ಕೋಟ : ಬಟ್ಟೆ ಮಳಿಗೆಯೊಂದಕ್ಕೆ ರಾತ್ರಿಯ ವೇಳೆಯಲ್ಲಿ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ನಗದು ಹೊತ್ತೊಯ್ದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟದಲ್ಲಿ ನಡೆದಿದೆ.
ಚಿತ್ರಪಾಡಿಯ ಮಹಾಬಲ ಕುಲಾಲ್ ಅವರಿಗೆ ಸೇರಿದ ಬಟ್ಟೆ ಮಳಿಗೆಯೊಂದಕ್ಕೆ ರಾತ್ರಿ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ನಗದು ಕಳವು ಮಾಡಿದ ಘಟನೆ ನಡೆದಿದೆ. ಅಂಗಡಿಯಲ್ಲಿ ವ್ಯವಹಾರ ನಡೆಸಿದ ಹಣವನ್ನು ಗೋದ್ರೆಜ್ ನಲ್ಲಿ ಇಟ್ಟು ತೆರಳಿದ್ದರು.
ಮಳಿಗೆಯ ಎದುರುಗಡೆಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಗೋದ್ರೇಜ್ ಮುರಿದು ಅದರಲ್ಲಿದ್ದ ಒಂದು ಲಕ್ಷಕ್ಕೂ ಅಧಿಕ ಹಣವನ್ನು ಕದ್ದೊಯ್ದಿದ್ದಾರೆ. ಈ ಕುರಿತು ಅಂಗಡಿಯ ಮಾಲಕ ಮಹಾಬಲ ಕುಲಾಲ ಕೋಟ ಠಾಣೆಯಲ್ಲಿ ದೂರು ದಾಖಲಿಸಿದ್ದು ಕೋಟ ಆರಕ್ಷಕ ಠಾಣಾಧಿಕಾರಿ ಸಂತೋಷ್ ಬಿ.ಪಿ ಹಾಗೂ ಪುಷ್ಭರಾಮ್ ನೇತ್ರತ್ವದ ತನಿಖೆ ತೀವ್ರಗೊಂಡಿದೆ.