ದೆಹಲಿ : Jacqueline Fernandez : ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್ ಪ್ರಕರಣಕ್ಕೆ ಸಂಬಂಧಿಸಿದ 200 ಕೋಟಿ ರೂಪಾಯಿ ಮೌಲ್ಯದ ಸುಲಿಗೆ ಪ್ರಕರಣದ ತನಿಖೆ ನಡೆಯುತ್ತಿರುವ ನಡುವೆಯೇ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಭಾರತದಿಂದ ಎಸ್ಕೇಪ್ ಆಗಲು ಯತ್ನಿಸಿದ್ದಾರೆ ಎಂಬ ಶಾಕಿಂಗ್ ಮಾಹಿತಿಯನ್ನು ಜಾರಿ ನಿರ್ದೇಶನಾಲಯ ದೆಹಲಿ ಹೈಕೋರ್ಟ್ಗೆ ತಿಳಿಸಿದೆ.
ದೆಹಲಿ ಹೈಕೋರ್ಟ್ ಪ್ರಸ್ತುತ ನಟಿ ಜಾಕ್ವೆಲಿನ್ ಫರ್ನಾಂಡಿಸ್ರ ಜಾಮೀನು ಅರ್ಜಿಯ ವಿಚಾರಣೆ ನಡೆಸುತ್ತಿದೆ. ನಟಿ ಜಾಕ್ವೆಲಿನ್ ಪರ ವಕೀಲರು ನೀಡಿರುವ ಮಾಹಿತಿಯ ಪ್ರಕಾರ ಆಕೆಯು ಇಡಿಯಿಂದ ಯಾವುದೆ ದಾಖಲೆಗಳನ್ನು ಪಡೆದಿಲ್ಲ. ಈ ಪ್ರಕರಣ ಸಂಬಂಧ ಮುಂದಿನ ವಿಚಾರಣೆಯು ನವೆಂಬರ್ 10ರಂದು ನಡೆಯಲಿದೆ. ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸಾಮಾನ್ಯ ಜಾಮೀನು ಅರ್ಜಿಯನ್ನು ವಿರೋಧಿಸಿ ನ್ಯಾಯಾಲಯಕ್ಕೆ ಶನಿವಾರ ನೀಡಿದ ಉತ್ತರದಲ್ಲಿ ಜಾರಿ ನಿರ್ದೇಶನಾಲಯವು, ಜಾಕ್ವೆಲಿನ್ ಫರ್ನಾಂಡಿಸ್ ತನ್ನ ಮೊಬೈಲ್ ಫೋನ್ನಿಂದ ಡೇಟಾಗಳನ್ನು ಅಳಿಸುವ ಮೂಲಕ ಸಾಕ್ಷ್ಯಾಧಾರಗಳನ್ನು ನಾಶಪಡಿಸಿದ್ದಾರೆ ಎಂದು ಆರೋಪಿಸಿದೆ.
ಜಾಕ್ವೆಲಿನ್ ಫರ್ನಾಂಡಿಸ್ ತನಿಖಾಧಿಕಾರಿಗಳಿ ಸಹಕಾರ ನೀಡುತ್ತಿಲ್ಲ ಎಂಬುದು ಇಡಿ ಆರೋಪವಾಗಿದೆ. ನಟಿ ಭಾರತವನ್ನು ತೊರೆಯಲು ಯತ್ನಿಸಿದ್ದರು. ಆದರೆ ಜಾಕ್ವೆಲಿನ್ ವಿರುದ್ಧ ಲುಕ್ಔಟ್ ನೋಟಿಸ್ನಲ್ಲಿ ಈಕೆಯ ಹೆಸರು ಇದ್ದರಿಂದ ಈಕೆಗೆ ಅದು ಸಾಧ್ಯವಾಗಲಿಲ್ಲ ಎಂದು ಜಾರಿ ನಿರ್ದೇಶನಾಲಯ ದೆಹಲಿ ಹೈಕೋರ್ಟ್ಗೆ ತಿಳಿಸಿದೆ. ಪ್ರಕರಣದ ಇತರ ಆರೋಪಿಗಳೊಂದಿಗೆ ಮುಖಾಮುಖಿ ಮಾಡಿದಾಗ ಹಾಗೂ ಸಾಕ್ಷ್ಯಗಳನ್ನು ಪ್ರಸ್ತುತಪಡಿಸಿದಾದ ಫರ್ನಾಂಡಿಸ್ ಇದಕ್ಕೆ ಸಹಕರಿಸಲು ನಿರಾಕರಿಸಿದ್ದಾರೆ ಎಂದು ಇಡಿ ಗಂಭೀರ ಆರೋಪ ಮಾಡಿದೆ.
ದೆಹಲಿಯಲ್ಲಿ ಜೈಲುಪಾಲಾಗಿರುವ ವಂಚಕ ಸುಕೇಶ್ ಚಂದ್ರಶೇಖರ್, ಫೋರ್ಟಿಸ್ ಹೆಲ್ತ್ಕೇರ್ ಮಾಜಿ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ರ ಪತ್ನಿ ಅದಿತಿ ಸಿಂಗ್ ಸೇರಿದಂತೆ ಅನೇಕರಿಗೆ ವಂಚಿಸಿದ್ದ. ಸುಕೇಶ್ ಚಂದ್ರಶೇಖರ್ನಿಂದ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ಮತ್ತೋರ್ವ ಬಾಲಿವುಡ್ ನಟಿ ನೋರಾ ಫತೇಹಿ ಐಷಾರಾಮಿ ಕಾರುಗಳು ಸೇರಿದಂತೆಬ ಇತರೆ ದುಬಾರಿ ಉಡುಗೊರೆಗಳನ್ನು ಪಡೆದಿದ್ದರು ಎಂದು ಇಡಿ ಹೇಳಿದೆ.
ಇದನ್ನು ಓದಿ : Rayan Raj Sarja : ಚಿರು ಸರ್ಜಾ – ಮೇಘನಾ ರಾಜ್ ಸರ್ಜಾ ಪುತ್ರ ರಾಯನ್ ರಾಜ್ ಸರ್ಜಾಗೆ ಬರ್ತಡೇ ಸಂಭ್ರಮ
ಇದನ್ನೂ ಓದಿ : Couples At OYO Rooms : ಓಯೋ ರೂಮಿನಲ್ಲಿ ದಂಪತಿಯ ಖಾಸಗಿ ಕ್ಷಣದ ವಿಡಿಯೋ ರೆಕಾರ್ಡ್ ಮಾಡಿ ಬ್ಲಾಕ್ಮೇಲ್ : ನಾಲ್ವರ ಬಂಧನ
Jacqueline Fernandez Tried To Flee India, Destroy Evidence: Agency