Mandya KSRTC Bus accident: ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಕೆ.ಎಸ್.ಆರ್.ಟಿ.ಸಿ ಬಸ್

ಮಂಡ್ಯ: (Mandya KSRTC Bus accident) ಚಾಲಕನ ನಿಯಂತ್ರಣ ತಪ್ಪಿದ ಕೆಎಸ್‌ ಆರ್‌ ಟಿಸಿ ಬಸ್‌ ಒಂದು ಗದ್ದೆಗೆ ಉರುಳಿ ಬಿದ್ದಿದ್ದು, ಬಸ್‌ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಮುರುಕನಹಳ್ಳಿ ಗ್ರಾಮದ ಬಳಿಯಲ್ಲಿ ನಡೆದಿದೆ. ಗಾಯಾಳುಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಮೈಸೂರಿಗೆ ತೆರಳುತ್ತಿದ್ದ ಮಾರ್ಗ ಮಧ್ಯದಲ್ಲಿ ಘಟನೆ (Mandya KSRTC Bus accident) ನಡೆದಿದ್ದು, KA09 F 5282 ನಂಬರಿನ ಕೆಎಸ್‌ ಆರ್‌ ಟಿ ಸಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿ ಬಿದ್ದಿದೆ. ಪರಿಣಾಮ ಬಸ್‌ ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಬಸ್‌ ನಲ್ಲಿ 30 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಸದ್ಯ ಸಣ್ಣಪುಟ್ಟ ಗಾಯಗಳ ಹೊರತು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇನ್ನೂ ಘಟನೆಯಲ್ಲಿ ಗಾಯಗೊಂಡ ಪ್ರಯಾಣಿಕರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ.

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನೆಯ ಕುರಿತು ಪ್ರಕರಣ ದಾಖಲಾಗಿದೆ.

ಕ್ಯಾಂಟಿನ್‌ ನಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟ

ಮುಲ್ಕಿ: ಕ್ಯಾಂಟಿನ್ ಒಂದರಲ್ಲಿ ಅಡುಗೆ ಗ್ಯಾಸ್‌ ಸಿಲಿಂಡರ್‌ ಸ್ಪೋಟಗೊಂಡಿರುವ ಘಟನೆ ಮೂಲ್ಕಿಯ ಕಾರ್ನಾಡು ಮೀನು ಮಾರುಕಟ್ಟೆ ಬಳಿಯಲ್ಲಿ ನಡೆದಿದೆ. ಸದ್ಯ ಸ್ಫೋಟದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿದ ಮಾಹಿತಿಗಳು ಲಭ್ಯವಾಗಿಲ್ಲ.

ಇದನ್ನೂ ಓದಿ : US crime : ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ : 5 ಮಕ್ಕಳು ಸೇರಿ, 7 ಮಂದಿಗೆ ಗುಂಡಿಕ್ಕಿ ತಾನು ಆತ್ಮಹತ್ಯೆ ಮಾಡಿಕೊಂಡ ಪತಿ

ಇದನ್ನೂ ಓದಿ : 2 Month baby died: ಕಪಿಚೇಷ್ಟೆಗೆ ಹಾರಿಹೊಯ್ತು ಹಸುಳೆಯ ಪ್ರಾಣ : ಮಹಡಿಯಿಂದ ಮಗುವನ್ನು ಎಸೆದ ವಾನರ ಸೈನ್ಯ

ಇದನ್ನೂ ಓದಿ : Belagavi Accident-6 died: ಪಾದಯಾತ್ರೆಗಳ ಪಾಲಿಗೆ ಯಮನಂತೆ ಬಂದ ಬೊಲೆರೊ : ಯಲ್ಲಮ್ಮನ ದರ್ಶನಕ್ಕೆ ಹೊರಟಿದ್ದ 6 ಮಂದಿ ಸಾವು

ಘಟನೆಯ ಬಳಿಕ ಸ್ಥಳೀಯರು ಬೆಂಕಿ ನಂದಿಸುವ ಕಾರ್ಯ ನಡೆಸಿದ್ದು, ಮುಲ್ಕಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

KSRTC bus number KA09 F 5282 lost control of the driver and fell into the field. As a result, the passengers in the bus suffered minor injuries.

Comments are closed.