Kiara Advani : ‘ಮದುವೆಯಾಗದೆಯೂ ಖುಷಿಯಾಗಿರಬಹುದು’ : ವಿವಾಹದ ಬಗ್ಗೆ ಕೇಳಿದ ಪ್ರಶ್ನೆಗೆ ನಟಿ ಕಿಯಾರಾ ಖಡಕ್​ ಉತ್ತರ

Kiara Advani : ಬಾಲಿವುಡ್​ನಲ್ಲಿ ಕಬೀರ್​ ಸಿಂಗ್​, ಶೇರ್​ ಷಾಗಳಂತಹ ಹಿಟ್​ ಸಿನಿಮಾಗಳನ್ನು ನೀಡಿರುವ ನಟಿ ಕಿಯಾರಾ ಅಡ್ವಾಣಿ ಸದ್ಯ ತಮ್ಮ ಮುಂಬರುವ ಸಿನಿಮಾ ಜುಗ್​ಜುಗ್​ ಜಿಯೋದ ಪ್ರಮೋಷನ್​ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಟ್ರೇಲರ್​ ಲಾಂಚ್​ ಸಮಾರಂಭದಲ್ಲಿ ನಟಿ ಕಿಯಾರಾ ಕಾಣಿಸಿಕೊಂಡರು. ಮದುವೆ ಹಾಗೂ ವಿಚ್ಛೇದನಕ್ಕೆ ಸಂಬಂಧಿಸಿದ ಸಿನಿಮಾ ಇದಾಗಿದ್ದು ಈ ಸಿನಿಮಾದ ಟ್ರೇಲರ್​ ಲಾಂಚ್​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾಧ್ಯಮದವರು ಕಿಯಾರಾ ಎದುರು ಮದುವೆ ಸುದ್ದಿಯನ್ನು ಎತ್ತಿದ್ದಾರೆ.

ಅಂದಹಾಗೆ ಕಳೆದ ಕೆಲವು ವರ್ಷಗಳಿಂದ ನಟಿ ಕಿಯಾರಾ ಅಡ್ವಾಣಿ ನಟ ಸಿದ್ಧಾರ್ಥ್​ ಮಲ್ಹೋತ್ರಾ ಜೊತೆಯಲ್ಲಿ ಡೇಟಿಂಗ್​ನಲ್ಲಿದ್ದಾರೆ ಎಂಬ ಸುದ್ದಿ ಬಿ ಟೌನ್​ನಲ್ಲಿ ಹರಿದಾಡುತ್ತಿದೆ.


ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪತ್ರಕರ್ತರೊಬ್ಬರು ನಟಿ ಕಿಯಾರಾ ಬಳಿಯಲ್ಲಿ ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಕಿಯಾರಾ ಅಡ್ವಾಣಿ, ಮದುವೆಯಾಗಿದೆಯೂ ನಾನು ಸೆಟಲ್​ ಆಗಬಹುದು ಅಲ್ವಾ? ನಾನು ಈಗಲೇ ಸೆಟಲ್​ ಆಗಿದ್ದೇನೆ. ನಾನು ಕೆಲಸ ಮಾಡುತ್ತೇನೆ, ಸಂಪಾದನೆ ಮಾಡುತ್ತಿದ್ದೇನೆ ಜೊತೆಯಲ್ಲಿ ಖುಷಿಯಾಗಿಯೂ ಇದ್ದೇನೆ ಎಂದು ಹೇಳಿದರು.


ಕೆಲವು ವಾರಗಳ ಹಿಂದೆ ಸೋಶಿಯಲ್​ ಮೀಡಿಯಾಗಳಲ್ಲಿ ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್​ ಮಲ್ಹೋತ್ರಾ ದೂರಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ನೀಡದ ಈ ಜೋಡಿ ಸೋಶಿಯಲ್​ ಮೀಡಿಯಾದಲ್ಲಿ ಪರಸ್ಪರರ ಫೋಟೋಗಳಿಗೆ ಲೈಕ್ಸ್​ ನೀಡುತ್ತಾ ಸಾರ್ವಜನಿಕವಾಗಿಯೂ ಕಾಣಿಸಿಕೊಂಡ ಬಳಿಕ ಅಭಿಮಾನಿಗಳಿಗೆ ಇವರಿಬ್ಬರ ನಡುವೆ ಎಲ್ಲವೂ ಸರಿಯಾಗಿದೆ ಎಂಬ ಭಾವನೆ ಮೂಡುವಂತೆ ಮಾಡಿದ್ದಾರೆ.


ಕಳೆದ ಅನೇಕ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿರುವ ಈ ಜೋಡಿ ತಮ್ಮ ಸಂಬಂಧದದ ಬಗ್ಗೆ ಸಾರ್ವಜನಿಕವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ಇಬ್ಬರು ಆಗಾಗ ಜೋಡಿಯಾಗಿ ಕಾಣಿಸಿಕೊಳ್ತಿರ್ತಾರೆ.
ಅಂದಹಾಗೆ ಕಿಯಾರಾ ಅಡ್ವಾಣಿಯವರ ಮುಂದಿನ ಸಿನಿಮಾ ಜುಗ್​ ಜುಗ್​ ಜಿಯೋದ ಟ್ರೇಲರ್​ ಲಾಂಚ್​ ಆಗಿದೆ. ಈ ಸಿನಿಮಾದಲ್ಲಿ ನೀತು ಕಪೂರ್​, ಅನಿಲ್​ ಕಪೂರ್​ , ವರುಣ್​ ಧವನ್​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನು ಓದಿ : IPL Star ಅಪ್ಪಾ ಕ್ಷೌರಿಕ ಮಗ ಐಪಿಎಲ್ ಸ್ಟಾರ್!

ಇದನ್ನೂ ಓದಿ : Sunny Leone Autograph : ಅಭಿಮಾನಿ ಎದೆಮೇಲೆ ಸನ್ನಿ ಲಿಯೋನ್ ಆಟೋಗ್ರಾಫ್ : ಮಳೆ ಚಳಿಗೆ ಬಿಸಿ ಏರಿಸಿದ ಮಾದಕ ನಟಿ

Kiara Advani REACTS to question on marriage plans: ‘I am well-settled’

Comments are closed.