leopard attack: ಚಿರತೆ ದಾಳಿಗೆ ಯುವತಿ ಬಲಿ: 7.5 ಲಕ್ಷ ರೂ. ಪರಿಹಾರ ಘೋಷಣೆ

ಮೈಸೂರು: (leopard attack) ರಾತ್ರಿ ಮನೆಯಲ್ಲಿದ್ದ ಯುವತಿಯ ಮೇಲೆ ಚಿರತೆ ದಾಳಿ ಮಾಡಿದ್ದು, ಚಿರತೆ ದಾಳಿಗೆ ಯುವತಿಯು ಸಾವನ್ನಪ್ಪಿರುವ ಘಟನೆ ಮೈಸೂರಿನ ಟಿ. ನರಸಿಪುರ ತಾಲೂಕಿನ ಎಸ್‌. ಕೆಬ್ಬೆಹುಂಡಿ ಗ್ರಾಮದಲ್ಲಿ ನಡೆದಿದೆ. ಒಂದು ತಿಂಗಳ ಅಂತರದಲ್ಲಿ ಚಿರತೆ ದಾಳಿಗೆ ಇಬ್ಬರು ವ್ಯಕ್ತಿಗಳು ಬಲಿಯಾಗಿದ್ದು, ಟಿ.ನರಸೀಪುರ ತಾಲೂಕಿನ ಜನರ ಭಯಭೀತರಾಗಿದ್ದಾರೆ. ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಎಸ್‌. ಕೆಬ್ಬೆಹುಂಡಿ ಗ್ರಾಮದ ಮೇಘನಾ ಎಂಬಾಕೆ ಚಿರತೆ ದಾಳಿಗೆ ಬಲಿಯಾದವಳು.

ತಿಂಗಳ ಹಿಂದೆಯಷ್ಟೇ ಚಿರತೆ ದಾಳಿಗೆ ಟಿ.ನರಸಿಪುರ ತಾಲೂಕಿನ ಯುವಕನೊಬ್ಬ ಬಲಿಯಾಗಿದ್ದ. ಇದರ ನೆನಪು ಮಾಸುವ ಮೊದಲೆ ಚಿರತೆ ದಾಳಿಗೆ (leopard attack) ಮತ್ತೊಂದು ಬಲಿಯಾಗಿದೆ. ಮೃತ ಯುವತಿ ಮೇಘನಾ ರಾತ್ರಿ ತನ್ನ ಮನೆಯ ಹಿತ್ತಲಿಗೆ ಹೋಗಿದ್ದ ವೇಳೆಯಲ್ಲಿ ಚಿರತೆ ದಾಳಿ ನಡೆಸಿದೆ. ಚಿರತೆಯ ದಾಳಿಯಿಂದ ಆಕೆಯ ಕುತ್ತಿಗೆ ಹಾಗೂ ಮುಖದ ಭಾಗಕ್ಕೆ ತೀವ್ರ ಗಾಯಗಳಾಗಿತ್ತು. ಚಿಕಿತ್ಸೆಗಾಗಿ ಯುವತಿಯನ್ನು ಟಿ. ನರಸೀಪುರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ.

ಸಾರ್ವಜನಿಕರಿಂದ ತೀವ್ರ ಆಕ್ರೋಶ
ತಿಂಗಳ ಹಿಂದಷ್ಟೇ ನಡೆದ ಚಿರತೆ ದಾಳಿಗೆ ಓರ್ವ ಯುವಕ ಬಲಿಯಾಗಿದ್ದು, ಅದರ ನೆನಪು ಮಾಸುವ ಮೊದಲೇ ಇದೀಗ ಚಿರತೆ ಮತ್ತೊಂದು ಬಲಿ ಪಡೆದಿದೆ. ನಿರಂತರವಾಗಿ ಚಿರತೆಯಿಂದ ದಾಳಿ ನಡೆಯುತ್ತಿದ್ದರೂ ಚಿರತೆಯನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ. ಇದರಿಂದಾಗಿ ಸಾರ್ವಜನಿಕರು ಆಕ್ರೋಶಗೊಂಡಿದ್ದು, ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಗೆ ಕೂತ ಜನರ ಜೊತೆಗೆ ಶಾಸಕರು ಧರಣಿಗೆ ಕೂತು ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರಬೇಕು ಎಂದು ಪಟ್ಟು ಹಿಡಿದು ಕುಳಿತರು. ಈ ವೇಳೆಯಲ್ಲಿ ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳನ್ನು ಜನರು ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ : Leopard in Bangalore: ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಚಿರತೆ ಓಡಾಡುವ ದೃಶ್ಯ ಸಿಸಿಟಿಯಲ್ಲಿ ಸೆರೆ

ಇದನ್ನೂ ಓದಿ : The leopard: ಬೆಂಗಳೂರಲ್ಲಿ ಚಿರತೆ ಕಾಟ :ಶಾಲೆಗೆ ತೆರಳಲು ಮಕ್ಕಳಿಗೆ ಆತಂಕ

ಮೃತ ಯುವತಿಯ ಕುಟುಂಬಕ್ಕೆ 7.5ಲಕ್ಷ ಪರಿಹಾರ ಘೋಷಣೆ
ಸ್ಥಳಕ್ಕೆ ಬಂದ ಅಧಿಕಾರಿಗಳು ಮೃತ ಯುವತಿಯ ಕುಟುಂಬಕ್ಕೆ 7.5 ಲಕ್ಷ ರೂ. ಪರಿಹಾರವನ್ನು ಘೋಷಣೆ ಮಾಡಿದ್ದು, ಸ್ಥಳದಲ್ಲೇ 5 ಲಕ್ಷ ರೂ. ಚೆಕ್‌ ವಿತರಣೆ ಮಾಡಿದರು. ಅಲ್ಲದೇ ಯುವತಿಯ ಕುಟುಂಬದ ಓರ್ವ ವ್ಯಕ್ತಿಗೆ ಕೆಲಸ ನೀಡುವುದಾಗಿ ಭರವಸೆಯನ್ನು ನೀಡಿದ್ದಾರೆ. ಅಲ್ಲದೆ ಟಿ. ನರಸಿಪುರ ತಾಲೂಕಿನಲ್ಲಿ ತಜ್ಞರ ತಂಡಗಳನ್ನು ನೇಮಕ ಮಾಡಿ ಚಿರತೆ ಸೆರೆ ಹಿಡಿಯುವಂತೆ, ಸೆರೆ ಸಿಕ್ಕಲ್ಲಿ ಗುಂಡು ಹಾರಿಸಿ ಕೊಲ್ಲುವಂತೆ ಅಧಿಕಾರಿಗಳು ಭರವಸೆಯನ್ನು ನೀಡಿದ್ದಾರೆ.

(leopard attack) A leopard attacked a young woman at home at night and the young woman died due to the leopard attack. T. Mysore. Narasipur Taluk S. It happened in Kebbehundi village. In the space of a month, two persons have been killed in leopard attacks, and the people of T.Naraseepur taluk are in fear. Mysore District T. S. of Narseepur Taluk. Meghna of Kebbehundi village was the victim of a leopard attack.

Comments are closed.