Drug case- 9 suspended: ಮಂಗಳೂರು ಡ್ರಗ್ಸ್‌ ಪ್ರಕರಣ: 2 ವೈದ್ಯರು, 7 ವೈದ್ಯಕೀಯ ವಿದ್ಯಾರ್ಥಿಗಳ ಅಮಾನತು

ಮಂಗಳೂರು: (Drug case- 9 suspended) ಮಂಗಳೂರಿನ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯರು ಮಾದಕ ವಸ್ತು ಸೇವನೆ ಮತ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಮೆಡಿಕಲ್‌ ಕಾಲೇಜಿನ ಹಾಗೂ ಖಾಸಗಿ ಆಸ್ಪತ್ರೆಯ ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳನ್ನು ಹಾಗೂ ಇಬ್ಬರು ವೈದ್ಯರನ್ನು ಅಮಾನತು ಮಾಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ವಿದ್ಯಾರ್ಥಿಗಳು ಹಾಗೂ ವೈದ್ಯರು ಸೇರಿದಂತೆ ಒಟ್ಟು ಹದಿನೈದು ಮಂದಿಯನ್ನು ಬಂಧಿಸಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಇನ್ನಷ್ಟು ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಎನ್‌ ಶಶಿಕುಮಾರ್‌ ಅವರು ತಿಳಿಸಿದ್ದಾರೆ.

ಕೆಎಂಸಿ ಆಸ್ಪತ್ರೆ ಅತ್ತಾವರದ ಮೆಡಿಕಲ್‌ ಆಫೀಸರ್‌ ಡಾ.ಸಮೀರ್‌ ಮತ್ತು ಕೆಎಂಸಿ ಮಣಿಪಾಲದ ಮೆಡಿಕಲ್‌ ಸರ್ಜನ್‌ ಡಾ. ಮಣಿಮಾರನ್‌ ಮುತ್ತು ಎನ್ನುವವರು ವಜಾಗೊಂಡ ವೈದ್ಯರಾಗಿದ್ದು, ಡಾ. ಕಿಶೋರಿ ಲಾಲ್‌, ಡಾ. ನದೀಯಾ ಸಿರಾಜ್‌, ಡಾ. ವರ್ಷಿಣಿ, ಡಾ.ರಿಯಾ, ಡಾ.ಇರಾ ಬಾಸಿನ, ಡಾ. ಕ್ಷಿತಿಜ್‌, ಡಾ. ಹರ್ಷ ಕುಮಾರ್‌ ಇವರು ಅಮಾನತಿಗೊಳಗಾದ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.

ಇನ್ನೂ ಪ್ರಕರಣದ ಗಂಭೀರತೆ ಅರಿತ ಕೆಎಂಸಿ ಆಸ್ಪತ್ರೆ ಮಂಡಳಿ ಡ್ರಗ್ಸ್‌ ದಂಧೆಯಲ್ಲಿ ತೊಡಗಿದ್ದ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಿದ್ದು, ಖಾಸಗಿ ಕಾಲೇಜು ಡೀನ್‌ ಅವರು ಮಾದಕ ವ್ಯಸನದ ವಿರುದ್ದ ಶೂನ್ಯ ಸಹಿಷ್ಣುತೆಯನ್ನು ಬೆಂಬಲಿಸಿ ಪೊಲೀಸ್‌ ಇಲಾಖೆಯೊಂದಿಗೆ ಸಂಪೂರ್ಣ ಸಹಕಾರವನ್ನು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ತನಿಖೆ ನಡೆಸುತ್ತಿರುವುದಾಗಿ ಪೊಲೀಸ್‌ ಆಯುಕ್ತ ಎನ್‌ ಶಶಿಕುಮಾರ್‌ ತಿಳಿಸಿದ್ದಾರೆ.

ಇದನ್ನೂ ಓದಿ : KSRTC bus-Bike Accident: ಕೆಎಸ್‌ ಆರ್‌ ಟಿಸಿ ಬಸ್‌ – ಬೈಕ್‌ ಢಿಕ್ಕಿ: ಪ್ರತ್ಯೇಕ ಪ್ರಕರಣ ಬೈಕ್‌ ಸವಾರರು ಸ್ಥಳದಲ್ಲೇ ಸಾವು

ಇದನ್ನೂ ಓದಿ : Woman killed daughter: 3 ವರ್ಷದ ಮಗಳನ್ನೇ ಕೊಲೆಗೈದು ಚಲಿಸುತ್ತಿದ್ದ ರೈಲಿನಿಂದ ಎಸೆದ ಮಹಿಳೆ

ಇದನ್ನೂ ಓದಿ : Minor girl set on fire: ಅಪ್ರಾಪ್ತ ಬಾಲಕಿ ಬೆಂಕಿ ಹಚ್ಚಿದ ನೀಚರು: ಕಾರಣವಾಗಿದ್ದು ಆ ಒಂದು ಮದುವೆ ಕಾರ್ಯಕ್ರಮ

Drug case- 9 suspended: Mangalore drugs case: 2 doctors, 7 medical students suspended

Comments are closed.