Madhya Pradesh urination case : ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಪ್ರಕರಣ : ಆರೋಪಿಯ ಮನೆ ಧ್ವಂಸ

ಮಧ್ಯಪ್ರದೇಶ : ಆದಿವಾಸಿ ವ್ಯಕ್ತಿಯೋರ್ವನ ಮೇಲೆ ಮೂತ್ರ ವಿಸರ್ಜನೆ (Madhya Pradesh urination case) ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೇಶ್‌ ಶುಕ್ಲಾ ಮನೆ ಧ್ವಂಸಕ್ಕೆ ಮಧ್ಯಪ್ರದೇಶ ಸರಕಾರ ಆದೇಶಿಸಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಬುಲ್ಡೋಜರ್‌ ಬಳಸಿ ಮನೆಯನ್ನು ಸಂಪೂರ್ಣವಾಗಿ ಧ್ವಂಸ ಮಾಡಿದ್ದಾರೆ.

ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಕುಬ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕುಡಿದ ನಶೆಯಲ್ಲಿ ಪ್ರವೇಶ್‌ ಶುಕ್ಲ ಆದಿವಾಸಿ ವ್ಯಕ್ತಿಯೋರ್ವರ ಮೈ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈ ಹಿನ್ನೆಲೆಯಲ್ಲಿ ಪ್ರವೇಶ ಶುಕ್ಲ ವಿರುದ್ದ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ರೇವಾ ಸೆಂಟ್ರಲ್‌ ಜೈಲಿನಲ್ಲಿ ಇರಿಸಲಾಗಿದೆ.

ಇದನ್ನೂ ಓದಿ : Toxic Gas Leak : ಅನಿಲ ಸೋರಿಕೆ 3 ಮಕ್ಕಳು ಸೇರಿದಂತೆ 16 ಮಂದಿ ಸಾವು

ಇದನ್ನೂ ಓದಿ : Bengaluru-Mysuru Expressway : ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಅತಿ ವೇಗದ ಚಾಲನೆ : ಒಂದೇ ದಿನ 44 ಪ್ರಕರಣ ದಾಖಲು

ಘಟನೆಯ ಬೆನ್ನಲ್ಲೇ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಆರೋಪಿಗಳ ವಿರುದ್ದ ತಕ್ಷಣ ಕ್ರಮಕ್ಕೆ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಅಲ್ಲದೇ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಇನ್ನು ಪ್ರವೇಶ್‌ ಶುಕ್ಲಾ ಮನೆಯವರು ಘಟನೆಗೆ ಸಂಬಂಧಿಸಿದಂತೆ ಹೇಳಿಕೆಯನ್ನು ನೀಡಿದ್ದು, ಇದೊಂದು ಹಳೆಯ ವಿಡಿಯೋ, ನನ್ನ ಮಗ ಹೇಗೆ ಮಾಡಲು ಸಾಧ್ಯವಿಲ್ಲ. ಘಟನೆಯಿಂದ ನಮಗೆ ತುಂಬಾ ನೋವಾಗಿದೆ. ಚುನಾವಣೆ ಸಮೀಪಿಸಯತ್ತಿರುವ ಹಿನ್ನೆಲೆಯಲ್ಲಿ ಈ ವಿಡಿಯೋವನ್ನು ಪ್ರಸಾರ ಮಾಡಲಾಗಿದೆ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

Madhya Pradesh urination case : Urination case on a person : Accused’s house destroyed

Comments are closed.