Tininga Mininga Tishya Song : ‘ಸಲಗ’ ಸಿನಿಮಾದ ಗಾಯಕಿ ಗೀತಾ ಸಿದ್ಧಿಗೆ ಒಲಿದ ಡಾಕ್ಟರೇಟ್ ಪ್ರಶಸ್ತಿ

ಸ್ಯಾಂಡಲ್‌ವುಡ್‌ “ಸಲಗ” ಸಿನಿಮಾದ ‘ಟಿಣಿಂಗಾ ಮಿಣಿಂಗಾ ಟಿಶ್ಯಾ’ (Tininga Mininga Tishya Song) ಹಾಡು ಹಾಡಿದ್ದ ಸಿದ್ಧಿ ಸಹೋದರಿಯರಲ್ಲಿ ಒಬ್ಬರಾದ ಗೀತಾ ಸಿದ್ಧಿಗೆ ಡಾಕ್ಟರೇಟ್ ಲಭಿಸಿದೆ. ಸಿದ್ಧಿ ಸಮುದಾಯದ ಗೀತಾ ಸಿದ್ಧಿಗೆ ಈ ಡಾಕ್ಟರೇಟ್ ರಂಗಭೂಮಿ ವಿಭಾಗದಲ್ಲಿನ ಮಾಡಿದ ಅಧ್ಯಯನಕ್ಕೆ ದೊರೆತಿದ್ದು, ಈ ಸಾಧನೆ ಮಾಡಿದ ಮೊದಲ ಸಿದ್ಧಿ ಮಹಿಳೆ ಎಂಬ ಖ್ಯಾತಿಗೆ ಗೀತಾ ಸಿದ್ಧಿ ಪಾತ್ರರಾಗಿದ್ದಾರೆ.

ಡಾ ಎಸ್‌.ಎನ್.ಸುಶೀಲಾ ಅವರ ಮಾರ್ಗದರ್ಶನದಲ್ಲಿ ‘ಆಧುನಿಕ ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಸ್ತ್ರೀಲೋಕ’ ಹೆಸರಿನ ಮಹಾಪ್ರಬಂಧಕ್ಕೆ ಬೆಂಗಳೂರು ವಿವಿಯಿಂದ ಡಾಕ್ಟರೇಟ್ ಲಭಿಸಿದೆ. ಅರಣ್ಯವನ್ನೇ ಉಸಿರು ಎಂದು ನಂಬಿಕೊಂಡ ಸಿದ್ದಿ ಸಮುದಾಯ, ಸಮಾಜದಿಂದ ನಿರ್ಲಕ್ಷ್ಯಕ್ಕೆ ಮಾತ್ರವಲ್ಲದೇ, ಸತತ ಅಪಮಾನಕ್ಕೆ ಒಳಗಾಗಿರುತ್ತದೆ. ಆದರೆ ಇಂದು ಅದೇ ಸಮುದಾಯದ ಗೀತಾ ಸಿದ್ಧಿ ಡಾಕ್ಟರೇಟ್ ಪಡೆದಿದ್ದು, ಸಮುದಾಯಕ್ಕೆ ಕೀರ್ತಿ, ಗೌರವ ತಂದಿದ್ದಾರೆ. ಗೀತಾ ಸಿದ್ಧಿಯವರಿಗೆ ಡಾಕ್ಟರೇಟ್ ಬಂದಿರುವುದನ್ನು ಮಾನವತಾವಾದಿಗಳು ಸಂಭ್ರಮಿಸುತ್ತಿದ್ದಾರೆ.

ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿದ್ದ ‘ಸಲಗ’ ಸಿನಿಮಾದ ‘ಟಿಣಿಂಗಾ ಮಿಣಿಂಗಾ ಟಿಶ್ಯಾ’ ಹಾಡನ್ನು ಗೀತಾ ತಮ್ಮ ಸಹೋದರಿಯೊಟ್ಟಿಗೆ ಸೇರಿ ಹಾಡಿದ್ದರು. ಹಾಗೂ ಹಾಡಿನ ವಿಡಿಯೋನಲ್ಲಿಯೂ ಕಾಣಿಸಿಕೊಂಡಿದ್ದರು. ಈ ಹಾಡಿನ ಮೂಲಕ ಸಿದ್ಧಿ ಸಹೋದರಿಯರು ಬಹಳ ಜನಪ್ರಿಯತೆ ಪಡೆದುಕೊಂಡಿದ್ದರು. ಗೀತಾ ಮೊದಲಿನಿಂದಲೂ ಸಾಹಿತ್ಯ, ಜನಪದ ಹಾಗೂ ರಂಗಭೂಮಿಯ ನಿಕಟ ಸಂಪರ್ಕ ಹೊಂದಿದ್ದು, ತಮ್ಮ ಭಾವ, ರಂಗಭೂಮಿ ಕಲಾವಿದ ಚನ್ನಕೇಶವ ಅವರ ನೆರವಿನಿಂದ ರಂಗಭೂಮಿಗೆ ಕಾಲಿಟ್ಟರು.

ಇದನ್ನೂ ಓದಿ : Indian movie industry : 2022 ವರ್ಷದ ಕೊನೆಯ ಶುಕ್ರವಾರ ರಿಲೀಸ್‌ ಆಗುವ ವಿವಿಧ ಇಂಡಸ್ಟ್ರಿಯ ಸಿನಿಮಾ ಯಾವುವು ಗೊತ್ತಾ ?

ಇದನ್ನೂ ಓದಿ : Salman Khan birthday celebration : ಸಲ್ಮಾನ್‌ ಖಾನ್‌ ಬರ್ತಡೆಗೆ ತಡವಾಗಿ ಬಂದ ಶಾರುಖ್‌ ಸಖತ್‌ ವೈರಲ್ ಆಯ್ತು ವಿಡಿಯೋ

ಇದನ್ನೂ ಓದಿ : Ravi Teja Dhamaka movie : ತೆಲುಗು ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆಯುತ್ತಿದೆ ನಟ ರವಿತೇಜ “ಧಮಾಕಾ” ಸಿನಿಮಾ

ತಮ್ಮ ರಂಗಭೂಮಿ ಜೀವನದೊಂದಿಗೆ ಶಿಕ್ಷಣವನ್ನು ಮುಂದುವರೆಸಿದರು. ಗೀತಾ ಸಿದ್ಧಿ ಸುರಾನಾ ಕಾಲೇಜಿನಲ್ಲಿ ಪೊಲಿಟಿಕಲ್ ಸೈನ್ಸ್ ಪದವಿ ಬಳಿಕ ಜ್ಞಾನಭಾರತಿಯಲ್ಲಿ ನಾಟಕಶಾಸ್ತ್ರದಲ್ಲಿ ಎಂಎ ಮುಗಿಸಿದ್ದಾರೆ. ರಂಗಭೂಮಿಯನ್ನೇ ಉಸಿರಾಗಿಸಿಕೊಂಡಿರುವ ಗೀತಾ ಅವರಿಗೆ ಅದರಲ್ಲಿಯೇ ಘನವಾದುದ್ದನ್ನು ಸಾಧಿಸುವ, ತಮ್ಮ ಸಮುದಾಯ ಹಾಗೂ ಇಡೀಯ ಸಮಾಜಕ್ಕೆ ಒಳಿತಾಗುವ ಕಾರ್ಯವನ್ನು ಮಾಡುವಾಸೆ. ಇದರ ಜೊತೆಗೆ ಒಂದು ಪುಸ್ತಕ ಬರೆಯುವ ಆಸೆಯನ್ನೂ ಗೀತಾ ಹೊಂದಿದ್ದಾರೆ.

Tininga Mininga Tishya Song : ‘Salaga’ singer Geeta Siddhi won doctorate award

Comments are closed.