Spanish woman was gang-rape Jharkhand : ಜಾರ್ಖಂಡ್ : ಆಕೆ ಪತಿಯ ಜೊತೆಗೆ ನಿಸರ್ಗ ಸೌಂದರ್ಯವನ್ನು ಸವಿಯಲು ಭಾರತಕ್ಕೆ ಬಂದಿದ್ದಳು. ಪತಿಯ ಜೊತೆಗೆ ಟೆಂಟ್ ನಲ್ಲಿ ಮಲಗಿದ್ದ ವೇಳೆಯಲ್ಲಿ ಸ್ಥಳಕ್ಕೆ ಬಂದ ಎಂಟರಿಂದ ಹತ್ತು ಮಂದಿ ದುಷ್ಕರ್ಮಿಗಳು ವಿದೇಶಿ ಮಹಿಳೆಯ (Spanish woman) ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ನಂತರ ಮಹಿಳೆ ಪತಿಯ ಜೊತೆಗೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ

ಈ ಘಟನೆ ನಡೆದಿರೋ ಜಾರ್ಖಂಡ್ ನಲ್ಲಿ(Jharkhand) . ಸ್ಪ್ಯಾನಿಷ್ ಪ್ರವಾಸಿ ವೀಸಾದ ಮೂಲಕ ಭಾರತಕ್ಕೆ ಬಂದಿದ್ದಳು. ಆರಂಭದಲ್ಲಿ ಪಾಕಿಸ್ತಾನಕ್ಕೆ ಬಂದಿದ್ದ ಜೋಡಿ ನಂತರ ಬಾಂಗ್ಲಾದೇಶ ಮೂಲಕ ಜಾರ್ಖಂಡ್ ತಲುಪಿದ್ದರು. ಜಾರ್ಖಂಡ್ ನ ದುಮ್ಕಾದ ಹಂನ್ದಿಹಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವ ಕುಂಜಿ ಗ್ರಾಮದಲ್ಲಿ ಟೆಂಟ್ ನಲ್ಲಿ ಉಳಿದು ಕೊಂಡಿದ್ದರು.
ದಂಪತಿ ಜಾರ್ಖಂಡ್ ನಿಂದ ನೇಪಾಳಕ್ಕೆ ತೆರಳಲು ಫ್ಲ್ಯಾನ್ ಮಾಡಿಕೊಂಡಿದ್ದರು. ಮಹಿಳೆ ಪತಿಯ ಜೊತೆಗೆ ಟೆಂಟ್ ನಲ್ಲಿ ಇರುವಾಗಲೇ ನುಗ್ಗಿದ ದುಷ್ಕರ್ಮಿಗಳು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ನಂತರ ಪತಿಯ ಬೈಕ್ ನಲ್ಲಿ ದುಮ್ಕಾದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿತಾಂಬರ ಸಿಂಗ್ ಖೇರ್ವಾರ್ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಮೂವರು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಮಹಿಳೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ. ಜಾರ್ಖಂಡ್ ನಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಖಂಡಿಸಿದೆ. ಅಲ್ಲದೇ ಹೇಮಂತ್ ಸೊರೆನ್ ಸರಕಾರದಲ್ಲಿ ಮಹಿಳೆಯರಿಗೆ ಯಾವುದೇ ಸುರಕ್ಷತೆ ಇಲ್ಲ ಎಂದು ಆರೋಪಿಸಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ : ಗೃಹಿಣಿಯರಿಗೆ ಭರ್ಜರಿ ಗುಡ್‌ನ್ಯೂಸ್ ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್
ರಾಜ್ಯ ಸರಕಾರ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಕೂಡಲೇ ಎಸ್ಐಟಿ ರಚನೆ ಮಾಡಬೇಕು. ರಾಜ್ಯ ಮಾತ್ರವಲ್ಲದೇ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಈ ಪ್ರಕರಣ ಸುದ್ದಿ ಹರಡಲಿದ್ದು, ಜಾರ್ಖಂಡ್ ಸರಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಅಲ್ಲದೇ ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ವಿಶೇಷ ಯೋಜನೆಯನ್ನು ರೂಪಿಸಬೇಕು ಎಂದು ಜಾರ್ಕಂಡ್ ಬಿಜೆಪಿ ರಾಜ್ಯ ವಕ್ತಾರ ಪ್ರತುಲ್ ಶಾಹದೇವ್ ತಿಳಿಸಿದ್ದಾರೆ.
ಇದನ್ನೂ ಓದಿ :ಗೃಹಲಕ್ಷ್ಮೀ ಯೋಜನೆಯ ಹಣ ಪಡೆಯೋಕೆ ಇನ್ಮುಂದೆ ಈ ಕೆಲಸ ಮಾಡುವುದು ಕಡ್ಡಾಯ
India news Spanish woman was gang-raped by ten people in Jharkhand