Abhishek Reddy : ಕರ್ನಾಟಕ ತಂಡದಲ್ಲಿ ಸಿಗದ ಅವಕಾಶ, ಆಂಧ್ರ ಪ್ರದೇಶ ಪರ ಆಡುತ್ತಿದ್ದಾನೆ ಕನ್ನಡಿಗ

ಹೈದರಾಬಾದ್: ಕರ್ನಾಟಕದ ಹಲವಾರು ಕ್ರಿಕೆಟಿಗರು ಇಲ್ಲಿ ಅವಕಾಶ ಸಿಗದೆ ಬೇರೆ ರಾಜ್ಯಗಳ ಪರ ಆಡುವುದು ಸಾಮಾನ್ಯ. 90ರ ದಶಕದಿಂದಲೂ ಕರ್ನಾಟಕ ತಂಡದಲ್ಲಿ ಅವಕಾಶ ವಂಚಿತರಾಗುತ್ತಿರುವ ಆಟಗಾರರು ಹೊರ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ಆ ಸಾಲಿಗೆ ಹೊಸ ಸೇರ್ಪಡೆ ಕರ್ನಾಟಕದ ಬಲಗೈ ಆರಂಭಿಕ ಬ್ಯಾಟ್ಸ್’ಮನ್ ಆಗಿದ್ದ ಅಭಿಷೇಕ್ ರೆಡ್ಡಿ (Abhishek Reddy).

ಮೂಲತಃ ಬೀದರ್’ನವರಾದ ಅಭಿಷೇಕ್ ರೆಡ್ಡಿ ಕರ್ನಾಟಕ ಪರ ಪ್ರಥಮದರ್ಜೆ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. ಕರ್ನಾಟಕ ಪರ ಕೆಲ ರಣಜಿ ಪಂದ್ಯಗಳನ್ನೂ (Ranji Trophy) ಆಡಿದ್ದರು. ಆದರೆ ನಂತರ ರಾಜ್ಯ ತಂಡದಲ್ಲಿ ಅವಕಾಶ ಕಡಿಮೆಯಾದ ಕಾರಣ, ಇದೀಗ ಪ್ರಸಕ್ತ ದೇಶೀಯ ಕ್ರಿಕೆಟ್ ಋತುವಿನಲ್ಲಿ ಆಂಧ್ರಪ್ರದೇಶ ತಂಡದ ಪರ ಆಡುತ್ತಿದ್ದಾರೆ.ಕಳೆದ ತಿಂಗಳು ಕೊಯಂಬತ್ತೂರಿನಲ್ಲಿ ನಡೆದ ತಮಿಳುನಾಡು ವಿರುದ್ಧದ ಪಂದ್ಯದ ಮೂಲಕ ಆಂಧ್ರ ಪರ ಮೊದಲ ರಣಜಿ ಪಂದ್ಯವಾಡದ್ದ ಅಭಿಷೇಕ್ ರೆಡ್ಡಿ, ಪ್ರಥಮ ಇನ್ನಿಂಗ್ಸ್’ನಲ್ಲಿ ಆಕರ್ಷಕ 85 ರನ್ ಗಳಿಸಿದ್ದರು. ಆ ಪಂದ್ಯವನ್ನು ಆಂಧ್ರ 8 ರನ್’ಗಳಿಂದ ರೋಚಕವಾಗಿ ಗೆದ್ದುಕೊಂಡಿತ್ತು.

