ಮಂಗಳವಾರ, ಏಪ್ರಿಲ್ 29, 2025
HomeCrimeಮಕ್ಕಳ ಕೈಗೆ ಮೊಬೈಲ್‌ ನೀಡೋ ಮುನ್ನ ಹುಷಾರ್‌ ! ಅಶ್ಲೀಲ ಚಿತ್ರ ವೀಕ್ಷಣೆಗೆ ನಿರಾಕರಣೆ, ಅಪ್ತಾಪ್ತ...

ಮಕ್ಕಳ ಕೈಗೆ ಮೊಬೈಲ್‌ ನೀಡೋ ಮುನ್ನ ಹುಷಾರ್‌ ! ಅಶ್ಲೀಲ ಚಿತ್ರ ವೀಕ್ಷಣೆಗೆ ನಿರಾಕರಣೆ, ಅಪ್ತಾಪ್ತ ಬಾಲಕರಿಂದ 6 ವರ್ಷ ಬಾಲಕಿ ಹತ್ಯೆ

- Advertisement -

ನಾಗಾಂವ್‌ : ಅಶ್ಲೀಲ ಚಿತ್ರ ವೀಕ್ಷಣೆ ಮಾಡಲು ನಿರಾಕರಿಸಿದ ಕಾರಣಕ್ಕೆ ಮೂವರು ಅಪ್ರಾಪ್ತ ಬಾಲಕರು 6 ವರ್ಷದ ಬಾಲಕಿಯೋರ್ವಳನ್ನು ಹತ್ಯೆ ಮಾಡಿರುವ ಪೈಶಾಚಿಕ ಘಟನೆ ಅಸ್ಸಾಂ ರಾಜ್ಯದ ನಾಗಾಂವ್ ಜಿಲ್ಲೆಯ ಉಲೂನಿಯ ಬಲಿಬಾತ್ ಎಂಬಲ್ಲಿ ನಡೆದಿದೆ. ಘಟನೆಯಿಂದಾಗಿ ಇಡೀ ಗ್ರಾಮಸ್ಥರೇ ಬೆಚ್ಚಿಬಿದ್ದಿದ್ದಾರೆ.

ಉಲೂನಿಯ ಬಲಿಬಾತ್ ಗ್ರಾಮದಲ್ಲಿರುವ ಕಲ್ಲು ಪುಡಿ ಮಾಡುವ ಗಿರಣಿಯ ಶೌಚಾಲಯದಲ್ಲಿ6 ವರ್ಷದ ಬಾಲಕಿಯ ಶವ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪೋಷಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಕಲಿಯಾಬೋರ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದರು. ಪೊಲೀಸರ ತನಿಖೆಯ ವೇಳೆಯಲ್ಲಿ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

8 ರಿಂದ 11 ವರ್ಷದೊಳಗಿನ ಮೂವರು ಅಪ್ರಾಪ್ತ ಬಾಲಕರು 6 ವರ್ಷ ವಯಸ್ಸಿನ ಬಾಲಕಿಯ ಜೊತೆಯಲ್ಲಿ ಅಶ್ಲೀಲ ಚಿತ್ರದ ತುಣುಕನ್ನು ನೋಡುವಂತೆ ಒತ್ತಾಯಿಸಿದ್ದಾರೆ. ಆದರೆ ಬಾಲಕಿ ಅಶ್ಲೀಲ ಚಿತ್ರ ವೀಕ್ಷಣೆ ಮಾಡಲು ನಿರಾಕರಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಮೂವರು ಬಾಲಕರು ಸೇರಿಕೊಂಡು ಪುಟ್ಟ ಬಾಲಕಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು.

