Couples At OYO Rooms : ಓಯೋ ರೂಮಿನಲ್ಲಿ ದಂಪತಿಯ ಖಾಸಗಿ ಕ್ಷಣದ ವಿಡಿಯೋ ರೆಕಾರ್ಡ್ ಮಾಡಿ ಬ್ಲಾಕ್​ಮೇಲ್​ : ನಾಲ್ವರ ಬಂಧನ

ಉತ್ತರ ಪ್ರದೇಶ : Couples At OYO Rooms : ಓಯೋ ರೂಮ್​ಗಳು ಅಂದರೆ ಅಲ್ಲಿ ಖಾಸಗಿತನಕ್ಕೆ ಧಕ್ಕೆ ಎಂಬ ಆರೋಪ ಕೇಳಿ ಬರುತ್ತಲೇ ಇದೆ. ಈ ಮಾತಿಗೆ ಪುಷ್ಠಿ ಎಂಬಂತೆ ಓಯೋ ಆ್ಯಪ್​ ಮೂಲಕ ಬುಕ್​ ಮಾಡಲಾದ ಹೋಟೆಲ್​ಗಳ ಕೊಠಡಿಗಳಲ್ಲಿ ರಹಸ್ಯ ಕ್ಯಾಮರಾಗಳನ್ನು ಇರಿಸುವ ಮೂಲಕ ದಂಪತಿಯ ಆತ್ಮೀಯ ಕ್ಷಣಗಳನ್ನು ರೆಕಾರ್ಡ್ ಮಾಡುತ್ತಿದ್ದ ಆರೋಪದ ಮೇಲಡ ಉತ್ತರ ಪ್ರದೇಶದ ನೋಯ್ಡಾದಲ್ಲಿ ಪೊಲೀಸರು ನಾಲ್ವರು ಖದೀಮರನ್ನು ಬಂಧಿಸಿದ್ದಾರೆ .

ಓಯೋ ರೂಮ್​ನಲ್ಲಿ ಖಾಸಗಿ ಕ್ಷಣಗಳನ್ನು ಕಳೆದಿದ್ದ ದಂಪತಿಯ ವಿಡಿಯೋ ರೆಕಾರ್ಡ್ ಮಾಡಿದ್ದ ನಾಲ್ವರು ಖದೀಮರ ಗುಂಪು ಬಳಿಕ ದಂಪತಿಗೆ ಹಣ ನೀಡದಿದ್ದರೆ ಈ ವಿಡಿಯೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಡುತ್ತೇವೆಂದು ಬೆದರಿಕೆ ಹಾಕುತ್ತಿತ್ತು ಎನ್ನಲಾಗಿದೆ. ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಪ್ರಕರಣದಲ್ಲಿ ಹೋಟೆಲ್​ನ ಸಿಬ್ಬಂದಿಯ ಪಾತ್ರವಿಲ್ಲ ಎಂಬುದು ಪ್ರಾಥಮಿಕ ತನಿಖೆಯ ಸಂದರ್ಭದಲ್ಲಿ ಪೊಲೀಸರಿಗೆ ತಿಳಿದು ಬಂದಿದೆ.

ಆರೋಪಿಗಳ ಗುಂಪಿನ ಸದಸ್ಯರು ಓಯೋ ಹೋಟೆಲ್​ಗಳಲ್ಲಿ ರೂಮ್​​ಗಳನ್ನು ಬುಕ್​ ಮಾಡಿ ಅಲ್ಲಿ ರಹಸ್ಯ ಕ್ಯಾಮರಾಗಳನ್ನು ಅಂಟಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೆಲವು ದಿನಗಳ ಬಳಿಕ ಮತ್ತೆ ಆ ಕೊಠಡಿಗೆ ಬಂದು ರಹಸ್ಯ ಕ್ಯಾಮರವನ್ನು ತೆಗೆದುಕೊಂಡು ಮನೆಗೆ ತೆರಳಿದ ಈ ದುಷ್ಕರ್ಮಿಗಳಿಗೆ ಆ ರೂಮಿನಲ್ಲಿ ತಂಗಿದ್ದ ದಂಪತಿಯ ಖಾಸಗಿ ಕ್ಷಣದ ವಿಡಿಯೋ ಲಭ್ಯವಾಗಿತ್ತು.

ಈ ಸಂಬಂಧ ಪೊಲೀಸರು ವಿಷ್ಣು ಸಿಂಗ್​, ಅಬ್ದುಲ್​ ವಹಾವ್​, ಪಂಕಜ್​ ಕುಮಾರ್​ ಹಾಗೂ ಅನುರಾಗ್​ ಕುಮಾರ್​ ಸಿಂಗ್​ ಎಂಬವರನ್ನು ಬಂಧಿಸಿದ್ದಾರೆ. ಈ ನಾಲ್ವರು ಮೂರು ವಿಭಿನ್ನ ಗ್ಯಾಂಗ್​ನ ಸದಸ್ಯರು ಎನ್ನಲಾಗಿದೆ. ಅನಧಿಕೃತ ಕಾಲ್​ ಸೆಂಟರ್​ಗಳು, ಅಕ್ರಮ ಚಟುವಟಿಕೆಗಳಿಗೆ ನಕಲಿ ಸಿಮ್​ ಕಾರ್ಡ್ಗಳನ್ನು ಒದಗಿಸುವುದು ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳಲ್ಲಿ ಈ ಗುಂಪು ತೊಡಗಿಸಿಕೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ 11 ಲ್ಯಾಪ್​ಟಾಪ್​ಗಳು, 21 ಮೊಬೈಲ್​ಗಳು ಹಾಗೂ 22 ಎಟಿಎಂ ಕಾರ್ಡ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಖದೀಮರ ಗ್ಯಾಂಗ್​ ದೇಶಾದ್ಯಂತ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿತ್ತು ಎನ್ನಲಾಗಿದೆ. ಈ ಗ್ಯಾಂಗ್​ನಲ್ಲಿ ಓರ್ವ ತಲೆಮರೆಸಿಕೊಂಡಿದ್ದು ಈತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ .

ಇದನ್ನು ಓದಿ : Arshdeep Singh: ಪಾಕ್ ಬ್ಯಾಟಿಂಗ್ ಬೆನ್ನೆಲುಬು ಮುರಿದ ಅರ್ಷದೀಪ್, ಅಂದು ಖಲಿಸ್ತಾನಿ ಅಂದವರೇ ಇಂದು ಬಹುಪರಾಕ್ ಹಾಕಿದ್ರು

ಇದನ್ನೂ ಓದಿ : Rayan Raj Sarja : ಚಿರು ಸರ್ಜಾ – ಮೇಘನಾ ರಾಜ್ ಸರ್ಜಾ ಪುತ್ರ ರಾಯನ್ ರಾಜ್ ಸರ್ಜಾಗೆ ಬರ್ತಡೇ ಸಂಭ್ರಮ

Couples At OYO Rooms Secretly Filmed, 4 Arrested In Noida

Comments are closed.