Government Alert : ಸರಕಾರಿ ನೌಕರರಿಗೆ ಮಹತ್ವದ ಆದೇಶ : ಅನ್ಯ ಮೂಲದ ಆದಾಯ ಘೋಷಣೆ ಕಡ್ಡಾಯ

ಬೆಂಗಳೂರು : ಅಕ್ರಮ ಆಸ್ತಿ ಹೊಂದಿದ ಆರೋಪ ಹಿನ್ನೆಲೆಯಲ್ಲಿ ಸರಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಯುತ್ತಲೇ ಇದೆ. ಈ ವೇಳೆಯಲ್ಲಿ ಅಧಿಕಾರಿಗಳು ಉಡುಗೊರೆ, ಅನ್ಯ ಅದಾಯ ಮೂಲಗಳಿಂದ ಬಂದಿದೆ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಆದ್ರೆ ಇನ್ಮುಂದೆ ಇಂತಹ ಸಬೂಬುಗಳನ್ನು ನೀಡುವಂತಿಲ್ಲ. ಇನ್ಮುಂದೆ ಸರಕಾರಿ ನೌಕರರು ಆಸ್ತಿ ಖರೀದಿ, ಉಡುಗೊರೆ ಸೇರಿದಂತೆ ಎಲ್ಲಾ ಮಾಹಿತಿಯನ್ನು ಸರಕಾರಕ್ಕೆ ನೀಡಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸುತ್ತೋಲೆ ಹೊರಡಿಸಿದೆ.

ಸರಕಾರಿ ನೌಕರರು ತಮ್ಮೊಂದಿಗೆ ಅಧಿಕೃತವಾಗಿ ವ್ಯವಹಾರ ನಡೆಸುವ ವ್ಯಕ್ತಿಗಳನ್ನು ಹೊರತುಪಡಿಸಿ, ಉಳಿದ ಮೂಲಗಳಿಂದ ತನ್ನ ಹೆಸರು ಅಥವಾ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಉಡುಗೊರೆ, ಗುತ್ತಿಗೆ, ಅಡಮಾನ, ಖರೀದಿ, ಮಾರಾಟ, ಸ್ಥಿರಾಸ್ತಿ ಖರೀದಿ ಮತ್ತು ಮಾರಾಟದ ಬಗ್ಗೆ ಗೊತ್ತು ಪಡಿಸಿದ ಪ್ರಾಧಿಕಾರಕ್ಕೆ ಮೊದಲೇ ಮಾಹಿತಿ ನೀಡಬೇಕು. ಇಲ್ಲವಾದ್ರೆ ವ್ಯವಹಾರ ನಡೆದ ಎರಡು ತಿಂಗಳ ಒಳಗಾಗಿ ಸೂಕ್ತ ದಾಖಲೆಯ ಜೊತೆಗೆ ಮಾಹಿತಿಯನ್ನು ನೀಡಬೇಕೆಂದು ಆದೇಶದಲ್ಲಿ ಹೇಳಲಾಗಿದೆ.

ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮ- 2021 ಜಾರಿಯಾಗಿದೆ. ಸರಕಾರಿ ನೌಕರರು ತಮ್ಮ ಹೆಸರಲ್ಲಿ ಅಥವಾ ಕುಟುಂಬ ಸದಸ್ಯರ ಹೆಸರಲ್ಲಿ ಇರುವ ತಾನು, ತನ್ನ ಕುಟುಂಬದ ಯಾವುದೇ ಸದಸ್ಯರ ಒಡೆತನದಲ್ಲಿರುವ ಚರಾಸ್ತಿ ಸಂಬಂಧದ ಪ್ರತಿ ವ್ಯವಹಾರದಲ್ಲಿ ಸ್ವತ್ತಿನ ಮೌಲ್ಯ ಆತನ ಮಾಸಿಕ ಮೂಲ ವೇತನ ಮೀರಿದರೆ ಸಕ್ಷಮ ಪ್ರಾಧಿಕಾರಕ್ಕೆ ವರದಿ ಮಾಡಬೇಕು. ತನ್ನೊಂದಿಗೆ ಅಧಿಕೃತ ವ್ಯವಹಾರ ಹೊಂದಿರುವ ವ್ಯಕ್ತಿಯೊಂದಿಗಿನ ವ್ಯವಹಾರವಾದರಷ್ಟೇ ಪ್ರಾಧಿಕಾರದ ಪೂರ್ವ ಮಂಜೂರಾತಿ ಅಗತ್ಯ ಎಂದು ವಿವರಿಸ ಲಾಗಿದೆ. ಎಲ್ಲ ಸಕ್ಷಮ ಪ್ರಾಧಿಕಾರಗಳು, ಸರಕಾರಿ ನೌಕರರ ಗಮನ ತರಲು ಕ್ರಮ ಕೈಗೊಳ್ಳಬೇಕು ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಇಲಾಖಾ ಮುಖ್ಯಸ್ಥರಿಗೆ ತಿಳಿಸಲಾಗಿದೆ

Comments are closed.