ಮೂವರು ಆರೋಪಿಗಳ ಪೈಕಿ 11 ವರ್ಷದ ಬಾಲಕನೋರ್ವ ತಂದೆಯ ಮೊಬೈಲ್‌ ಪಡೆದು ಅಶ್ಲೀಲ ಚಿತ್ರಗಳನ್ನು ವೀಕ್ಷಣೆ ಮಾಡುತ್ತಿದ್ದ. ಅಲ್ಲದೇ ತನ್ನ ಇತರ ಸ್ನೇಹಿತರಿಗೂ ಕೂಡ ಅಶ್ಲೀಲ ಚಿತ್ರ ವೀಕ್ಷಣೆ ಮಾಡುವಂತೆಯೂ ಹೇಳುತ್ತಿದ್ದ. ಅಶ್ಲೀಲ ಚಿತ್ರ ವೀಕ್ಷಣೆಯ ದಾಸರಾಗಿದ್ದ ಮೂವರು ಸೇರಿಕೊಂಡು ಬಾಲಕಿಯ ಮೇಲೆಯೂ ಒತ್ತಡ ಹೇರಿದ್ದರು. ಬಾಲಕಿ ಚಿತ್ರ ವೀಕ್ಷಣೆ ಮಾಡದ ಹಿನ್ನೆಲೆಯಲ್ಲಿ ಕಲ್ಲಿನಿಂದ ಹೊಡೆದಿದ್ದಾರೆ. ಇನ್ನು ಆರೋಪಿಯ ತಂದೆ ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದರು ಎಂದು ನಾಗಾಂವ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಆನಂದ್ ಮಿಶ್ರಾ ಹೇಳಿದ್ದಾರೆ.

ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತ ಬಾಲಕರು ಹಾಗೂ ಆರೋಪಿಗಳಿಗೆ ಸಹಾಯ ಮಾಡಲು ಯತ್ನಿಸಿದ ಬಾಲಕನ ತಂದೆಯನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಆರೋಪಿಗಳು ಬಾಲಕಿಯನ್ನು ಹತ್ಯೆ ಮಾಡುವ ಮೊದಲು ಲೈಂಗಿಕ ದೌರ್ಜನ್ಯವನ್ನು ಎಸಗಿರುವುದು ತನಿಖೆಯಿಂದ ತಿಳದು ಬಂದಿದೆ ಎಂದು ಮಿಶ್ರಾ ತಿಳಿಸಿದ್ದಾರೆ.

ಅಪ್ರಾಪ್ತ ವಯಸ್ಸಿನಲ್ಲಿಯೇ ಬಾಲಕರು ಅಶ್ಲೀಲ ವ್ಯಸನಿಗಳಾಗಿರುವುದಕ್ಕೆ ಪೊಲೀಸ್‌ ಅಧಿಕಾರಿಗಳೇ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಪೊಲೀಸರು ಆರೋಪಿಯ ಮೊಬೈಲ್‌ ಪೋನ್‌ ವಶಕ್ಕೆ ಪಡೆದು ಪರಿಶೀಲಿಸಿದ ವೇಳೆಯಲ್ಲಿ ಹಲವು ಅಶ್ಲೀಲ ವಿಡಿಯೋಗಳು ಪತ್ತೆಯಾಗಿತ್ತು. ಮಕ್ಕಳ ಕೈಗೆ ಮೊಬೈಲ್‌ ನೀಡುವ ಪೋಷಕರು ಈ ಸ್ಟೋರಿಯ ನಂತರವಾದ್ರೂ ಎಚ್ಚೆತ್ತುಕೊಳ್ಳಬೇಕು.

ಇದನ್ನೂ ಓದಿ : ಯುವತಿಗೆ ಡ್ರಗ್ಸ್‌ ನೀಡಿ ಸಾಮೂಹಿಕ ಅತ್ಯಾಚಾರ

ಇದನ್ನೂ ಓದಿ : ಈಜಲು ತೆರಳಿದ್ದ ಇಬ್ಬರು ಬಾಲಕರು ನದಿಯಲ್ಲಿ ಮುಳುಗಿ ಸಾವು

( Three minors assault, kill 6-year-old girl in Balibat Assam for refusing to watch porn )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular