Pro Kabaddi 2023 Playoff : ಟಾಪ್-2 ಟೀಮ್‌ಗೆ ಡೆರೆಕ್ಟ್ ಸೆಮಿಫೈನಲ್ ಎಂಟ್ರಿ, ಹೀಗಿರಲಿದೆ ಪ್ಲೇ ಆಫ್ ಫೈಟ್

ಹೈದರಾಬಾದ್: ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ ( Pro Kabaddi 2023 Playoff) ಟೂರ್ನಿ ನಿರ್ಣಾಯಕ ಘಟ್ಟಕ್ಕೆ ಕಾಲಿಟ್ಟಿದ್ದು, ತಂಡಗಳ ಮಧ್ಯೆ ಪ್ಲೇ ಆಫ್ ರೇಸ್ ಶುರುವಾಗಿದೆ. ಜೈಪುರ ಪಿಂಕ್ ಪ್ಯಾಂಥರ್ಸ್ (19 ಪಂದ್ಯಗಳಿಂದ 69 ಪಾಯಿಂಟ್), ಪುಣೇರಿ ಪಲ್ಟನ್ (19 ಪಂದ್ಯಗಳಿಂದ 69 ಪಾಯಿಂಟ್) ಹಾಗೂ ಬೆಂಗಳೂರು ಬುಲ್ಸ್ (19 ಪಂದ್ಯಗಳಿಂದ 63 ಪಾಯಿಂಟ್)ತಂಡಗಳು ಬಹುತೇಕ ಪ್ಲೇ ಆಫ್’ನಲ್ಲಿ ತಮ್ಮ ಸ್ಥಾನ ಖಚಿತ ಪಡಿಸಿಕೊಂಡಿವೆ. ಉಳಿದ ಮೂರು ಸ್ಥಾನಗಳಿಗಾಗಿ ಯು.ಪಿ ಯೋಧಾ (19 ಪಂದ್ಯಗಳಿಂದ 60 ಪಾಯಿಂಟ್), ತಮಿಳ್ ತಲೈವಾಸ್ (19 ಪಂದ್ಯಗಳಿಂದ 56 ಪಾಯಿಂಟ್), ದಬಾಂಗ್ ಡೆಲ್ಲಿ (19 ಪಂದ್ಯಗಳಿಂದ 54 ಪಾಯಿಂಟ್), ಯು ಮುಂಬಾ (18 ಪಂದ್ಯಗಳಿಂದ 50 ಪಾಯಿಂಟ್), ಬೆಂಗಾಲ್ ವಾರಿಯರ್ಸ್ (18 ಪಂದ್ಯಗಳಿಂದ 49 ಪಾಯಿಂಟ್), ಪಾಟ್ನಾ ಪೈರೇಟ್ಸ್ (18 ಪಂದ್ಯಗಳಿಂದ 48 ಪಾಯಿಂಟ್), ಹರ್ಯಾಣ ಸ್ಟೀಲರ್ಸ್ (18 ಪಂದ್ಯಗಳಿಂದ 46 ಪಾಯಿಂಟ್) ಮತ್ತು ಗುಜರಾತ್ ಜೈಂಟ್ಸ್ (18 ಪಂದ್ಯಗಳಿಂದ 46 ಪಾಯಿಂಟ್) ತಂಡಗಳ ಮಧ್ಯೆ ಪೈಪೋಟಿಯಿದೆ.

ಪ್ಲೇ ಆಫ್ ಪಂದ್ಯಗಳು ಡಿಸೆಂಬರ್ 13ರಿಂದ ಮುಂಬೈನಲ್ಲಿ ಆರಂಭವಾಗಲಿದ್ದು, ಅಗ್ರ ಎರಡು ಸ್ಥಾನ ಪಡೆಯುವ ಎರಡು ತಂಡಗಳು ನೇರವಾಗಿ ಸೆಮಿಫೈನಲ್ ಪ್ರವೇಶಿಸಲಿವೆ. 3, 4, 5 ಹಾಗೂ 6ನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್ ಹಂತದಲ್ಲಿ ಸೆಣಸಲಿದ್ದು, ಇಲ್ಲಿ ಗೆದ್ದ ತಂಡಗಳು ಸೆಮಿಫೈನಲ್’ನಲ್ಲಿ ಟೇಬಲ್ ಟಾಪರ್’ಗಳ ವಿರುದ್ಧ ಆಡಲಿವೆ.

Pro Kabaddi 2023 Playoff : ಪ್ರೊ ಕಬಡ್ಡಿ ಲೀಗ್-9: ಪ್ಲೇ ಆಫ್ ವೇಳಾಪಟ್ಟಿ

ಡಿಸೆಂಬರ್ 13: ಮೊದಲ ಪ್ಲೇ ಆಫ್ (3 Vs 6ನೇ ಸ್ಥಾನಿ)
ಡಿಸೆಂಬರ್ 13: ಎರಡನೇ ಪ್ಲೇ ಆಫ್ (4 Vs 5ನೇ ಸ್ಥಾನಿ)

ಡಿಸೆಂಬರ್ 15: ಮೊದಲ ಸೆಮಿಫೈನಲ್ (ಅಂಕಪಟ್ಟಿಯ ಅಗ್ರಸ್ಥಾನಿ Vs ಮೊದಲ ಎಲಿಮಿನೇಟರ್ ಪಂದ್ಯದ ವಿನ್ನರ್)
ಡಿಸೆಂಬರ್ 15: ಎರಡನೇ ಸೆಮಿಫೈನಲ್ (ಅಂಕಪಟ್ಟಿಯ 2ನೇ Vs ಎರಡನೇ ಎಲಿಮಿನೇಟರ್ ಪಂದ್ಯದ ವಿನ್ನರ್)

ಡಿಸೆಂಬರ್ 17: ಫೈನಲ್
ಸ್ಥಳ: ಡೋಮ್ NSCI SVP ಕ್ರೀಡಾಂಗಣ, ಮುಂಬೈ

ಪ್ರೊ ಕಬಡ್ಡಿ ಲೀಗ್-9: ಶುಕ್ರವಾರದ ಪಂದ್ಯಗಳು (Pro Kabaddi League)

  1. ಯು.ಪಿ ಯೋಧಾ Vs ಯು ಮುಂಬಾ
  2. ಪಾಟ್ನಾ ಪೇರೇಟ್ಸ್ Vs ಗುಜರಾತ್ ಜೈಂಟ್ಸ್
  3. ಹರ್ಯಾಣ ಸ್ಟೀಲರ್ಸ್ Vs ಬೆಂಗಾಲ್ ವಾರಿಯರ್ಸ್

ಸ್ಥಳ: ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣ, ಹೈದರಾಬಾದ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

ಇದನ್ನೂ ಓದಿ : ಭಾರತಕ್ಕೆ ನೆಟ್ ಬೌಲರ್ ಆಗಿದ್ದಾತ ಇಂದು ಪಾಕಿಸ್ತಾನದ ಬೆಂಕಿ ಬೌಲರ್

ಇದನ್ನೂ ಓದಿ : IPL Auction 2023: ಡಿಸೆಂಬರ್ 23ಕ್ಕೆ ಐಪಿಎಲ್ ಹರಾಜು: ಒಟ್ಟು 991 ಆಟಗಾರರು, 774 ಭಾರತೀಯರು

Pro Kabaddi 2023 Playoff Direct semi-final entry for the top-2 teams

Comments are closed.