South Western Railway Recruitment 2023: ರೈಲ್ವೆ ಇಲಾಖೆಯಲ್ಲಿ 21 ಕ್ರೀಡಾ ಕೋಟಾ ಖಾಲಿ ಹುದ್ದೆಗಳ ನೇಮಕಾತಿ

(South Western Railway Recruitment 2023)ನೈಋತ್ಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುಬ್ಬಳ್ಳಿಯಲ್ಲಿ ಹುದ್ದೆ ಮಾಡಲು ಬಯಸುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜನವರಿ 16 , 2023 ರ ಮೊದಲು ಆನ್‌ ಲೈನ್‌ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

South Western Railway Recruitment 2023 : ಹುದ್ದೆಯ ಸಂಪೂರ್ಣ ವಿವರ:

ಸಂಸ್ಥೆಯ ಹೆಸರು : ಸೌತ್ ವೆಸ್ಟರ್ನ್ ರೈಲ್ವೆ(ನೈಋತ್ಯ ರೈಲ್ವೆ)
ಹುದ್ದೆಯ ಹೆಸರು : ಕ್ರೀಡಾ ಕೋಟಾ
ಹುದ್ದೆಗಳ ಸಂಖ್ಯೆ :21
ಉದ್ಯೋಗ ಸ್ಥಳ : ಹುಬ್ಬಳ್ಳಿ
ವೇತನ:5200-20200 ರೂ ಪ್ರತಿ ತಿಂಗಳು

ವಯೋಮಿತಿ ವಿವರ:
ಅರ್ಹ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ರಿಂದ ಗರಿಷ್ಟ 25 ವರ್ಷ ವಯಸ್ಸಾಗಿರಬೇಕು.

ವಿದ್ಯಾರ್ಹತೆ ವಿವರ:
ನೈಋತ್ಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳು B.Sc, 12th, ITI, 10th ಪೂರ್ಣಗೊಳಿಸಿರಬೇಕು.

ಆಯ್ಕೆ ಪ್ರಕ್ರಿಯೆ
ಅರ್ಹ ಅಭ್ಯರ್ಥಿಗಳ ಆಯ್ಕೆಯು ಕೌಶಲ್ಯ ಪರೀಕ್ಷೆಯನ್ನು ಆಧರಿಸಿರುತ್ತದೆ

ಅರ್ಜಿ ಶುಲ್ಕ:
SC/ST/ಮಹಿಳೆಯರು/ಮಾಜಿ ಸೈನಿಕರು/ಅಲ್ಪಸಂಖ್ಯಾತರು/EBCS: 250 ರೂ.
ಇತರೆ: 500 ರೂ.

ಇದನ್ನೂ ಓದಿ:Karnataka Bank Recruitment 2022 : ಕರ್ನಾಟಕ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ, ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:Mushroom Training Rudset : ರುಡ್ ಸೆಟ್ ಸಂಸ್ಥೆಯಲ್ಲಿ ಉಚಿತ ಅಣಬೆ ಬೇಸಾಯ ತರಬೇತಿ

ಅರ್ಜಿ ಸಲ್ಲಿಸುವ ವಿಧಾನ :
ನೈಋತ್ಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಇಮೇಲ್‌ ಐಡಿ, ಮೊಬೈಲ್‌ ಸಂಖ್ಯೆ,ಗುರುತಿನ ಚೀಟಿ, ವಯಸ್ಸು,ಶೈಕ್ಷಣಿಕ,ಅರ್ಹತೆ, ಇತ್ಯಾದಿ ದಾಖಲೆ) 17-12- 2022 ರಿಂದ 16-1- 2023 ರವರೆಗೆ ನೈಋತ್ಯ ರೈಲ್ವೆ ಇಲಾಖೆಯ ಅಧಿಕೃತ ವೆಬ್ ಸೈಟ್ ಆದ indianrailways.gov.in ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

ಪ್ರಮುಖ ದಿನಾಂಕಗಳು:
ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:17-ಡಿಸೆಂಬರ್- 2022
ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :16 – ಜನವರಿ- 2023

ಇಂಗ್ಲಿಷ್‌ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

South Western Railway Recruitment 2023 Recruitment of 21 Sports Quota Vacancies in Railway Department

Comments are closed.