ದೆಹಲಿ : Man Shoots Girlfriend : ಪ್ರೀತಿಸಿದ ಮಹಿಳೆ ಬ್ರೇಕಪ್ ಮಾಡಿಕೊಂಡಳು ಎಂಬ ಕಾರಣಕ್ಕೆ ಆಕೆಯನ್ನು ಗುಂಡಿಕ್ಕಿ ಕೊಂದಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಂಧನಕ್ಕೊಳಗಾಗುವ ಮುನ್ನ ಪೊಲೀಸರಿಂದ ತಪ್ಪಿಸಿಕೊಳ್ಳಲು ಈತ ಸಾಕಷ್ಟು ಹೋಟೆಲ್ಗಳಲ್ಲಿ ತಲೆ ಮರೆಸಿಕೊಂಡಿದ್ದ ಎನ್ನಲಾಗಿದೆ. ರೋಹೊತ್ ಗುಪ್ತಾ ಅಲಿಯಾಸ್ ಸೋನು (29) ಎಂದು ಗುರುತಿಸಲಾದ ಆರೋಪಿಯು ಸಲ್ಮಾಳೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ 28ರಂದು ಭರತ್ನಗರ ಪ್ರದೇಶದಲ್ಲಿ ಮಹಿಳೆಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ ಎಂಬ ಮಾಹಿತಿಯು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಸ್ಥಳಕ್ಕಾಗಮಿಸಿದ ಪೊಲೀಸ್ ತಂಡಕ್ಕೆ ಗುಂಡೇಟಿನಿಂದ ಗಾಯಗೊಂಡಿದ್ದ ಮಹಿಳೆಯೊಬ್ಬಳ ಶವ ಪತ್ತೆಯಾಗಿತ್ತು. ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಘೋಷಿಸಿದ್ದರು. ಮೃತ ಮಹಿಳೆಯನ್ನು 45 ವರ್ಷದ ಸಲ್ಮಾ ಎಂದು ಗುರುತಿಸಲಾಗಿದೆ.
ಅಪರಾಧ ನಡೆದ ಸ್ಥಳದಿಂದ ಮೂರು ಖಾಲಿ ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡ ನಂತರ, ಪೊಲೀಸರು ಭಾರತೀಯ ದಂಡ ಸಂಹಿತೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ ಆರೋಪಿಯು ಮೃತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದು ಮಹಿಳೆಯು ಬ್ರೇಕಪ್ ಮಾಡಿಕೊಂಡ ಬಳಿಕ ಹತಾಶೆಗೊಂಡ ವ್ಯಕ್ತಿಯು ಕೊಲೆ ಮಾಡಲು ನಿರ್ಧರಿಸಿದ್ದ ಎನ್ನಲಾಗಿದೆ. ಅಪರಾಧ ಎಸಗಿದ ಬಳಿಕ ಬೇರೆ ಬೇರೆ ಹೋಟೆಲ್ಗಳಲ್ಲಿ ತಲೆಮರೆಸಿಕೊಂಡಿದ್ದ . ಪೊಲೀಸರ ಬಂಧನದಿಂದ ಪಾರಾಗಲು ಈತ ಪದೇ ಪದೇ ಸ್ಥಳ ಬದಲಾವಣೆ ಮಾಡುತ್ತಿದ್ದ ಎನ್ನಲಾಗಿದೆ.
ಆರೋಪಿಯು ದಿನಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಹಾಗೂ ವೈವಾಹಿಕ ಕಲಹವನ್ನೂ ಹೊಂದಿದ್ದ ಎನ್ನಲಾಗಿದೆ. ಈತ ಅಪರಾಧಕ್ಕೆ ಬಳಕೆ ಮಾಡಿದ ಪಿಸ್ತೂಲ್ನ್ನು ಕಾಲುವೆಗೆ ಎಸೆದಿದ್ದಾನೆ ಎಂದು ಪೊಲೀಸ್ ಅಧಿಕಾರಿ ಗುಪ್ತಾ ಹೇಳಿದ್ದಾರೆ.
ಇದನ್ನು ಓದಿ : T20 World Cup 2022: ನಾಳೆ ಭಾರತ Vs ದಕ್ಷಿಣ ಆಫ್ರಿಕಾ ಮ್ಯಾಚ್, ಕನ್ನಡಿಗ ರಾಹುಲ್‌ಗೆ ಮತ್ತೊಂದು ಅಗ್ನಿಪರೀಕ್ಷೆ
ಇದನ್ನೂ ಓದಿ :KL Rahul : ದಕ್ಷಿಣ ಆಫ್ರಿಕಾ ವಿರುದ್ಧ ರಾಹುಲ್ ಆಡಲ್ವಾ? ಬಿಗ್ ಅಪ್‌ಡೇಟ್ ಕೊಟ್ಟ ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್
Man Shoots Girlfriend Dead After She Breaks Up With Him; Accused Arrested