Maharashtra Crime News‌ : ಪತ್ನಿ, ಸೋದರಳಿಯನನ್ನು ರಿವಾಲ್ವರ್‌ನಿಂದ ಶೂಟ್‌ ಮಾಡಿ ಕೊಂದ ಸಹಾಯಕ ಪೊಲೀಸ್ ಕಮಿಷನರ್

ಮಹಾರಾಷ್ಟ್ರ : ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) (Maharashtra Crime News‌) ತನ್ನ ಸರ್ವೀಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ತನ್ನ ಪತ್ನಿ ಮತ್ತು ಸೋದರಳಿಯನನ್ನು ಕೊಂದಿದ್ದಾರೆ. ನಂತರ ಅದೇ ರಿವಾಲ್ವರ್‌ನಿಂದ ತಾನು ಗುಂಡು ಹಾರಿಸಿಕೊಂಡು ಪ್ರಾಣ ಬಿಟ್ಟಿದ್ದಾರೆ.

ಸದ್ಯ ಈ ಆಘಾತಕಾರಿ ಘಟನೆಯು, ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ನಡೆದಿದೆ. ಮೂಲಗಳ ಪ್ರಕಾರ, 57 ವರ್ಷದ ಎಸಿಪಿ ಭರತ್ ಗಾಯಕ್ವಾಡ್ ಅವರು ಪುಣೆಯಲ್ಲಿ ತಮ್ಮ ಪತ್ನಿ ಮೋನಿ (44) ಮತ್ತು ಸೋದರಳಿಯ ದೀಪಕ್ (35) ಮೇಲೆ ಗುಂಡು ಹಾರಿಸಿದ್ದಾರೆ. ಇದರ ಬೆನ್ನಲ್ಲೇ ಅವರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೋಮವಾರ ಬೆಳಗಿನ ಜಾವ 3.30ರ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಗಾಯಕ್ವಾಡ್ ಅವರ ಪತ್ನಿ ತಮ್ಮ ಇಬ್ಬರು ಮಕ್ಕಳೊಂದಿಗೆ ಪುಣೆಯಲ್ಲಿ ವಾಸಿಸುತ್ತಿದ್ದರು. ಗಾಯಕ್ವಾಡ್ ಅವರನ್ನು ಅಮರಾವತಿಯಲ್ಲಿ ಎಸಿಪಿಯಾಗಿ ನಿಯೋಜಿಸಲಾಗಿದ್ದು, ಅವರು ಮನೆಗೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ನಂತರ ಕುಟುಂಬ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಮೂವರನ್ನೂ ಜುಪಿಟರ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

ಇದನ್ನೂ ಓದಿ : Jnanavapi case : ಜ್ಞಾನವಾಪಿ ಪ್ರಕರಣ : ಭಾರೀ ಭದ್ರತೆಯ ನಡುವೆ ವಿವಾದಿತ ಪ್ರದೇಶ ಹೊರತುಪಡಿಸಿ ನಿವೇಶನಗಳ ಸರ್ವೆ ಆರಂಭಿಸಿದ ಎಎಸ್‌ಐ

ಇದನ್ನೂ ಓದಿ : Mumbai Crime News : ಚಲಿಸುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರಿಗೆ ಬೆಂಕಿ : ಪ್ರಾಣಾಪಾಯದಿಂದ ಪಾರಾದ ಚಾಲಕ

ಘಟನೆಯ ಹಿಂದಿನ ಕಾರಣ ಇನ್ನೂ ಪತ್ತೆಯಾಗದ ಕಾರಣ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಗಾಯಕ್ವಾಡ್ ಅವರು ತಮ್ಮ ಪರವಾನಗಿ ಹೊಂದಿರುವ ರಿವಾಲ್ವರ್ ಅಥವಾ ಸರ್ವಿಸ್ ರಿವಾಲ್ವರ್ ಅನ್ನು ಬಳಸಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

Maharashtra Crime News : Assistant Commissioner of Police shot dead wife, nephew with revolver

Comments are closed.