ಸೋಮವಾರ, ಏಪ್ರಿಲ್ 28, 2025
HomeCrimeLover Murder: ಛತ್ತೀಸ್ ಗಢದಲ್ಲೊಂದು ಭೀಕರ ಹತ್ಯೆ; ಪ್ರಿಯತಮೆಯ ಬಾಯಿ ಕಟ್ಟಿ, ಸ್ಕ್ರೂ ಡ್ರೈವರ್ ನಿಂದ...

Lover Murder: ಛತ್ತೀಸ್ ಗಢದಲ್ಲೊಂದು ಭೀಕರ ಹತ್ಯೆ; ಪ್ರಿಯತಮೆಯ ಬಾಯಿ ಕಟ್ಟಿ, ಸ್ಕ್ರೂ ಡ್ರೈವರ್ ನಿಂದ 51 ಬಾರಿ ಇರಿದು ಕೊಂದ ಪ್ರೇಮಿ..

- Advertisement -

ಛತ್ತೀಸ್ ಗಢ: Lover Murder: ದೆಹಲಿಯಲ್ಲಿ ನಡೆದ ಶೃದ್ಧಾ ವಾಕರ್ ಹತ್ಯೆ ರಾಷ್ಟ್ರ ರಾಜಧಾನಿಯಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಅದಾದ ಬಳಿಕ ಶೃದ್ಧಾ ಹತ್ಯೆ ಪ್ರಕರಣವನ್ನೇ ಹೋಲುವ ಹಲವು ಕೊಲೆ ಕೇಸ್ ಗಳು ಪ್ರತಿನಿತ್ಯ ವರದಿಯಾಗುತ್ತಿದೆ. ಇದೀಗ ಛತ್ತೀಸ್ ಗಢದಲ್ಲಿಯೂ ಪ್ರೇಮಿಯೊಬ್ಬ ತನ್ನ 20 ವರ್ಷದ ಪ್ರಿಯತಮೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಛತ್ತೀಸ್ ಗಢದ ಕೊರ್ಬಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ತನ್ನ ಜೊತೆ ಮಾತನಾಡಲು ನಿರಾಕರಿಸಿದಳು ಎಂಬ ಒಂದೇ ಕಾರಣಕ್ಕೆ ತನ್ನ 20 ವರ್ಷದ ಪ್ರೇಯಸಿಯನ್ನು ಕೊಲೆಗೈದಿದ್ದಾನೆ. ಡಿ.24ರಂದು ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ ಪಂಪ್ ಹೌಸ್ ಕಾಲನಿಯಲ್ಲಿ ಈ ಘಟನೆ ನಡೆದಿದೆ ಎಂದು ಕೊರ್ಬಾ ನಗರ ಪೊಲೀಸ್ ವರಿಷ್ಠಾಧಿಕಾರಿ ವಿಶ್ವದೀಪಕ್ ತ್ರಿಪಾಠಿ ತಿಳಿಸಿದ್ದಾರೆ.

ಇದನ್ನೂ ಓದಿ: Bus caught fire in depot: ಡಿಪ್ಪೋದಲ್ಲಿ ನಿಲ್ಲಿಸಿದ್ದ ಮೂರು ಬಸ್‌ ಗೆ ಬೆಂಕಿ: ತಪ್ಪಿದ ಭಾರೀ ಅನಾಹುತ

ಪೊಲೀಸರು ಹೇಳುವ ಪ್ರಕಾರ, ಯುವತಿ ಒಬ್ಬಳೇ ಮನೆಯಲ್ಲಿದ್ದ ವೇಳೆ ಆರೋಪಿ ಆಕೆಯ ಮನೆಗೆ ಬಂದು ಕೊಲೆಗೈಯಲು ಮುಂದಾಗಿದ್ದಾನೆ. ಈ ವೇಳೆ ಆಕೆ ಕಿರುಚಾಡಿದ್ದು, ಇದನ್ನು ತಡೆಯಲು ಆತ ಆಕೆಯ ಬಾಯಿಗೆ ಬಟ್ಟೆ ತುರುಕಿ, ಸ್ಕ್ರೂ ಡ್ರೈವರ್ ನಿಂದ 51 ಬಾರಿ ಇರಿದಿದ್ದಾನೆ. ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಆಕೆಯ ತಮ್ಮ ಸಂಜೆ ಮನೆಗೆ ಬಂದಾಗ ಆಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಇದನ್ನು ಕಂಡು ಗಾಬರಿಯಾದ ತಮ್ಮ ಕೂಡಲೇ ಗಾಬರಿಯಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ಜಶ್ಪುರ ಜಿಲ್ಲೆಯವನಾಗಿದ್ದು, ಕಳೆದ 3 ವರ್ಷಗಳಿಂದ ಯುವತಿಯ ಜೊತೆ ಸಂಪರ್ಕ ಇಟ್ಟುಕೊಂಡಿದ್ದ. ಬಸ್ ಕಂಡಕ್ಟರ್ ಆಗಿ ಆತ ಕೆಲಸ ಮಾಡುತ್ತಿದ್ದ. ಮೃತ ಯುವತಿಯು ಅದೇ ಬಸ್ ನಲ್ಲಿ ಪ್ರತಿನಿತ್ಯ ಪ್ರಯಾಣ ಮಾಡುತ್ತಿದ್ದಳು. ಹೀಗಾಗಿ ಇವರಿಬ್ಬರ ನಡುವೆ ಪರಿಚಯ ಬೆಳೆದಿತ್ತು ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಯುವಕ ಕೆಲಸಕ್ಕಾಗಿ ಗುಜರಾತ್ ಗೆ ತೆರಳಿದ್ದ. ಆ ಸಂದರ್ಭದಲ್ಲಿ ಇಬ್ಬರೂ ಫೋನ್ ಮೂಲಕ ಸಂಪರ್ಕ ಹೊಂದಿದ್ದರು. ಬಳಿಕ ಆಕೆ ಆತನ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದಳು. ಇದರಿಂದ ಅಸಮಾಧಾನಗೊಂಡಿದ್ದ ಆತ ಆಕೆಗೂ, ಆಕೆಯ ಪೋಷಕರಿಗೂ ಬೆದರಿಕೆ ಹಾಕಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೊರ್ಬಾ ಠಾಣಾ ಪೊಲೀಸರು, 4 ತಂಡಗಳನ್ನು ರಚಿಸಿ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: Mysuru accident: ಪ್ರಧಾನಿ ಮೋದಿ ಸೋದರನ ಕಾರು ಅಪಘಾತ: ಮೂವರಿಗೆ ಗಾಯ

Lover Murder: 20-Year-Old Woman Stabbed 51 Times and Mouth Was Covered To Muffle Screams

RELATED ARTICLES

Most Popular