ಅಮೇರಿಕದಲ್ಲಿ ಭಾರತ ಮೂಲದ ಮಹಿಳೆ ನಿಗೂಢ ಸಾವು

ಹೂಸ್ಟನ್‌ : ಭಾರತ ಮೂಲದ ಮಹಿಳೆಯೋರ್ವರು ದೂರದ ಅಮೇರಿಕದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಈ ತಿಂಗಳ ಆರಂಭದಲ್ಲಿ ಅಮೇರಿಕದ ಟೆಕ್ಸಾಸ್‌ನಿಂದ ನಾಪತ್ತೆಯಾಗಿದ್ದ 25 ವರ್ಷದ ವಯಸ್ಸಿನ ಭಾರತದ ಮೂಲದ ಮಹಿಳೆಯ ಮೃತದೇಹ (Lahari Pathivada) ಇದೀಗ ಒಕ್ಲಹೋಮಾ ರಾಜ್ಯದಲ್ಲಿ ಪತ್ತೆಯಾಗಿದೆ. ಭಾರತ ಮೂಲದ ಮಹಿಳೆ ನಿಗೂಢವಾಗಿ ಸಾವನ್ನಪ್ಪಿರುವವರು ಲಹರಿ ಪಟಿವಾಡ ಎಂದು ಗುರುತಿಸಲಾಗಿದೆ. ಈಕೆಯನ್ನು ಕೊನೆಯ ಭಾರೀ ಮೆಕ್‌ಕಿನ್ಲೆ ಉಪನಗರದಲ್ಲಿ ಕಪ್ಪು ಟೊಯೋಟಾ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿರುವುದು ಕಂಡು ಬಂದಿದೆ.

ಟೆಕ್ಸಾಸ್‌ನ ಕೊಲಿನ್ಸ್‌ ಕೌಂಟಿಯ ಮೆಕ್‌ಕಿನ್ಲೆ ನಿವಾಸಿಯಾಗಿದ್ದ ಲಹರಿ ಪಟಿವಾಡ ಮೇ 12 ರಂದು ಕೆಲಸಕ್ಕೆ ತೆರಳಿ ವಾಪಸ್ಸಾಗದೇ ಇದ್ದ ಬಗ್ಗೆ ಅವರ ಕುಟುಂಬ ಆತಂಕ ವ್ಯಕ್ತಪಡಿಸಿದೆ. ಆಕೆಯ ಫೋನ್‌ ಒಕ್ಲಹೋಮಾದಲ್ಲಿ ಟ್ರ್ಯಾಕ್‌ ಆದ ಬಗ್ಗೆ ಸ್ನೇಹಿತರು ಮಾಹಿತಿ ಹಂಚಿಕೊಂಡ ಬಳಿಕ ಪೊಲೀಸರಿಗೆ ದೂರು ನೀಡಲಾಗಿತ್ತು. ಟೆಕ್ಸಾಸ್‌ನ ಡಬ್ಲ್ಯುಓಡಬ್ಲ್ಯು ಸಮುದಾಯ ಗುಂಪು ಮಹಿಳೆಯ ಬಗೆಗಿನ ಮಾಹಿತಿ ಹಂಚಿಕೊಂಡಿದ್ದು, ಮೇ 13 ರಂದು ಯುವತಿಯ ಮೃತದೇಹ ಪತ್ತೆಯಾದ ಸಂದರ್ಭದ ಬಗ್ಗೆ ಯಾವುದೇ ವಿವರ ಹಂಚಿಕೊಂಡಿಲ್ಲ.

ಇದನ್ನೂ ಓದಿ : ಇಮ್ರಾನ್ ಖಾನ್‌ಗೆ ಜೂನ್ 8ವರೆಗೆ ಜಾಮೀನು ಮಂಜೂರು ಮಾಡಿದ ಲಾಹೋರ್ ಹೈಕೋರ್ಟ್

ಇದನ್ನೂ ಓದಿ : ಇಮ್ರಾನ್ ಖಾನ್ ಬಂಧನ ಕಾನೂನುಬಾಹಿರ ಎಂದ ಪಾಕಿಸ್ತಾನ ಸುಪ್ರೀಂ ಕೋರ್ಟ್

ಈ ನಿಗೂಢ ಸಾವು ಅವರ ಕುಟುಂಬ, ಸ್ನೇಹಿತರು ಹಾಗೂ ಸ್ಥಳೀಯ ಸಮುದಾಯದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಮನರಂಜನಾ ತಾಣಗಳಲ್ಲಿ ಸುರಕ್ಷಾ ಕ್ರಮಗಳ ಅಗತ್ಯತೆಯನ್ನು ಈ ಪ್ರಕರಣ ನಿರ್ದಶನವಾಗಿದೆ. ಓವರ್‌ಲ್ಯಾಂಡ್‌ ಪಾರ್ಕ್‌ ಪ್ರಾದೇಶಿಕ ವೈದ್ಯಕೀಯ ಕೇಂದ್ರದಲ್ಲಿ ಉದ್ಯೋಗದಲ್ಲಿದ್ದ ಲಹರಿ ಪಟಿವಾಡ ಅವರು ಕಾನ್ಸಾಸ್‌ ವಿವಿಯಿಂದ ಪದವಿ ಪಡೆದಿದ್ದು, ಬ್ಲೂ ವ್ಯಾಲಿ ವೆಸ್ಟ್‌ ಹೈಸ್ಕೂಲ್‌ನಲ್ಲಿ ಅಧ್ಯಯನ ನಡೆಸಿದ್ದರು.

Lahari Pathivada: Indian-origin woman dies mysteriously in America

Comments are closed.