ಇದೀಗ ವಿಜಯನಗರಂನಲ್ಲಿ ನಡೆಯುತ್ತಿರುವ ಹೈದರಾಬಾದ್ ವಿರುದ್ಧದ ಪಂದ್ಯದಲ್ಲೂ ಮಿಂಚಿರುವ 28 ವರ್ಷದ ಅಭಿಷೇಕ್ ರೆಡ್ಡಿ ಪ್ರಥಮ ಇನ್ನಿಂಗ್ಸ್’ನಲ್ಲಿ ಆಂಧ್ರ ಬ್ಯಾಟ್ಸ್’ಮನ್’ಗಳ ದಯನೀಯ ವೈಫಲ್ಯದ ಮಧ್ಯೆ ಏಕಾಂಗಿ ಹೋರಾಟ ನಡೆಸಿ 81 ರನ್ ಗಳಿಸಿದ್ದರು. ವಿಜಯ ಹಜಾರೆ ಟ್ರೋಫಿ ಟೂರ್ನಿಯಲ್ಲೂ ಆಂಧ್ರಪ್ರದೇಶ ಪರ ಮಿಂಚಿದ್ದ ಅಭಿಷೇಕ್ ರೆಡ್ಡಿ ಬೆಂಗಳೂರಿನ ಆಲೂರಿನಲ್ಲಿರುವ KSCA ಮೈದಾನದಲ್ಲಿ ನಡೆದ ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ 136 ರನ್ ಸಿಡಿಸಿದ್ದರು. ತಮಿಳುನಾಡು ವಿರುದ್ಧ ನಡೆದ ಪಂದ್ಯದಲ್ಲಿ 85 ರನ್ ಬಾರಿಸಿ ಅಬ್ಬರಿಸಿದ್ದರು.

ಇದನ್ನೂ ಓದಿ : Virat Kohli in Baba ashram : ಮಥುರಾ ವೃಂದಾವನ ಧಾಮದಲ್ಲಿ ಕಿಂಗ್ ಕೊಹ್ಲಿ; ಪತ್ನಿ, ಪುತ್ರಿಯೊಂದಿಗೆ ಬಾಬಾ ಆಶೀರ್ವಾದ ಪಡೆದ ವಿರಾಟ್

ಇದನ್ನೂ ಓದಿ : Hardik Pandya Amit Shah: ಅಮಿತ್ ಶಾ ಜೊತೆ ಫೋಟೋ, ಸುಳ್ಳು ಹೇಳಿ ಸಿಕ್ಕಿ ಬಿದ್ದ ಚಾಲಾಕಿ ಪಾಂಡ್ಯ

ಇದನ್ನೂ ಓದಿ : Delhi Capital new Captain: ಕನ್ನಡಿಗ ಮನೀಶ್ ಪಾಂಡೆಗೆ ಒಲಿಯುತ್ತಾ ಡೆಲ್ಲಿ ಕ್ಯಾಪ್ಟನ್ ಪಟ್ಟ? ಈ ಮೂವರಲ್ಲಿ ಯಾರು ಹೊಸ ನಾಯಕ?

ಬಲಗೈ ಓಪನರ್ ಅಭಿಷೇಕ್ ರೆಡ್ಡಿ ಕರ್ನಾಟಕ ರಣಜಿ ತಂಡ, ಕರ್ನಾಟಕ 25 ವರ್ಷದೊಳಗಿನವರ ತಂಡ, ಕರ್ನಾಟಕ ಅಂಡರ್-19, ಅಂಡರ್-16 ತಂಡಗಳ ಪರ ಆಡಿದ್ದಾರೆ. ಅಷ್ಟೇ ಕರ್ನಾಟಕ ಪ್ರೀಮಿಯರ್ ಲೀಗ್’ನಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ.ಪ್ರಥಮದರ್ಜೆ ಕ್ರಿಕೆಟ್’ನಲ್ಲಿ 10 ಪಂದ್ಯಗಳನ್ನಾಡಿರುವ ಅಭಿಷೇಕ್ ರೆಡ್ಡಿ 51ರ ಉತ್ತಮ ಸರಾಸರಿಯಲ್ಲಿ 3 ಅರ್ಧಶತಕಗಳ ಸಹಿತ 507 ರನ್ ಕಲೆ ಹಾಕಿದ್ದಾರೆ. 14 ಲಿಸ್ಟ್ ‘ಎ’ ಪಂದ್ಯಗಳನ್ನಾಡಿರುವ ರೆಡ್ಡಿ 33.14ರ ಸರಾಸರಿಯಲ್ಲಿ 1 ಶತಕ ಹಾಗೂ ಒಂದು ಅರ್ಧಶತಕದ ನೆರವಿನಿಂದ 464 ರನ್ ಗಳಿಸಿದ್ದಾರೆ.

Abhishek Reddy: The Kannadiga is playing for Andhra Pradesh, a chance he didn’t get in the Karnataka team

Comments are closed.