ಬೆಂಗಳೂರು: (Leopard in Bangalore) ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಚಿರತೆ ಹಾವಳಿ ಹೆಚ್ಚುತ್ತಿದ್ದು, ಜನರಲ್ಲಿ ಆತಂಕವನ್ನು ಮೂಡಿಸುತ್ತಿದೆ. ಬೆಂಗಳೂರಿನ ಉತ್ತರ ಹಳ್ಳಿ ಮುಖ್ಯ ರಸ್ತೆಯ ಕೋಡಿಪಾಳ್ಯದ ಬಿಜಿಎಸ್ ಆಸ್ಪತ್ರೆಯ ಹಿಂಬದಿಯ ಗೇಟ್ ಬಳಿ ಚಿರತೆ, ಜಿಂಕೆಯನ್ನು ಬೇಟೆಯಾಡಿ ತಿಂದು ಹೋಗಿರುವುದು ನಿನ್ನೆ ಪತ್ತೆಯಾಗಿತ್ತು. ಕಳೆದ ಕೆಲವು ದಿನಗಳಿಂದ ಕೋಡಿಪಾಳ್ಯ ಸುತ್ತಮುತ್ತ ಚಿರತೆ ಓಡಾಡುತ್ತಿರುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದರು. ಇದೀಗ ಚಿರತೆಗಳು ಓಡಾಡಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಪ್ರದೇಶದಲ್ಲಿ ಒಟ್ಟು 4 ಚಿರತೆಗಳು (Leopard in Bangalore) ಓಡಾಡುತ್ತಿದೆ ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ವಾಕಿಂಗ್ ಮತ್ತು ಮುಖ್ಯ ರಸ್ತೆಗೆ ಹೋಗಲು ಈ ರಸ್ತೆಯನ್ನು ಬಳಸುತಿದ್ದು, ಈ ನಡುವೆ ಇದೇ ರಸ್ತೆಯಲ್ಲಿ ಒಟ್ಟು 5 ಶಾಲೆಗಳಿವೆ. ಇದೀಗ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಚಿರತೆ ಓಡಾಡಿರುವ ದೃಶ್ಯಗಳು ಸಿಸಿಟಿಯಲ್ಲಿ ಸೆರೆಯಾಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರು ಮನೆಯಿಂದ ಹೊರಬರಲು ಭಯಭೀತರಾಗಿದೆ.
ವಾಕಿಂಗ್ ಮತ್ತು ಮುಖ್ಯ ರಸ್ತೆಗೆ ಹೋಗಲು ಸಾರ್ವಜನಿಕರು ಇದೇ ರಸ್ತೆಯನ್ನು ಬಳಸುತಿದ್ದು, ಈ ನಡುವೆ ಇದೇ ರಸ್ತೆಯಲ್ಲಿ ಒಟ್ಟು 5 ಶಾಲೆಗಳಿವೆ. ಹಾಗಾಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳ ತಂಡದಿಂದ ಚಿರತೆಯ ಚಲನ ವಲನಗಳ ಮೇಲೆ ನಿಗಾ ಇಡಲಾಗಿದೆ. ಈ ಕುರಿತು ನಗರದ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದ್ದು, ಇನ್ನೊಂದೆಡೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಬೋನ್ ಇಟ್ಟು ಚಿರತೆಯನ್ನು ಸೇರೆ ಹಿಡಿಯುವುದಕ್ಕಾಗಿ ಹಾತೊರೆಯುತ್ತಿದ್ದಾರೆ. ಒಬ್ಬೊಬ್ಬರೆ ರಸ್ತೆಗಳಲ್ಲಿ ಓಡಾಡದಂತೆ ಸೂಚನೆ ನೀಡಲಾಗಿದ್ದು, ತುರಹಳ್ಳಿ ಅರಣ್ಯದೊಳಗೆ ವಾಕಿಂಗ್ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ : Weather forecast: ಕರ್ನಾಟಕದಲ್ಲಿ ಇನ್ನೂ ಎರಡು ದಿನ ಮಳೆ : ಹವಾಮಾನ ಇಲಾಖೆ
ಇದನ್ನೂ ಓದಿ : Life threat to Pramod Muthalik: ಪ್ರಮೋದ್ ಮುತಾಲಿಕ್ ಗೆ ಜೀವ ಬೆದರಿಕೆ : ದೂರು ದಾಖಲು
ಈ ಹಿಂದೆ ಬೆಳಗಾವಿ ಮೈಸೂರು ಜಿಲ್ಲೆಗಳಲ್ಲಿ ಚಿರತೆಗಳ ಹಾವಳಿಯಿಂದಾಗಿ ಆತಂಕ ಸೃಷ್ಠಿಯಾಗಿತ್ತು. ಮೈಸೂರಿನಲ್ಲಿ ಚಿರತೆಯ ದಾಳಿಗೆ ತಿಂಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಶಿವಮೊಗ್ಗದಲ್ಲೂ ಕೂಡ ಚಿರತೆಗಳು ನಗರ ಪ್ರದೇಶಗಳಿಗೆ ಎಂಟ್ರಿ ಕೊಟ್ಟಿವೆ. ಇದೀಗ ಬೆಂಗಳೂರಿನಲ್ಲಿ ಚಿರತೆಗಳು ಕಾಣಿಸಿಕೊಂಡಿದ್ದು, ನಗರ ಪ್ರದೇಶದ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದೆ.
(Leopard in Bangalore) Leopard menace is increasing in Silicon City Bangalore, creating anxiety among people. It was found yesterday that a leopard and a deer had been hunted and eaten near the back gate of BGS Hospital at Kodipalya on Uttara Halli Main Road, Bangalore. For the past few days, the public had expressed concern about the leopard roaming around Kodipalya. Now the scenes of leopards running around have been captured on CCTV.