ಚೆನ್ನೈ: (K Muralidharan) ತಮಿಳು ಚಿತ್ರರಂಗದ ಹಿರಿಯ ನಿರ್ಮಾಪಕ ಕೆ. ಮುರಳಿಧರನ್ ಅವರು ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತಮ್ಮ ಹುಟ್ಟೂರಾದ ತಮಿಳುನಾಡಿನ ಕುಂಭಕೋಣದ ತಮ್ಮ ಸ್ವಗ್ರಾಮದಲ್ಲಿ ನಿಧನರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ನಿರ್ಮಾಪಕ ಕೆ. ಮುರಳಿಧರನ್ (K Muralidharan)ಅವರು ತಮ್ಮ ಉಧ್ಯಮದ ಪಾಲುದಾರರಾದ ವಿ. ಸ್ವಾಮಿನಾಥನ್ ಹಾಗೂ ಜಿ. ವೇಣುಗೋಪಾಲ್ ಅವರ ಜೊತೆ ಲಕ್ಷ್ಮಿ ಮೂವಿ ಮೇಕರ್ಸ್ ಚಿತ್ರ ನಿರ್ಮಾಣ ಸಂಸ್ಥೆ ಸ್ಥಾಪಿಸಿದ್ದರು. ಅದರ ಮೂಲಕ ಅವರು ಅಂಬೆ ಶಿವಂ, ಪುದುಪೆಟ್ಟೈ ಮತ್ತು ಬಾಗಾವತಿಯಂತಹ ಹಲವಾರು ಪ್ರಮುಖ ಹಿಟ್‌ಗಳನ್ನು ಚಿತ್ರಗಳನ್ನು ನಿರ್ಮಾಣ ಮಾಡಿದರು. ಅಲ್ಲದೇ ಮುರಳೀಧರನ್ ಅವರು ತಮಿಳು ನಿರ್ಮಾಪಕರ ಮಂಡಳಿಯ ಮಾಜಿ ಅಧ್ಯಕ್ಷರೂ ಆಗಿದ್ದರು.
ಲಕ್ಷ್ಮಿ ಮೂವೀ ಮೇಕರ್ಸ್ ತಮಿಳು ಚಿತ್ರರಂಗದ ಕೆಲವು ದೊಡ್ಡ ತಾರೆಗಳೊಂದಿಗೆ ವಾಣಿಜ್ಯಿಕವಾಗಿ ಯಶಸ್ವಿ ಚಲನಚಿತ್ರಗಳನ್ನು ನೀಡಿದೆ. ಕೆ ಮುರಳೀಧರನ್ ಅವರು ಕಮಲ್ ಹಾಸನ್ ಅವರ ಅನ್ಬೆ ಶಿವಂ, ವಿಜಯಕಾಂತ್ ಅವರ ಉಳವತುರೈ, ಕಾರ್ತಿಕ್ ಅವರ ಗೋಕುಲತಿಲ್ ಸೀತೈ, ಅಜಿತ್ ಅವರ ಉನ್ನೈ ತೇಡಿ, ವಿಜಯ್ ಅವರ ಪ್ರಿಯಾಮುದನ್, ಧನುಷ್ ಅವರ ಪುದುಪೆಟ್ಟೈ ಮತ್ತು ಸಿಂಬು ಅವರ ಸಿಲಂಬಟ್ಟಂ ನಂತಹ ಕಮರ್ಷಿಯಲ್ ಹಿಟ್ ಚಿತ್ರಗಳನು ನಿರ್ಮಿಸಿ ಚಿತ್ರರಂಗದಲ್ಲಿ ಹೆಸರು ಮಾಡಿದ್ದರು.
ಇದನ್ನೂ ಓದಿ : Divinestar Rishabh Shetty : ತುಳುವಿನಲ್ಲಿ ಬಿಡುಗಡೆಯಾದ ಕಾಂತಾರ ಸಿನಿಮಾ ಮಹತ್ವದ ಸಂದೇಶ ಕೊಟ್ಟ ರಿಷಬ್ ಶೆಟ್ಟಿ
ಇದನ್ನೂ ಓದಿ : Aira Production house: ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾಗೆ ಮಗಳೇ ನಿರ್ಮಾಪಕಿ.. ಐರಾ ಹೆಸರಿನಲ್ಲಿ ಪ್ರೊಡಕ್ಷನ್ ಹೌಸ್..?
ಜಯಂ ರವಿ, ತ್ರಿಷಾ ಮತ್ತು ಅಂಜಲಿ ನಟಿಸಿದ ಸಕಲಕಲಾ ವಲ್ಲವನ್, LMM ನಿರ್ಮಾಣ ಸಂಸ್ಥೆಯ ಕೊನೆಯ ಚಿತ್ರವಾಗಿದ್ದು ಇದು 2015 ರಲ್ಲಿ ಬಿಡುಗಡೆಯಾಯಿತು. ಕೆ. ಮುರಳಿಧರನ್ ಅವರ ನಿಧನಕ್ಕೆ ತಮಿಳಿನ ಸೂಪರ್ ಸ್ಟಾರ್ ನಟ ಕಮಲ್ ಹಾಸನ್ ಹಾಗೂ ನಟ ನಿರ್ದೇಶಕ ಮನೋಬರ ಸೇರಿದಂತೆ ಹಲವರು ಸಂತಾಪವನ್ನು ಸೂಚಿಸಿದ್ದಾರೆ.
(K Muralidharan) Senior Producer of Tamil Film Industry K. Muralidharan died of heart attack today. Reports said that he died in his native village of Kumbakona in Tamil Nadu.