ಘಾಜಿಯಾಬಾದ್ : ಉತ್ತರ ಪ್ರದೇಶದ ಘಾಜಿಯಾಬಾದ್ ಕೊಳಗೇರಿಯಲ್ಲಿ ಮನುಕುಲವೇ ಬೆಚ್ಚಿ ಬೀಳುವ ಘಟನೆ ನಡೆದಿದೆ. ಯಾರೂ ಕೂಡ ಕನಸಲ್ಲಿಯೂ ಊಹಿಸದ ವಿಕೃತ ಕೃತ್ಯವನ್ನು ಇಲ್ಲೊಬ್ಬ ಯುವಕ ಮಾಡಿದ್ದಾನೆ. ತನ್ನ ತಾಯಿಯ ಕುತ್ತಿಗೆಗೆ ಚಾಕು ಹಿಡಿದು ಬೆದರಿಸಿ ನಂತರ ಅತ್ಯಚಾರ ವೆಸಗಿದ್ದಾನೆ.
ಮಾದಕ ವಸ್ತು ಮತ್ತು ಮದ್ಯ ಸೇವಿಸಿ ಮನೆಗೆ ಬಂದ ಮಗ, ತನ್ನ ತಾಯಿ ಕುತ್ತಿಗೆಗೆ ಚಾಕು ಹಿಡಿದು ಬೆದರಿಸಿದ್ದಾನೆ. ನಂತರ ತನ್ನ ತಾಯಿ ಮೇಲೆ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಬಲವಂತ ಮಾಡಿದ್ದಾನೆ. ಇದಕ್ಕೆ ಆ ಮಹಿಳೆ ವಿರೋಧ ವ್ಯಕ್ತ ಪಡಿಸಿದಾಗ ಕತ್ತು ಸೀಳುವುದಾಗಿ ಬೆದರಿಸಿದ್ದಾನೆ.
ಇದನ್ನೂ ಓದಿ: Intercast marriage : ದಲಿತನ ಹುಡುಗನನ್ನು ಮದ್ವೆಯಾಗಿದ್ದಕ್ಕೆ ಮಗಳನ್ನೇ ಅರೆ ನಗ್ನ ಗೊಳಿಸಿದ ತಂದೆ !
ಹೆತ್ತ ತಾಯಿಯನ್ನೇ ಬೆದರಿಸಿ ಅತ್ಯಾಚಾರ ಎಸಗಿದ್ದಾನೆ ನಂತರ ಅಲ್ಲಿಂದ ಪರಾರಿಯಾಗಿದ್ದಾನೆ. ಇದಾದ ಬಳಿಕ ಆ ಮಹಿಳೆ ತಿಲಾ ಮೋರ್ ಪೋಲಿಸ್ ಠಾಣೆಗೆ ತೆರಳಿ ಪೋಲಿಸರಿಗೆ ನಡೆದ ವಿಷಯವನ್ನು ವಿವರಿಸಿದ್ದಾಳೆ. ಆರೋಪಿ ಪರಾರಿಯಾಗಿದ್ದು ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ.
(Son of sinner raped with knife around mother’s neck)