ಶಿಕ್ಷಕರ ಖಾಲಿ ಹುದ್ದೆಯ ಮಾಹಿತಿ ನೀಡಲು ಶಿಕ್ಷಣ ಇಲಾಖೆ ಸೂಚನೆ


ಬೆಂಗಳೂರು : ರಾಜ್ಯದ‌ ವಿವಿಧ‌ ಶಾಲೆಗಳಲ್ಲಿ ಖಾಲಿ ಉಳಿದಿರುವ ಶಿಕ್ಷಕರ ಹುದ್ದೆಗಳ ಮಾಹಿತಿಯನ್ನು ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆಯನ್ನು ನೀಡಿದೆ.

ಶಿಕ್ಷಕರ ವರ್ಗಾವಣೆ ಸಂಬಂಧ ನಿಖರವಾದ ಹುದ್ದೆಗಳ ಮಾಹಿತಿ ಪಡೆಯುವ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲಾವಾರು ಹುದ್ದೆ-ಶಿಕ್ಷಕರ ಮ್ಯಾಪಿಂಗ್​ ಮಾಡಿ ಖಾಲಿ ಹುದ್ದೆಗಳನ್ನು ಗುರುತಿಸುವಂತೆ ಉಪ ನಿರ್ದೇಶಕರಿಗೆ ಸೂಚಿಸಿದೆ.

ಈ ಹಿಂದೆಯೇ ಖಾಲಿ ಹುದ್ದೆಗಳ ಮಾಹಿತಿಯನ್ನು ಡಿ.1ರೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿತ್ತು. ಆದರೆ, ತಂತ್ರಾಂಶದಲ್ಲಿ ಮಾಹಿತಿಯನ್ನು ಸರಿಯಾಗಿ ಅಪ್​ಲೋಡ್​ ಮಾಡದ ಕಾರಣದಿಂದ ಮ್ಯಾಪಿಂಗ್​ ಪ್ರಕ್ರಿಯೆ ಪೂರ್ಣಗೊಳಿಸಿರುವುದಿಲ್ಲ. ಡಿ.8ರೊಳಗೆ ಮತ್ತೊಮ್ಮೆ ಸೂಕ್ತ ಮಾಹಿತಿಯನ್ನು ಪಡೆದು ಸರ್ಕಾರದಿಂದ ಮಂಜೂರಾದ ವೃಂದವಾರು ಹುದ್ದೆಗಳ ಸಂಖ್ಯೆಯನ್ನು ಹಾಗೂ ನಿಗದಿಪಡಿಸಿದ ಸಿಬ್ಬಂದಿ ಸ್ಥರ ವಿನ್ಯಾಸದಲ್ಲಿ ವ್ಯತ್ಯಾಸವಾಗದಂತೆ ಗಮನವಹಿಸಬೇಕೆಂದು ಇಲಾಖೆ ನಿರ್ದೇಶಕರು ಜಿಲ್ಲಾ ಉಪನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

ಎಲ್ಲ ಮಾಹಿತಿಯನ್ನು ಎಕ್ಸೆಲ್​ನಲ್ಲಿ ಸೇರಿಸಿ [email protected] ಈ ವಿಳಾಸಕ್ಕೆ ಇ-ಮೇಲ್​ ಸಲ್ಲಿಸುವುದು. ನಿಗದಿತ ವೇಳಾಪಟ್ಟಿಯಂತೆ ವರ್ಗಾವಣೆ ಪ್ರಕ್ರಿಯೆಯನ್ನು ನಡೆಸಲು ಈ ಕಾರ್ಯವು ಅತ್ಯಂತ ತುರ್ತು ಮತ್ತು ನಿಖರತೆಯಿಂದ ಆಗಬೇಕಾಗಿರುವುದರಿಂದ ವರ್ಗಾವಣೆ ಮಾರ್ಗಸೂಚಿಯಲ್ಲಿ ತಿಳಿಸಿರುವಂತೆ ಮಾಹಿತಿ ಪರಿಶೀಲಿಸಿ ಪಟ್ಟಿಯನ್ನು ಸಲ್ಲಿಸಬೇಕೆಂದು ನಿರ್ದೇಶಕರು ಡಿಡಿಪಿಐಗಳಿಗೆ ಸೂಚಿಸಿದ್ದಾರೆ.

Comments are closed.