ತವ್ಯಕ್ಕೆ ಹಾಜರಾಗಿದ್ದ ಹೆಡ್​ ಕಾನಸ್ಟೇಬಲ್​ ಸೇವೆಗ ಹಾಜರಾದ ದಿನವೇ ಸೇವಾ ಆಯುಧದಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿರುವ ಘಟನೆಯು ಉಡುಪಿಯಲ್ಲಿ ನಡೆದಿದೆ. ಮೃತ ಹೆಡ್​ ಕಾನ್​ಸ್ಟೇಬಲ್​ ರಾಜೇಶ್​ ಕುಂದರ್ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಹೆಡ್​ ಕಾನ್​ಸ್ಟೇಬಲ್​ ಆಗಿದ್ದರು. ಇವರು ಅಮಾನತುಗೊಂಡ ಬಳಿಕ ಮತ್ತೆ ಸೇವೆಗೆ ಸೇರಿದ್ದರು ಎಂದು ಸಹಾಯಕ ಪೊಲೀಸ್​ ವರಿಷ್ಠಾಧಿಕಾರಿ ಎಸ್​. ಟಿ ಸಿದ್ದಲಿಂಗಪ್ಪ ಮಾಹಿತಿ ನೀಡಿದ್ದಾರೆ.


ಆದಿ ಉಡುಪಿಯ ಪ್ರೌಢಶಾಲೆಯ ಪರೀಕ್ಷಾ ಪ್ರಶ್ನೆ ಪತ್ರಿಕೆಗಳನ್ನು ಇಡಲಾಗಿದ್ದ ಸ್ಟೋರ್​ ರೂಮ್​​ನ ಹೊರಗೆ ಹೆಡ್​ ಕಾನ್​ಸ್ಟೇಬಲ್​ ರಾಜೇಶ್​ ಕುಂದರ್​ ರಾತ್ರಿ ಪಾಳಿಯಲ್ಲಿ ಗಸ್ತು ತಿರುಗುತ್ತಿದ್ದರು ಎನ್ನಲಾಗಿದೆ. ಗುರುವಾರ ರಾತ್ರಿ ಕರ್ತವ್ಯನಿರತಾಗಿದ್ದ ರಾಜೇಶ್​ ಕುಂದರ್​ ಇಂದು ಬೆಳಗ್ಗೆ ಸಿಬ್ಬಂದಿ ಬಂದು ನೋಡುವ ವೇಳೆಯಲ್ಲಿ ಸ್ಟೋರ್​ ರೂಮ್​ನ ಹೊರೆಗೆ ಶವವಾಗಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ.


ರಾಜೇಶ್​ ಕುಂದರ್​ ಮೃತಪಟ್ಟಿರುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಅವರ ಕುಟುಂಬಸ್ಥರು ಉಡುಪಿಗೆ ಆಗಮಿಸಿದ್ದಾರೆ, ಕುಟುಂಬಸ್ಥರು ನೀಡುವ ದೂರನ್ನ ಆಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್​.ಟಿ ಸಿದ್ದಲಿಂಗಪ್ಪ ಮಾಹಿತಿ ನೀಡಿದ್ದಾರೆ. ಸೇವೆಯಿಂದ ಅಮಾನತುಗೊಂಡಿದ್ದ ರಾಜೇಶ್​ ಕುಂದರ್​ ಗುರುವಾರದಂದು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಇಂದು ಬೆಳಗ್ಗೆ ಅವರು ಶವವಾಗಿ ಪತ್ತೆಯಾಗಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿದೆ.

ಇದನ್ನು ಓದಿ : Aravind Kaushik Arrest : ಸ್ಯಾಂಡಲ್‌ವುಡ್ ನಿರ್ದೇಶಕ ಅರವಿಂದ ಕೌಶಿಕ್‌ ಅರೆಸ್ಟ್‌

ಇದನ್ನೂ ಓದಿ : kichcha sudeep vs ajay devgn : ಕಿಚ್ಚ ಸುದೀಪ- ಅಜಯ್​ ದೇವಗನ್​ ನಡುವೆ ಭಾಷಾ ವಾರ್​ ಶುರುವಾಗಿದ್ದು ಹೇಗೆ? ಇಲ್ಲಿದೆ ಕಂಪ್ಲೀಟ್​ ಡೀಟೆಲ್ಸ್​

head constable who committed suicide was returned to duty after suspension

Comments are closed.