Korba crime news: ರಾತ್ರಿ ಊಟ ಕೊಡಲಿಲ್ಲವೆಂದು ಪತ್ನಿಯನ್ನೇ ಕೊಂದ ಪತಿ

ಛತ್ತೀಸ್‌ ಗಢ: (Korba crime news) ರಾತ್ರಿ ಊಟ ಕೊಡಲು ಪತ್ನಿ ನಿರಾಕರಿಸಿದ್ದಕ್ಕೆ ಕೊಡಲಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಛತ್ತೀಸ್‌ ಗಢದ ಕೊರ್ಬಾದಲ್ಲಿ ನಡೆದಿದೆ. ಇದೀಗ ಆರೋಪಿ ಪತಿಯನ್ನು ಛತ್ತೀಸ್‌ ಗಢ ಪೊಲೀಸರು ಬಂಧಿಸಿದ್ದಾರೆ. ಮಂಜೀತಾ ಶ್ರೀವಾಸ್‌ (32 ವರ್ಷ) ಕೊಲೆಯಾದ ಮಹಿಳೆ.

ಪತಿ ಯೋಗೇಂದ್ರ ಶ್ರೀವಾಸ್‌ (38 ವರ್ಷ) ಕೊರ್ಬಾದ ಖಾಸಗಿ ಕ್ಲಿನಿಕ್‌ ನಲ್ಲಿ ಕಾಂಪೌಂಡರ್ರ ಆಗಿನ ಕೆಲಸ ಮಾಡುತ್ತಿದ್ದು, ಪತ್ನಿ ಮನೆಯಲ್ಲೇ ಇರುತ್ತಿದ್ದಳು. ರಾತ್ರಿ ಕೆಲಸ ಮುಗಿಸಿ ಹಿಂತಿರುಗಿ ಬಂದಿದ್ದ ಆರೋಪಿ (Korba crime news) ಪತಿ ಪತ್ನಿಯಲ್ಲಿ ಊಟ ಕೊಡುವಂತೆ ಕೇಳಿದ್ದಾನೆ. ಆದರೆ ಪತ್ನಿ ಊಟ ಕೊಡಲು ನಿರಾಕರಿಸಿದ್ದಾಳೆ. ನಂತರದಲ್ಲಿ ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ.

ಕೋಪದ ಭರದಲ್ಲಿ ಆರೋಪಿ ಪತಿ ಪತ್ನಿ ಮೇಲೆ ಕೊಡಲಿಯಿಂದ ನಿರಂತರವಾಗಿ ಹಲ್ಲೆ ನಡೆಸಿದ್ದಾನೆ. ಸಂತ್ರಸ್ತೆಯ ಕೂಗಾಡ ಕೇಳಿದ ಮಕ್ಕಳು ಸ್ಥಳಕ್ಕೆ ಓಡಿ ಬಂದಿದ್ದಾರೆ. ಮಕ್ಕಳು ಬಂದು ನೋಡುವಾಗ ಸಂತ್ರಸ್ತೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡರು. ತಾಯಿ ಕೊಲೆಯಾದ ಬಗ್ಗೆ ಮಕ್ಕಳು ಅಕ್ಕಪಕ್ಕದ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಆದರೆ ಆರೋಪಿ ಯೋಗೇಂದ್ರನೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : ಫಾರ್ಮಾ ಲ್ಯಾಬ್‌ ಕಂಪನಿಯಲ್ಲಿ ಬೆಂಕಿ ಅವಘಡ: ನಾಲ್ವರು ಸಾವು

ಇದನ್ನೂ ಓದಿ : Sushant Singh death case: ಸುಶಾಂತ್ ಸಿಂಗ್ ರದ್ದು ಆತ್ಮಹತ್ಯೆಯಲ್ಲ, ಕೊಲೆ ಎಂದ ಆಸ್ಪತ್ರೆ ಸಿಬ್ಬಂದಿ; ಅಂದು ಅಲ್ಲಿ ನಡೆದಿದ್ದೇ ಬೇರೆ ಹೊರಬಿದ್ದ ಸುದ್ದಿಯೇ ಬೇರೆ ಅಂತೆ..!

ಪೋಲೀಸರ ಪ್ರಕಾರ, ದಂಪತಿಗಳು ಆಗಾಗ್ಗೆ ಸಣ್ಣ ವಿಷಯಗಳಿಗೆ ಜಗಳವಾಡುತ್ತಿದ್ದರು ಮತ್ತು ಆರೋಪಿಯು ತನ್ನ ಹೆಂಡತಿಯ ವಾದದ ಸ್ವಭಾವದಿಂದ ತೀವ್ರ ಕಿರಿಕಿರಿಗೆ ಒಳಗಾಗಿದ್ದರು ಎನ್ನಲಾಗಿದೆ.

The incident took place in Korba of Chhattisgarh where the wife was attacked and murdered with an ax because she refused to give him dinner. Now the accused husband has been arrested by Chhattisgarh police. Manjeeta Srivas (32 years) is the murdered woman.

Comments are closed.