ಐಸ್ ಕ್ರೀಂ ಗೋದಾಮಿಗೆ ಆಕಸ್ಮಿಕ ಬೆಂಕಿ : ಕೋಟ್ಯಾಂತರ ರೂಪಾಯಿ ನಷ್ಟ

ಮಂಗಳೂರು : (Ice cream warehouse fire) ಐಸ್ ಕ್ರೀಂ ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಕೋಟ್ಯಾಂತರ ರೂಪಾಯಿ ನಷ್ಟವಾದ ಘಟನೆ ಮಂಗಳೂರಿನ ಅಡ್ಯಾರ್ ನಲ್ಲಿರುವ ಪೋಲಾರ್ ಐಸ್ ಕ್ರೀಂ‌ ಸೂಪರ್ ಸ್ಟಾಕಿಸ್ಟ್ ನಲ್ಲಿ ನಡೆದಿದೆ. ನಂದಿನಿ ಐಸ್ ಕ್ರೀಂ ದಾಸ್ತಾನು ಇಡಲಾಗಿದ್ದ ಈ ಗೋದಾಮಿಗೆ ಮುಂಜಾನೆ ಎರಡು ಗಂಟೆಯ ಸುಮಾರಿಗೆ ಬೆಂಕಿ ತಗಲಿ ಕೋಟ್ಯಂತರ ರೂ. ನಷ್ಟ ಸಂಭವಿಸಿದೆ.

ಮಂಗಳೂರು-ಬೆಂಗಳೂರು ಹೆದ್ದಾರಿಯ ಅಡ್ಯಾರ್‌ನಲ್ಲಿರುವ ಪೋಲಾರ್ ಐಸ್ ಕ್ರೀಂ‌ ಸೂಪರ್ ಸ್ಟಾಕಿಸ್ಟ್ ನಲ್ಲಿ ಮುಂಜಾನೆ ಎರಡು ಗಂಟೆಯ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಕೋಟ್ಯಾಂತರ ರೂ ನಷ್ಟವಾಗಿದೆ. ಘಟನೆಯ ಮಾಹಿತಿ ಮೇರೆಗೆ ಮೂರು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ನಾಲ್ಕು ಗಂಟೆ ಕಾರ್ಯಾಚರಣೆಯ ನಂತರ ಬೆಂಕಿಯನ್ನು ಹತೋಟಿಗೆ ತರಲಾಗಿದೆ.

ಘಟನೆಯ ಪರಿಣಾಮ ಗೋದಾಮಿನ ವಿತರಣಾ ವಾಹನ ಸೇರಿದಂತೆ ಸುಮಾರು 5 ಕೋಟಿ ರೂ ಮೌಲ್ಯದ ಸೊತ್ತುಗಳು ಬೆಂಕಿಗೆ ಆಹುತಿಯಾಗಿವೆ. ಪ್ರಾಥಮಿಕ ತನಿಖೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲಿದೆ ಎನ್ನಲಾಗಿದ್ದು, ನಿಖರ ಕಾರಣಗಳು ತಿಳಿದುಬಂದಿಲ್ಲ. ಘಟನೆ ನಡೆದ ಸ್ಥಳದಲ್ಲಿ ಮೂರು ಅಗ್ನಿಶಾಮಕ ವಾಹನಗಳು ಸುಮಾರು ನಾಲ್ಕು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಿಯಂತ್ರಿಸಿವೆ. ಕಾರವಾರದಿಂದ ಕಾಸರಗೋಡಿನವರೆಗೆ ನಂದಿನಿ ಐಸ್ ಕ್ರ್ರೀಂ ವಿತರಿಸುವ ಕೇಂದ್ರ ಇದಾಗಿದೆ.

ಇದನ್ನೂ ಓದಿ : Nashville school shooting: ನ್ಯಾಶ್ವಿಲ್ಲೆ ಶಾಲೆಯಲ್ಲಿ ಗುಂಡಿನ ದಾಳಿ : ಮೂವರು ಮಕ್ಕಳು ಸೇರಿದಂತೆ ಆರು ಮಂದಿ ಸಾವು

ಇದನ್ನೂ ಓದಿ : BJP worker killed: ಬಿಜೆಪಿ ಕಾರ್ಯಕರ್ತನ ಮೇಲೆ ಬಾಂಬ್ ಎಸೆದು ಕೊಲೆ : ಭಯಾನಕ ವೀಡಿಯೊ ವೈರಲ್

ಇದನ್ನೂ ಓದಿ : School Bus caught fire: ಶಾಲಾ ಬಸ್ ನಲ್ಲಿ ಕಾಣಿಸಿಕೊಂಡ ಬೆಂಕಿ : ತಪ್ಪಿದ ಭಾರೀ ಅನಾಹುತ

Ice cream warehouse fire: Accidental fire to ice cream warehouse: loss of crores of rupees

Comments are closed.