Malpe Beach : ಮೀನುಗಾರಿಕಾ ಬೋಟ್ ಮುಳುಗಡೆ : ನಾಲ್ವರು ಮೀನುಗಾರರ ರಕ್ಷಣೆ

ಉಡುಪಿ : Malpe Beach : ಕರಾವಳಿ ಪ್ರದೇಶದಲ್ಲಿ ವಾಸಿಸುವ ಜನರ ಜೀವಾಳವೇ ಮೀನುಗಾರಿಕೆ ಆಗಿದೆ. ತಮ್ಮ ಜೀವದ ಹಂಗನ್ನು ತೊರೆದು ಆಳ ಸಮುದ್ರಕ್ಕೆ ಮೀನುಗಾರಿಕೆಗೆಂದು ತೆರಳಿದ್ದಾಗ ಬೋಟ್‌ವೊಂದು ಅಲೆಗಳ ಅಬ್ಬರಕ್ಕೆ ಸಿಲುಕಿ ಮುಳುಗಡೆಯಾಗಿದೆ. ಆದರೆ ಬೋಟ್‌ನಲ್ಲಿದ್ದ ನಾಲ್ವರು ಮೀನುಗಾರರ ರಕ್ಷಣೆ ಮಾಡಲಾಗಿದೆ

ಮಂಗಳೂರು ಮೂಲದ ಜೈಸನ್‌ ಲೋಬೋ ಮಾಲಿಕತ್ವದ ಕ್ವೀನ್‌ ಮೇರಿ ಹೆಸರಿನ ಬೋಟ್‌ ಮಂಗಳೂರಿನ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿತ್ತು. ಮೀನುಗಾರಿಕೆ ನಡೆಸಿ ಮಂಗಳೂರಿನತ್ತ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಪ್ರತಿಕೂಲ ಹವಾಮಾನ ಇದ್ದರಿಂದ ಬೋಟ್‌ನ್ನು ಮಲ್ಪೆ ಕಡೆ ತಿರುಗಿಸಲಾಗತ್ತು. ಈ ಸಂದರ್ಭದಲ್ಲಿ ನೀರಿನ ಮಧ್ಯೆ ಇದ್ದ ಬಂಡೆಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಬೋಟ್‌ ನೀರಿನಲ್ಲಿ ಮುಳುಗಿದೆ.

ಇದನ್ನೂ ಓದಿ : Heavy Rainfall Alert : ಮುಂದಿನ 5 ದಿನಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಸಾಧ್ಯತೆ

ಇದನ್ನೂ ಓದಿ : Maravante Beach : ಮರವಂತೆ ಬೀಚ್‌ನಲ್ಲಿ ಯುವಕ ನೀರುಪಾಲು : ಪ್ರವಾಸಿಗರ ನಿರ್ಲಕ್ಷ್ಯಕ್ಕೆ ಬೀಳುತ್ತಿಲ್ಲ ಬ್ರೇಕ್‌

ಆ ಸಂದರ್ಭದಲ್ಲಿ ಬೋಟ್‌ ಪಕ್ಕದಲ್ಲಿ ಇನ್ನೊಂದು ದೋಣಿ ಇದ್ದರಿಂದ, ಅದರಲ್ಲಿದ್ದ ನಾಲ್ವರು ಮೀನುಗಾರರ ರಕ್ಷಣೆಗೆ ಈಶ್ವರ್‌ ಮಲ್ಪೆ ಎನ್ನುವರು ರಕ್ಷಣೆ ಮಾಡಿದ್ದಾರೆ. ಸುಮಾರು 5 ಲಕ್ಷ ರೂ. ಗಳಷ್ಟು ಮೀನು ಮತ್ತು ಬೋಟ್‌ ಸೇರಿ ಒಟ್ಟು 15 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

Malpe Beach : Fishing Boat Sinking : Four Fishermen Rescued

Comments are closed.